ಗೊರೂರು ಶಿವೇಶ್ ಕಂಡಂತೆ ‘ಕಾಸಿನ ಸರ’

ಕಾಸಿನ ಸರ: ಸಾಂಪ್ರದಾಯಿಕ ಕೃಷಿಗೆ ಹಾರ

ಗೊರೂರು ಶಿವೇಶ್

ಕಾಸಿನ ಸರ ಚಿತ್ರದ ಹೆಸರು ಕೇಳಿದೊಡನೆ ತಟ್ಟನೆ ನನಗೆ ನೆನಪಿಗೆ ಬಂದದ್ದು ಚೋಮನ ದುಡಿಯ ಸ್ವಂತ ಜಮೀನಿಗಾಗಿ ಹಂಬಲಿಸುವ ಚೋಮ  ಹಾಗೂ ಇತ್ತೀಚಿಗೆ ನಾನು ನೋಡಿದ ನಾಟಕ ಹಾಡ್ಳಹಳ್ಳಿ ನಾಗರಾಜ್  ನಿಲುವಂಗಿಯ ಕನಸು ವಿನಲ್ಲಿ ನೈಟಿ ತೊಡುವ ಕನಸು  ಕಾಣುವ ರೈತಾಪಿ ಮಹಿಳೆಯ ಬದುಕು   ಬವಣೆಗಳನ್ನು ಹೇಳುತ್ತದೆ. ಆದರೆ  ಈ ಚಿತ್ರದಲ್ಲಿ ಕಾಸಿನ ಸರವನ್ನು ಒಂದು ರೂಪಕವನ್ನಾಗಿ ಬಳಸಿಕೊಂಡು  ಆಧುನಿಕ ಕೃಷಿ ಪದ್ಧತಿಯ ಎದುರು ಶತಶತಮಾನಗಳಿಂದಲೂ ನಮ್ಮ ರೈತರು ರೂಢಿಸಿಕೊಂಡಿರುವ ಸಾಂಪ್ರದಾಯಿಕ ಕೃಷಿ ಶೈಲಿಯು ಪ್ರಾಮುಖ್ಯತೆಯ ಬಗ್ಗೆ ಮನವರಿಕೆ ಮಾಡಿಕೊಡುವ ಯತ್ನ  ಮಾಡಲಾಗಿದೆ .

ಕಾಸಿನ ಸರ ಎಂಬುದು ಹಳೆ ಮೈಸೂರು ಪ್ರಾಂತ್ಯದ ಹೆಂಗಸರ ಕಂಠಾಭರಣ. ಮೊನ್ನೆ ಮೊನ್ನೆವರೆಗೂ ವರದಕ್ಷಿಣೆ ಅಥವಾ ವಧು ದಕ್ಷಿಣೆ ರೂಪದಲ್ಲಿ  ಇಷ್ಟು ಕಾಸು ಇಷ್ಟು ಗುಂಡು  ಎಂದು ಲೆಕ್ಕಾಚಾರ ಮಾಡಿ ಒಂದಕ್ಕೆ ಒಂದು ಪೋಣಿಸಿ ನೀಡಿದ ಕಂಠಾಭರಣವೂ ಪೀಳಿಗೆಯಿಂದ ಪೀಳಿಗೆಗೆ  ಅತ್ತೆಯಿಂದ ಸೊಸೆಗೆ ಕೆಲವೊಮ್ಮೆ ಹೆಣ್ಣು ಮಕ್ಕಳಿಗೆ ವರ್ಗಾವಣೆಯಾಗುವ ಆಸ್ತಿಯೂ  ಹೌದು. ಈಗ ಅವುಗಳ ಸ್ಥಾನದಲ್ಲಿ ನೆಕ್ಲೆಸ್ ಬಂದಿದೆಯಾದರೂ ಕಾಸಿನ ಸರದ ಘನತೆ ಅದಕ್ಕಿಲ್ಲ. 

ಅಂತೇಯೇ ಆಧುನಿಕ ಕೃಷಿ ಪದ್ಧತಿಯಲ್ಲಿ  ಹೈಬ್ರಿಡ್ ಬೀಜ, ರಾಸಾಯನಿಕ ಗೊಬ್ಬರ, ಕೀಟ ನಾಶಕಗಳ ಮೂಲಕ ಇಳುವರಿಯನ್ನು ಹೆಚ್ಚು ಮಾಡುವ ಪ್ರಯತ್ನ ದೊಡ್ಡ ಪ್ರಮಾಣದಲ್ಲಿ ಸಾಗಿ ಈಗ ಬಹುತೇಕ ರೈತರು ಅದನ್ನೇ ಅವಲಂಬಿಸಿರುವ ಸಂದರ್ಭದಲ್ಲಿ  ಅದು ಭೂಮಿಯನ್ನು ಬಂಜರು ಮಾಡುತ್ತಿರುವ ಅಂಶವನ್ನು ವಿಷಾಹಾರವನ್ನು ಜನರಿಗೆ ಉಣಬಡಿಸುತ್ತಿರುವುದನ್ನು ಪ್ರತಿಪಾದಿಸುತ್ತಾ ಸಾಂಪ್ರದಾಯಿಕ ಸಹಜ ಕೃಷಿಯತ್ತ ರೈತರನ್ನು ಮುಖ ಮಾಡುವ ಯತ್ನವಾಗಿ ಈ ಚಿತ್ರ ಮೂಡಿ ಬಂದಿದೆ.

ಚಿತ್ರದ ನಾಯಕ ಸುಂದರೇಶ ಕೃಷಿ ವಿಜ್ಞಾನದಲ್ಲಿ 8 ಚಿನ್ನದ ಪದಕಗಳನ್ನು ಪಡೆದು ಊರಿಗೆ ಬಂದು ನೆಲೆ ನಿಂತು ಆಧುನಿಕ ಕೃಷಿ ಪದ್ಧತಿಯನ್ನು ತೊರೆದು ಸಾಂಪ್ರದಾಯಿಕ ಕೃಷಿ ಪದ್ಧತಿಯ ಜಮೀನಿನಲ್ಲಿ ಅಳವಡಿಸಿಕೊಳ್ಳಲು ಹೊರಟಾಗ ಅವನಿಗೆ ಎದುರಾಗುವ ಸಮಸ್ಯೆಗಳು, ಆ ಸಮಸ್ಯೆಗಳ ಹಿನ್ನೆಲೆಯಲ್ಲಿ ರೈತರು ಎದುರಿಸುತ್ತಿರುವ ಕೆಲವು ಕೃಷಿ ಬಿಕಟ್ಟುಗಳನ್ನು ನಿರ್ದೇಶಕ ಎಸ್ ಆರ್ ನಂಜುಂಡೇಗೌಡ ಈ ಚಿತ್ರದಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. ಸಂಕ್ರಾಂತಿ ಚಿತ್ರದ ಮೂಲಕ 80ರ ದಶಕದ ರೈತರ  ಜೀವನ,  ಕೃಷಿಕ ಮಹಿಳೆಯ ಪರಿಸ್ಥಿತಿ, ನಿಧಾನವಾಗಿ ಹಳ್ಳಿಗಳನ್ನು ಆಕ್ರಮಿಸುತ್ತಿರುವ ಆಧುನಿಕತೆಯ ದುಷ್ಪರಿಣಾಮಗಳನ್ನು ಪರಿಣಾಮಕಾರಿಯಾಗಿ  ಚಿತ್ರಿಸಿ ಸಂಕ್ರಾಂತಿ ನಂಜುಂಡೇಗೌಡ ಎಂದು ಹೆಸರಾದ ಅವರಿಗೆ ಈಗ ಬಹು ರಾಷ್ಟ್ರೀಯ ಕಂಪನಿಗಳು ಜಮೀನನ್ನು ಗುತ್ತಿಗೆ ಪಡೆದು ರೈತರ ಶೋಷಣೆಗೆ ಕಾರಣವಾಗುತ್ತಿರುವ ಅಂಶದ ಜೊತೆಗೆ ಬಹುತೇಕ ಸಣ್ಣ ರೈತರು ತಮ್ಮ ಕೃಷಿಯನ್ನು ತ್ಯಜಿಸಿ ನಗರಗಳಿಗೆ ಹೋಗಿ ವಾಚ್ಮನ್ ಗಳಂತಹ ಸ್ತ್ರೀಯರು ಗಾರ್ಮೆಂಟ್ಸ್ ಗಳಲ್ಲಿ ಉದ್ಯೋಗ ಅರಸೀ ಹೋಗುತ್ತಿರುವ ಮಹಿಳೆಯರಿಗೆ ಕೃಷಿಯಲ್ಲಿ ಲಾಭವಿದೆ ಎಂಬ ಅಂಶವನ್ನು ಮನದಟ್ಟು ಮಾಡುವ ಪ್ರಯತ್ನವು ಇದೆ. 

ಕೃಷಿ ಸಮಸ್ಯೆಗಳನ್ನು ಮೂಲವಾಗಿ ಹೇಳಲು ಹೊರಟ ನಿರ್ದೇಶಕರು ಇದಕ್ಕಾಗಿ ಕೌಟುಂಬಿಕ ಹಿನ್ನೆಲೆಯ ಪರಿಸರವನ್ನು ಕಲ್ಪಿಸಿದರಾದರೂ ಅದು ಈಗಾಗಲೇ  ಹಲವಾರು ಚಿತ್ರಗಳಲ್ಲಿ ಬಂದಿರುವ ಮತ್ತು ಈಗಲೂ ಪ್ರಸ್ತುತವಾಗಿರುವ ಪಾಲು ಪಾರಿಕತ್ತು ಜಮೀನಿನ ವ್ಯಾಜ್ಯ ಮಾರಾಟ ಇವುಗಳ ಸುತ್ತ ಚಲಿಸುತ್ತದೆ ಎನಿಸದಿರದು. 

ಒಂದು ಚಿತ್ರದ ದೊಡ್ಡ ಯಶಸ್ಸಿಗೆ ಮೊದಲಿಗೆ ಮನೋರಂಜನೆ ಅದರ ಮೂಲವಾಗಬೇಕು. ಆದರೆ ಈ ಚಿತ್ರದಲ್ಲಿ ಮನರಂಜನೆಯ ಅಂಶವನ್ನು ಕೃಷಿ  ಸಮಸ್ಯೆಗಳು ಹಿಂದಿಕ್ಕೀ ವೆ.  ಆಹಾರ ಮತ್ತು ಅಪೌಷ್ಠಿಕತೆಯ ಸಮಸ್ಯೆಗೆ ಜೀವ ವೈವಿಧ್ಯತೆಯೇ ಪರಿಹಾರ. ಭೂಮಿಯಲ್ಲಿ ಏಕರೂಪದ ಬೆಳೆಯ ಬದಲು ವೈವಿಧ್ಯಮಯವಾದ ಬೆಳೆ ಬೆಳೆದರೆ ಮಾತ್ರ ಪರಿಹಾರ  ಸಾಧ್ಯ. ಸಾಂಪ್ರದಾಯಿಕ ಶೈಲಿಯ ಸಹಜ ಕೃಷಿಯ ಬಗ್ಗೆ ಒತ್ತು ನೀಡಿ ಸಾವಯವ ಕೃಷಿಯ  ಕುರಿತು ಹೇಳಿರುವ ನಿರ್ದೇಶಕರು ಇದರ ಜೊತೆಜೊತೆಗೆ ಕಡಿಮೆ ನೀರಿನ್ನು ಆದರಿಸಿದ ಅನಿಲವೇ ಇಂಗು ನೀರಿನ ವ್ಯವಸಾಯ, ಬಹು ಬೆಳೆ ಆಧಾರಿತ, ಪಶು ಸಂಗೋಪನೆ ಹಾಗೂ ಫ್ಲೋರಿಕಲ್ಚರ್ ಜೊತೆಗಿನ ವೈವಿಧ್ಯಮಯ ಕೃಷಿ ಪದ್ದತಿ ಮತ್ತು ಅದರ ಮೂಲಕ ಯಶಸ್ಸು ಕಂಡ ಕೃಷಿಕನಾಗಿ ಚಿತ್ರಿಸಿದ್ದರೆ ರೈತರಿಗೆ ಒಂದು ಭರವಸೆಯ ಬೆಳಕಾಗಿ ಚಿತ್ರ ಮೂಡಿ ಬರಬಹುದಿತ್ತು. ಅಣ್ಣ ತಮ್ಮಂದಿರ ಒಡಕಿನ ಮೂಲವೂ ಸಮಂಜಸವನಿಸುವುದಿಲ್ಲ

ಸರಳ ಕಥೆ, ಸುಂದರ ಅಭಿನಯ, ಗಾದೆಮಿಶ್ರಿತ ಹಳ್ಳಿ ಸೊಗಡಿನ ಸಂಭಾಷಣೆ, ಮನರಂಜಿಸುವ ಹಾಡುಗಳು ಚಿತ್ರದ ಬಂಡವಾಳ. ವಿಜಯ ರಾಘವೇಂದ್ರ ಅಶ್ವಿನಿ ಪುಣಚ್ಚ ಮತ್ತು ಉಮಾಶ್ರೀ ಪ್ರಬುದ್ಧ ಅಭಿನಯವನ್ನು ನೀಡಿದ್ದಾರೆ ಸಂಕ್ರಾಂತಿಯ ಮುಂದುವರೆದ ಪುಕ್ಸಟ್ಟೆ ಪಾತ್ರವನ್ನು ಮಂಡ್ಯ ರಮೇಶ್ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ವಿನಂತಿ ಎಲ್ಲ ನಟರು ತಮ್ಮ. ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎಚ್ ಸಿ ವೇಣು ಅವರ ಛಾಯಾಗ್ರಹಣ ಮತ್ತು ಸಂಭ್ರಮ ಶ್ರೀಧರ್ ಅವರ ಸಂಗೀತವು ಗಮನ ಸೆಳೆಯುತ್ತದೆ 

ಸರಾಗವಾಗಿ ಹರಿಯುವ ನದಿಯಂತೆ ಚಿತ್ರವು ಹೆಚ್ಚು ತಿರುವುಗಳಿಲ್ಲದೆ ಸಾಗಿ “ಜೀವ ಭಾವಕ್ಕೆ ಜೀವ ಕಣೋ, ಜಡ ಜಂಗಮಕ್ಕೆ ದೇವಕಣ”, “ಬೆಟ್ಟ ಗುಡ್ಡ ನದಿ ಕಡಿಮೆ ಹಳ್ಳ ಕೊಳ್ಳಗಳೆಲ್ಲ ಈ ಭೂಮಿಯ ಕಾಸಿನ ಸರ” ಎನ್ನುವುದರ ಜೊತೆಗೆ ಈ ಭೂಮಿ ಎಂಬ ನಾರಿ ಒಲಿದರೆ ನಾರಿ ಮುನಿದರೆ ಮಾರಿ ಎಂಬ ಅಂಶವನ್ನು ಸಾರುತ್ತ ಈ ಭೂಮಿಯನ್ನು ವಿಷದ ಒಡಲನ್ನಾಗಿ ಪರಿವರ್ತಿಸಿದಿರಿ ಎಂಬ ಎಚ್ಚರಿಕೆ ಸಂದೇಶವನ್ನು ನೀಡಿ ಮುಕ್ತಾಯವಾಗುವುದರಿಂದ ಭಾರತದ ಜನಸಂಖ್ಯೆಯಲ್ಲಿ ಶೇಕಡ 75ರಷ್ಟು ಜನ ಕೃಷಿಯನ್ನೇ ಆಧರಿಸಿ ಜೀವನ ನಡೆಸಿದವರಿಗೆ ಇದೊಂದು ಮಾರ್ಗದರ್ಶಿ ಚಿತ್ರವೂ ಹೌದು. 

ಒಂದು ಲೆಕ್ಕಾಚಾರದ ಪ್ರಕಾರ ಕಳೆದ ಎರಡು ತಿಂಗಳಲ್ಲಿ 60ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿವೆ. ವರ್ಷದಲ್ಲಿ ಸರಿ ಸುಮಾರು 200 ಕ್ಕೂ ಹೆಚ್ಚು ಚಿತ್ರಗಳ ಚಿತ್ರಗಳು ಬಿಡುಗಡೆಯಾಗುತ್ತಿರುವ ಈ ಸಂದರ್ಭದಲ್ಲಿ ಕೃಷಿ ಸಮಸ್ಯೆಗಳು ಇಲ್ಲವೇ ಗ್ರಾಮೀಣ ಹಿನ್ನಲೆಯ ಕಥೆ ಹೊಂದಿರುವ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟು ಈ  ನಿಟ್ಟಿನಲ್ಲಿ ನಂಜುಂಡೇಗೌಡರ ಪ್ರಾಮಾಣಿಕ ಪ್ರಯತ್ನವನ್ನು ಜನತೆ ಅದರಲ್ಲೂ ಕೃಷಿಕರು ಹೆಚ್ಚಾಗಿ  ಚಿತ್ರ ನೋಡಿ ನಿರ್ದೇಶಕರ ಬೆನ್ನು ತಟ್ಟಬೇಕಾಗಿದೆ. ನಿರ್ಮಾಪಕರನ್ನು ಪ್ರೋತ್ಸಾಹಿಸಬೇಕಾಗಿದೆ. 

‍ಲೇಖಕರು avadhi

March 5, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: