ಕ್ರಿಯೆಟಿವ್ ಥಿಯೇಟರ್ ಅರ್ಪಿಸುವ ಹಾಸ್ಯ ನಾಟಕ
‘ರತ್ನನ್ ಪರ್ಪಂಚ’
13 ನವೆಂಬರ್ 2013, ಸಂಜೆ 7.30ಕ್ಕೆ
ರಂಗ ಶಂಕರ
‘ನರಕಕ್ ಇಳ್ಸಿ, ನಾಲ್ಗೆ ಸೀಳ್ಸಿ
ಬಾಯ್ ಹೊಲ್ಸಾಕ್ಕಿದ್ರೂನೇ
ಮೂಗ್ನಲ್ ಕನ್ನಡ್ ಪದವಾಡ್ತೀನಿ
ನನ್ಮಸ್ನ್ ನೀ ಕಾಣೆ’
ಅಂತಾನೆ ರತ್ನ ಉರುಫ್ ಜಿ.ಪಿ.ರಾಜರತ್ನಂ. ಎಲ್ಲೆಲ್ಲೂ ಕನ್ನಡ ಬಾವುಟ ಹಾರಾಡ್ತಿರೋ, ಕನ್ನಡದ ಗುಣಗಾನ ನಡೀತಾ ಇರೋ ಈ ನವೆಂಬರ್ ತಿಂಗಳಲ್ಲಿ ಕನ್ನಡಕ್ಕಾಗಿ ಜೀವ ತೇಯ್ದ ಆ ಮಹನೀಯರನ್ನ ನೆನೆಸಿಕೊಳ್ಳೋದು ನಮ್ಮ ಕರ್ತವ್ಯ ಅಲ್ಲವೇ? ಅವರ ಪದಗಳನ್ನ ಕೇಳಿ ಆನಂದಿಸಬೇಕು, ಅವರ ಜೀವನದ ಬಗ್ಗೆ ತಿಳಕೋಬೇಕು, ಅವರ ಹಾಸ್ಯ ಬರಹಗಳನ್ನ ರಂಗದ ಮೇಲೆ ನೋಡಿ ಮನಃ ಪೂರ್ತಿ ನಗಬೇಕು ಅನ್ನೋ ಆಸೆ-ಆಸಕ್ತಿ ನಿಮಗಿದ್ರೆ ಈ ತಿಂಗಳ 13 ನೇ ತಾರೀಖು ಸಂಜೆ 7.30ಕ್ಕೆ ರಂಗಶಂಕರಕ್ಕೆ ಬನ್ನಿ.
ಜಿ.ಪಿ.ರಾಜರತ್ನಂ ಅವರ ಬದುಕು-ಬರಹಗಳ ಆಧಾರಿತ ಈ ನಾಟಕವನ್ನ ಜೋಸೆಫ್ ಅವರ ನಿರ್ದೇಶನದಲ್ಲಿ ನಿಮ್ಮ ಮುಂದಿಡುವವರು ಕ್ರಿಯೆಟಿವ್ ಥಿಯೇಟರ್ನ ಕಲಾವಿದರಾದ ಸುಂದರ್, ಲಕ್ಷ್ಮೀ ಚಂದ್ರಶೇಖರ್, ರಾಮಕೃಷ್ಣ ಕನ್ನರಪಾಡಿ, ಗಜಾನನ, ಚಂದ್ರಕೀರ್ತಿ ಮತ್ತು ಸುರಭಿ.
ನಾಟಕದ ಕೆಲವು ದೃಶ್ಯಗಳು ನಿಮಗಾಗಿ :






0 Comments