ಮೂಡಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನ ನೀಡುವ 19ನೇ ವರ್ಷದ ಪ್ರಶಸ್ತಿ ಮತ್ತು ಪುರಸ್ಕಾರ ಕಾರ್ಯಕ್ರಮ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ಕಲಾಭವನದಲ್ಲಿ ಶನಿವಾರ ನಡೆಯಿತು.
ಕಥೆಗಾರ ಟಿ. ಎಂ ಸುಬ್ಬರಾವ್ ಅವರು ಶಿವರಾಮ ಕಾರಂತ ಪ್ರಶಸ್ತಿಯನ್ನು ಸ್ವೀಕರಿಸಿದರು.
“ಮೋದಾಳಿ” ನಾಟಕ ಕೃತಿಗಾಗಿ ಪಿ ಚಂದ್ರಿಕಾ ಮತ್ತು “ತಲ್ಲೂರು ಎಲ್ ಎನ್” ಪುಸ್ತಕಕ್ಕಾಗಿ ರಾಜಾರಾಂ ತಲ್ಲೂರು ಅವರಿಗೆ ಶಿವರಾಮ ಕಾರಂತ ಪುರಸ್ಕಾರ ಪ್ರದಾನ ಮಾಡಲಾಯಿತು.
ಆಳ್ವಾಸ್ ಸಂಸ್ಥೆಗಳ ಮುಖ್ಯಸ್ಥ ಮೋಹನ ಆಳ್ವ, ಮೂಡಬಿದಿರೆ ಎಂಸಿಎಸ್ ಬ್ಯಾಂಕಿನ ಎಂ ಚಂದ್ರಶೇಖರ್, ಶಿವರಾಮ ಕಾರಂತ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ ಮಾವಿನಕುಳಿ ಅತಿಥಿಗಳಾಗಿದ್ದರು
0 Comments