ರಂಗಶಂಕರದಲ್ಲಿ ʼಪತಂಗ ಪ್ರಭಾವʼ

ಒಂದು ಅಪೂರ್ವ ರಾತ್ರಿ ಒಂದು ವಿಶೇಷ ಘಟಿಸುತ್ತದೆ. ಮಾತುಕತೆ – ಸಾಂವಾದಗಳ ಮೂಲಕ ಹೊಸ ಆವರಣಗಳು ತೆರೆದುಕೊಳ್ಳುತ್ತದೆ. ಸಮಯ, ಕಾಲ ಅಥವಾ ಇಂದುನಾಳೆಗಳೆಂಬೋದೇ ಮಿಥ್ಯ ಅಥವಾ ಅನಗತ್ಯವಾದ ದಿಗಂತದಲ್ಲೆಲ್ಲೋ ಭೂತಭವಿಷ್ಯಗಳು ಒಂದರೊಳಗೊಂದು ಬೆರೆತು ಹೊಸದಾದ ಇನ್ನೊಂದನ್ನು ತೆರೆದಿಡುತ್ತದೆ.

ಶೂನ್ಯದಲ್ಲಿ ಅಲೆದಾಡುತ್ತಿರುವ ಎರಡು ಕಣಗಳು ವಿಜ್ಞಾನ ಜ್ಞಾನ ಮತ್ತು ನಮ್ಮ ಬದುಕಿನ ಕೆಲವು ಮೂಲಭೂತ ಪ್ರಶ್ನೆಗಳನ್ನು ಅರ್ಥೈಸಿಕೊಳ್ಳುವಲ್ಲಿ ನಮಗಿರುವ ಮಿತಿಗಳ, ನಮ್ಮ ಬುದ್ಧಿವಂತಿಕೆಯ ಮೇರೆಗಳ ಬಗ್ಗೆ ಚರ್ಚಿಸುತ್ತಾ ಹೋಗುತ್ತವೆ. ಈ ಸಂವಾದದ ಮೂಲಕ ನಮ್ಮ ಯೋಚನೆಗಳೆಲ್ಲವೂ ಹೇಗೆ ಧ್ವಂದ್ವಗಳ ಸುಳಿಯಲ್ಲಿ ಸಿಕ್ಕಿ ನಾವು ಕಪ್ಪು ಬಿಳುಪುಗಳಲ್ಲೇ ಎಲ್ಲವನ್ನು ಕೂಡಿಹಾಕುವ ಪ್ರಯತ್ನವನ್ನು ಮಾಡುತ್ತಿರುತ್ತೇವೆ.

ಅರಿವಾಗುತ್ತಾ ಹೋಗುತ್ತದೆ. ಲಿಂಗ ಭೇದ, ಪ್ರೀತಿ, ಅಧ್ಯಾತ್ಮಿಕತೆ, ತತ್ವ, ಹೀಗೆ ಎಲ್ಲದರಲ್ಲೂ ನಾವು ಭೇದಗಳನ್ನ ಮೀರಿ ನಿಲ್ಲಬಹುದು ಅನ್ನುವುದರ ಬಗ್ಗೆ ಘಹನವಾದ, ಭಾವುಕವಾದ ಮತ್ತು ತರ್ಕಯುತವಾದ ಮಾತು ಕತೆಗಳು ತೆರೆದುಕೊಳ್ಳುತ್ತದೆ. ನಾಲ್ಕು ಪಾತ್ರಗಳು ಪ್ರೀತಿ, ಪುರುಷ, ಪೃಕೃತಿ, ದೇವರು, ವೈರಾಗ್ಯ, ದ್ವೇಷ ಇವೆಲ್ಲದರ ಬಗ್ಗೆ ಚರ್ಚಿಸುತ್ತಾ ಹೋಗುತ್ತವೆ.

ಪರಮಾಣು ವಿಜ್ಞಾನ ನಮಿಗೆ ತೋರಿಸಿಕೊಟ್ಟಿರುವುಂತೆ, ಘನವನ್ನು ಅರ್ಥೈಸಿಕೊಳ್ಳಲು ಅಣುವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು! ಈ ಪಾತ್ರಗಳು ಕೂಡಾ ತಮ್ಮ ಪ್ರಸ್ತುತದ ಸಂಧಿಗ್ಧ ಪರಿಸ್ತಿತಿಯನ್ನು ಅರ್ಥ ಮಾಡಿಕೊಳ್ಳಲು, ತಮ್ಮ ಒಳಗೆ ಅಡಗಿ ಕೂತಿರುವ ನೆನಪಿನ ಪುಟ್ಟ ಪುಟ್ಟ ಗರಿಗಳನ್ನು ಹೊರಗೆಳೆಯುತ್ತಾ, ಮೆಲಕು ಹಾಕುತ್ತಾ ತಮ್ಮನ್ನು ತಾವೇ ಪರಿಶಿಲಿಸಿಕೊಳ್ಳುತ್ತಾ ಹೋಗುತ್ತವೆ. ತಮ್ಮ ಕಥೆಗಳ ಮೂಲಕ ತಮ್ಮನ್ನು ಕೂಡಿ ಹಾಕಿರುವ ಅಸ್ತಿತ್ವದ ಗೋಡೆಗಳನ್ನು ಮುಂದಿಡುತ್ತಾ ಹೋಗುತ್ತವೆ.

ದೌಪದಿ, ಶಿಖಂಡಿ, ಕೃಷ್ಣಾ ಮತ್ತು ಮೋಹಿನಿ ಎಂಬ ನಾಲ್ಕು ಪಾತ್ರಗಳ ಓಳಗಿನ ಲೋಕದ ಅನಾವರಣ ಈ ಪ್ರಸ್ತುತಿ, ಪುಟ್ಟ ಚಿಟ್ಟೆಯೆಲ್ಲೋ ಇಲ್ಲಿ ರೆಕ್ಕೆ ಬಡಿದರೆ, ಇನ್ನೆಲ್ಲೋ ಚಂಡಮಾರುತವಾಗುವ ಸಾಧ್ಯತೆಯನ್ನು ತೆರೆದಿಡುವ ಅವ್ಯವಸ್ಥೆ (ಖ್ಯಾವೋಸ ಥಿಯರಿ) ಶಾಸ್ತ್ರ ಈ ನಾಟಕದ ಸೂತ್ರವಾಗಿರುತ್ತದೆ. ಪುರಾತನ ಸಂಸ್ಕೃತ ನಾಟಕ ( ಕೂಡಿಯಾಟ್ಟಂ)ಗಳ ಅಂಶಗಳಿಂದ ಪ್ರೇರಣೆಯನ್ನು ಪಡೆದು, ಅವುಗಳ ಅಂಶಗಳು ಅಲ್ಲಿಲ್ಲಿ ಈ ಪ್ರಸ್ತುತಿಯಲ್ಲಿ ಮಿಂಚಿಹೋಗುವಂತೆ ಇದನ್ನ ಕಟ್ಟಲಾಗಿದೆ.

‍ಲೇಖಕರು Admin

November 22, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: