“ಇಂತಿಂಥಾ ಜಿಲ್ಲೆಯ ಇಂತಿಂಥಾ ತಾಲೂಕಿನ ಇಂತಿಪ್ಪ ಪುಟ್ಟ ಹಳ್ಳಿಯಲ್ಲಿ ಇಂತೆಂಬವರಿಗೆ ಹುಟ್ಟಿದ ಇಂತಿಪ್ಪ ಸಾಹಿತಿ ಈಗ ಇಂತಿಪ್ಪಲ್ಲಿ ವಾಸಿಸುತ್ತಿದ್ದಾರೆ ಎಂಬಿತ್ಯಾದಿ ಇತ್ಯೋಪರಿಗಳಿಂದ ಮುಕ್ತವಾಗುವ ಹಂಬಲ ಮತ್ತು ಅನಿವಾರ್ಯತೆಯ ಕಾರಣದಿಂದ… ಜಾನಕಿ ಎಂದರೆ ಅಪ್ಪನ ಮಗಳು ಎಂಬ “ಅರ್ಥ”ಪೂರ್ಣತೆಗೆ ಪರಿಚಯವನ್ನು ಸೀಮಿತಗೊಳಿಸಲಾಗಿದೆ.”
ಇದು “ಹಾಯ್ ಬೆಂಗಳೂರ್” ಪತ್ರಿಕೆಯಲ್ಲಿ ಕಾಲಂ ಬರೆಯುವ ಜಾನಕಿಯ ಇಂಟ್ರೊಡಕ್ಷನ್. ತನ್ನ ಕಾಲಂ ಬರಹಗಳನ್ನು ಒಟ್ಟುಮಾಡಿ “ಜಾನಕಿ ಕಾಲಂ” ಪುಸ್ತಕ ಪ್ರಕಟಿಸಿದಾಗ ಇದು ಜಾನಕಿಯೇ ತನ್ನನ್ನು ಪರಿಚಯಿಸಿಕೊಂಡ ಪರಿ.
ಈಗ ಇಂತಹುದೇ ಅನಿವಾರ್ಯತೆ ಜಾನಕಿಗೆ ಮಾತ್ರವಲ್ಲ, ಊರ್ಮಿಳೆಗೂ ಹುಟ್ಟಿದೆ. ಹಾಗಾಗಿ ಊರ್ಮಿಳೆ ಎಂದರೆ ಅಮ್ಮನ ಮಗಳೊ ಮಗನೊ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಸದ್ಯದಲ್ಲೇ ಆರಂಭ ಊರ್ಮಿಳೆಯ ಕಾಲಂ- “ರಾಗಿರೊಟ್ಟಿ”.





0 Comments