ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾರ ಬ್ಯಾಡ ಅಂತರ ಮಾಡಪ್ಪ ಚಿಂತಿ..

hrudaya shiva

ಹೃದಯಶಿವ

ಕೂಡಲೇ ಮನೆಯ ಹೆಂಚು ಸರಿ ಮಾಡಿಸಿದೆ,
ಮಳೆಗಾಲದಲ್ಲಿ ಮಗಳು
ನೆಮ್ಮದಿಯಿಂದ ನಿದ್ರಿಸಬಹುದು.

home greenಈಗಲೇ ಈ ಬಾಗಿಲ ಕಿತ್ತು ಹೊಸ ಹಲಗೆ ಜೋಡಿಸಿ
ಗಟ್ಟಿ ಚಿಲಕ ಮಾಡಿಸಿಬಿಡುತ್ತೇನೆ,
ಪುಸ್ತಕಗಳಾದರೂ ಉಳಿದುಕೊಳ್ಳಲಿ
ಮೊಮ್ಮಕ್ಕಳಿಗೆ ತಾತನಾಸ್ತಿಯ ರೂಪದಲ್ಲಿ
ಕಳ್ಳಕಾಕರಿಂದ ಪಾರಾಗಿ.

ಇಲ್ಲೊಂದು ಕಿಟಕಿ ಇದೆಯಲ್ಲ,
ಇದರ ಸರಳುಗಳ ನಡುವೆಯೇ ಕಾರ್ಖಾನೆಯುಗುಳುವ
ಗಬ್ಬು ವಾಸನೆ
ಕೋಣೆಗೆ ನುಗ್ಗುತ್ತಿದೆ ಇತ್ತೀಚೆಗೆ…
ಇಗೋ ಮುಚ್ಚಿಯೇ ಬಿಟ್ಟೆ,
ಈ ಕಿಟಕಿ ಇತ್ತೆಂಬುದಕ್ಕೆ ಸಾಕ್ಷ್ಯಗಳೇ ಇಲ್ಲ
ಇನ್ನು ನಿರಾತಂಕ ವಿಶ್ರಾಂತಿ ಅಪ್ಪನಿಗೆ.

ಚಕ್ಕೆಗಳಾಗಿ ಉದುರಿಹೋಗುವ ಮುನ್ನ
ಈ ಗೋಡೆಗಳಿಗಿನ್ನಾದರೂ
ಸುಣ್ಣ ಹೊಡೆಸಿಬಿಡಬೇಕು, ಇಲ್ಲವೇ ಬಣ್ಣ
ಹಬ್ಬ ಈಗಲೇ ಈ ಕ್ಷಣವೇ ಆಗ

ಈಗ ಮನೆಗೊಂದು ಕಳೆ,
ನೆಮ್ಮದಿ.
ಉಫ್ !
ರಿಮೋಟಿನೊಳಗಿನ ಜಿರಳೆ ಮರಿ ಕೊಡವಿ
ಟಿವಿ ಮುಂದೆ ಕೂತೆ,
ಹಾಡು ಪ್ರಸಾರವಾಗುತ್ತಿತ್ತು :

“ನೀ ಲೋಕದ ಕಾಳಜಿ ಮಾಡಬೇಕಂತಿ
ಯಾರ ಬ್ಯಾಡ ಅಂತರ ಮಾಡಪ್ಪ ಚಿಂತಿ”.

‍ಲೇಖಕರು admin

17 July, 2016

2 Comments

  1. lalitha sid

    ಬ್ಯೂಟಿಫುಲ್ ,,,

  2. ಆದಿವಾಲ ಗಂಗಮ್ಮ

    ಮನಮುಟ್ಟಿತು ಸರಳ ಸುಂದರ ಮಾರ್ಮಿಕತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading