ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುದ್ಧ ಮತ್ತು ಪ್ರೀತಿ…

ವಿನುತಾ

ಯುದ್ಧವೆಂದರೆ ನಾಶ;
ಅಲ್ಲಲ್ಲ, ಸರ್ವನಾಶ.
ತಮ್ಮದಲ್ಲದ ತಮಗರಿವಿಲ್ಲದ ತಪ್ಪಿಗೆ
ಅಮಾಯಕರು ಬಲಿಯಾಗುವುದಷ್ಟೇ!

ದ್ವೇಷದ ಸುಡುಗಾಡಲ್ಲೂ
ಪ್ರೀತಿಯ ಹೂ ಅರಳುತ್ತದೆ
ಹೂ ಗಂಧಕ್ಕೆ ಯಾವ ಗಡಿ,
ಪ್ರೀತಿಗೆ ಯಾವ ಬೇಲಿ!

ನೆತ್ತರು ಅಂಟಿದ ಯುದ್ಧೋನ್ಮತ್ತ ಆತ್ಮಗಳಿಗೂ ಪ್ರೀತಿಯ ಸ್ಪರ್ಶವಾಗಲಿ,
ಪ್ರೀತಿಯ ಸಣ್ಣ ಸೋಂಕಿಗೂ
ಪವಾಡಗಳೇ ಘಟಿಸುತ್ತವೆ!

ಕ್ರೌರ್ಯದ ನಶೆಯಲ್ಲಿರುವವರಿಗೆ ಪ್ರೀತಿಯಭಾಷೆ ಅರ್ಥವಾಗುವುದಿಲ್ಲ,
ಗೆಲುವಿಗೂ ಸೋಲಿಗೂ
ಪ್ರೀತಿಯಲ್ಲಿ ಬೇರೆಯದೇ ಅರ್ಥಗಳಿವೆ!

ರಣಭೂಮಿಯಲ್ಲಿ
ನೆತ್ತರು ಹರಿಯುತ್ತಿದೆ ಪ್ರಭುವೇ,
ಒಂದಿಷ್ಟು ಪ್ರೀತಿಯ ಸಿಂಚನವಾಗಲಿ
ಯುದ್ಧಗಳು ಕೊನೆಯಾಗಲಿ!!

‍ಲೇಖಕರು Admin

11 March, 2022

1 Comment

  1. T S SHRAVANA KUMARI

    ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading