ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಮೇಶ್ ನೆಲ್ಲಿಸರ ಕವಿತೆ – ಹೆಣ…

ರಮೇಶ್ ನೆಲ್ಲಿಸರ

ಆಗ ಬೆಳಕು ಹರಿದಿತ್ತು
ಇಬ್ಬನಿಯೂ ಹೆಚ್ಚು ಇದ್ದಂತಿರಲಿಲ್ಲ
ರವಿಯ ಮೊದಲ ಕಿರಣ
ಬಿದ್ದಿದ್ದು ಹೆಣದ ಮೇಲೆ
ಕಾಗೆಯಂತೆ, ಅಪಶಕುನ!

ಮುನ್ಸಿಪಾಲಿಟಿಯವರು ಬರುವ ಮೊದಲು
ಹೆಣ ಕಾಯಲು ಬಂದವರು ರಾಶಿ ರಾಶಿ
ಅವೂ ಕಾಗೆಗಳೇ, ಅಪಶಕುನ!
ಕೆಲವರು ಕಲ್ಲು ಬೀರಿದರು
ಪಟಾಕಿ ಸಿಡಿಸಿದರು
ಅವು ಹೋದಾವೆ?
ಹೆಚ್ಚಾದವು, ಮುಗಿಲು ಮುಟ್ಟಿತು ಆಕ್ರಂದನ
ಸತ್ತ ಕಾಗೆಯ ಮೇಲೆ ಹರಿದ ಲಾರಿ
ಚಾಲಕನ ಗೊಣಗಾಟ
ಹಾಳು ಕಾಗೆಗಳು, ಅಪಶಕುನ!

ಆ ದಾರಿಯಲಿ ಹೆಜ್ಜೆ ಇಟ್ಟವರು
ಪಕ್ಕದ ರಸ್ತೆಗೆ ಹೊರಳಿದರು
ಗೊಣಗಿದರು, ಮಿಸುಕಾಡಿದರು.
ಶುಭ ಕಾರ್ಯಕೆ ಅಡಿಯಿಟ್ಟವರು
ಹರಿಕೆ ಕಟ್ಟಿ ನಡೆದರು
ಕಾಗೆಗಳು ಹಾಗೇ, ಅಪಶಕುನ!

ಹೆಣದ ಹಿಡಿದು ಅದ್ಯಾರೋ
ಕಸದ ಲಾರಿಗೆ ಎಸೆದರು
ಮುನ್ಸಿಪಾಲಿಟಿಯವರು!, ಅವರಿಗೆ ಕರೆ ಹೋಗಿತ್ತು.
ಕಾಗೆಗಳು ಲಾರಿಯ ಹಿಂದೆಯೇ
ಹಾರಿದವು, ಇನ್ನಷ್ಟು ಹಾರಿದವು
ಕತ್ತಲೆಯ ಸೀಳಿ ಮರಗಿದವು

ಮೌನ!
ಇನ್ಯಾವುದೋ ದಿಕ್ಕಿನಿಂದ ಕೂಗು ಚೀರಾಟ
ಕಾಗೆಯದೇ!?
ಆ ದಿಕ್ಕಿನತ್ತ ಹಾರಿದವು
ಹಾಳು ಕಾಗೆಗಳು, ಅಪ’ಶಕುನ’….

‍ಲೇಖಕರು avadhi

4 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading