ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯೋಗ ಕಣ್ರಪ್ಪೋ ಯೋಗ..

ಅ.ರಾ.ಮಿತ್ರ ಮತ್ತು ಯೋಗ

v chalapati panasachowdanahalli

ವಿ ಚಲಪತಿ ಪಣಸಚೌಡನಹಳ್ಳಿ

ನಾನು ಅ.ರಾ.ಮಿತ್ರರ ‘ನಾನೇಕೆ ಕೊರೆಯುತ್ತೇನೆ’ ಎಂಬ ಪುಸ್ತಕವನ್ನು ಓದುತ್ತಿದ್ದಾಗ ಅವರ ಪ್ರಕಾರದ ಯೋಗಾಸನಗಳನ್ನು ವಿವರಿಸಿದ್ದರು, ಅವು ತುಂಬಾ ಹಾಸ್ಯಭರಿತವಾಗಿದ್ದವು, ಹೌದಲ್ಲವೇ ದಿನನಿತ್ಯ ನಾವು ಅರಿವಿಲ್ಲದೇ ಯೋಗಾಸನ ಮಾಡುತ್ತಿದ್ದೇವೆ ಎಂಬುದು ಮನದಲ್ಲಿ ಮೂಡದಿರಲು ಸಾಧ್ಯವೇ ಇರಲಿಲ್ಲ, ಅವರು ತಿಳಿಸಿದ ಕೆಲವು ಯೋಗಾಸನಗಳು ಇಂತಿವೆ.

ವಕ್ರಪಾದಾಸನ: ನೂಕು-ನುಗ್ಗಲಿನಲ್ಲಿರುವ ರೈಲು, ಬಸ್ಸುಗಳಲ್ಲಿ ನಿಂತುಕೊಂಡೋ, ನೋಡುತ್ತಲೋ ಪ್ರಯಾಣಿಸುವರು ಅಭ್ಯಾಸ ಮಾಡಬೇಕಾದ ನಿಲ್ಲು ಭಂಗಿಯ ಆಸನ.

yoga5ಅರ್ಧಪೃಷ್ಠಾಸನ: ಸ್ಕೂಟರ್/ ಬೈಕಿನಲ್ಲಿ ಹಿಂದಿನ ಸೀಟುಗಳನ್ನು ಅಲಂಕರಿಸುವ ಮಹಿಳೆಯರುಕುಳಿತುಕೊಳ್ಳುವ ಭಂಗಿಗೆ ಈ ಹೆಸರು.

ಪಾಶ್ರ್ವನಾಥಾಸನ: ರೈಲುಗಳಲ್ಲಿ, ದೂರ ಪ್ರಯಾಣದ ಲಕ್ಷುರಿ (ಲಕ್ಷ+ಉರಿ=ಲಕ್ಷುರಿ) ಬಸ್ಸುಗಳಲ್ಲಿ ಪ್ರಯಾಣಿಸುವವರು ಪಕ್ಕದ ಪ್ಯಾಸೆಂಜರಿನ ಮೇಲೆ ಅಪಾರ ಭರವಸೆಯನ್ನಿಟ್ಟು ಹೆಗಲಿಗೆ ಒರಗಿಕೊಂಡು ನಿದ್ರೆ ಮಾಡುವ ಒಂದು ಸುಖಾಸನ.

ದೀಪ ಪಾದಾಸನ (ಹರಡಿದ ದೀಪ ಪಾದಾಸನ): ಟ್ರಾಫಿಕ್ ದೀಪಗಳಲ್ಲಿ ಕೆಂಪು ಸಿಗ್ನಲ್ ಕಂಡಕೂಡಲೇ ಸ್ಕೂಟರ್/ ಬೈಕಿಗೆ ಬಲವಾಗಿ ಬ್ರೇಕು ಹಾಕಿ ಎರಡೂ ಕಾಲುಗಳನ್ನು ನೆಲಕ್ಕೆ ಚಾಚಿ ಕುಳಿತುಕೊಂಡು ನಿಲ್ಲುವ ಭಂಗಿಯ ಆಸನವಿದು.

ಗೂಢ ನಿದ್ರಾಸನ: ಗೂಢ ನಿದ್ರಾಸನ ಎಂದರೆ ಯಾರಿಗೂ ತಿಳಿಯದಂತೆ ಹಾಡಹಗಲೇ ನಿರುಂಬಳವಾಗಿ ನಿದ್ರೆ ತೆಗೆಯುವ ಆಸನದ ಭಂಗಿ-ಅಧಿಕಾರಿಗಳು, ಸಭಾಸದರು, (ಕಳ್ಳ ನಿದ್ರಾಸನ), ವಿದ್ಯಾರ್ಥಿ-ವಿದ್ಯಾರ್ಥಿನಿಯರ ನೆಚ್ಚಿನ ಆಸನ.

ಅನಂತ ಶಯನಾಸನ:- ನಿಮ್ಮ ದೇಹದ ಮೇಲೆ ಪೂರ್ಣ ಹತೋಟಿಯನ್ನು ಸಾಧಿಸಲು ನೆರವಾಗುವ ಒಂದುವಿಶಿಷ್ಠಾಸನ ಇದು. ಯಾವಾಗೆಂದರೆ ಆಗ ನಿದ್ದೆ ತೆಗೆಯಬಹುದಾದ ಒಂದು ಯೋಗಾಸನ.
ಉದಾ:ಎಂ.ಎಲ್.ಎ, ಎಂ.ಪಿ

ಪಕೃತಿ ಪುರುಷಾಸನ: ಹದಿಹರೆಯದ ಒಬ್ಬ ಹುಡುಗಿ-ಹುಡುಗ ಸೇರಿ ತುಂಬ ಹೊತ್ತು ಮಾತನಾಡುತ್ತ ತ್ರಿಭಂಗಿಯಲ್ಲಿ ನಿಲ್ಲುವ ಒಂದು ಆಸನ.
ಅರ್ಧಶಯನಾಸನ(ಉದರವರ್ಧಾಸನ):- ಮನೆಗಳ ವರಾಂಡದಲ್ಲಿ, ಕಛೇರಿಯ ಕಾಯಿಗೋಣಿಗಳಲ್ಲಿ, ಪ್ರವಾಸಿ ಮಂದಿರಗಳಲ್ಲಿ ಆರಾಮಕುರ್ಚಿಯ ಆಕಾರಕ್ಕೆ ದೇಹವನ್ನು ಹೊಂದಿಸಿ ಅರ್ಧಕೂರುವ-ಅರ್ಧ ಮಲಗುವ ಒಂದು ಸುಖಾಸನ.

ಕೌಂಟರಾಸನ: ಬ್ಯಾಂಕುಗಳಲ್ಲಿ, ಅಂಚೆ-ಕಛೇರಿಗಳಲ್ಲಿ, ವಿದ್ಯುತ್ ನಿಗಮದ ಕಛೇರಿ, ಅಬಕಾರಿ, ವಿಮಾ ಮೊದಲಾದ ಕಛೇರಿಗಳ ಪಾವತಿ ಕಟ್ಟೆಗಳಲ್ಲಿ ಸಾರ್ವಜನಿಕರು ಮಾಡಬೇಕಾದ ಆಸನ.

yoga17ಪಾದಫಲಕಯಾನಾಸನ: ಬಸ್ಸಿನ ಪುಟ್ ಬೋರ್ಡ್ಗಳಲ್ಲೇ ನಿಂತು ತೂರಾಡುತ್ತ, ತೂಗಾಡುತ್ತ, ಪ್ರಯಾಣ ಮಾಡುವ ತರುಣ ಹಠಯೋಗಿಗಳು ಈ ಆಸನದಲ್ಲಿ ನಿಷ್ಣಾತರು.

ಇವಿಷ್ಟು ಅ.ರಾ.ಮಿತ್ರರ ಯೋಗಾಸನಗಳ ಝಲಕ್.

ಪುರಾತನದಿಂದ ಮುನ್ನಡೆಯುತ್ತಿರುವ ಯೋಗ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿದೆ, ಅದೇ ರೀತಿ ಅದರ ಉಪ’ಯೋಗ’ ಸಾರ್ವತ್ರಿಕ, ಅದರ ಬಗ್ಗೆ ಕೇವಲವಾಗಿ ಮಾತಾಡುವುದು………ಎಷ್ಟರ ಮಟ್ಟಿಗೆ ಸರಿ……? ಅಲ್ಲವಾ..??

‍ಲೇಖಕರು Admin

3 April, 2016

1 Comment

  1. Sangeeta Kalmane

    ಯೋಗದ ಬಗ್ಗೆ ಕೇವಲವಾಗಿ ಮಾತನಾಡುವುದು ತಪ್ಪು. ಇಂದು ಎಷ್ಟೋ ಜನ ಈ ಯೋಗದಿಂದಲೆ ತಮ್ಮ ರೋಗದಿಂದ ಮುಕ್ತಿ ಪಡೆದು ಜೀವನ ಮಾಡುತ್ತಿದ್ದಾರೆ. ಅದರಲ್ಲಿ ನಾನೂ ಒಬ್ಬಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading