ಐವತ್ತಾಯಿತು..
– ನಾಗೇಶ ಮೈಸೂರು
ನನಗೂ ನಿನಗೂ –
ಐವತ್ತಾಯಿತು ನೋಡು..
ಸಾಕಿನ್ನು ಏಗಿದ್ದು, ಮಾಗಿದ್ದು
ಬಾ ಬದುಕೋಣ, ನಮಗಾಗಿ..||
ನೋಡು ನೆನಪಲಿ ಹಸಿರು
ಓದಿ ಬರೆದು ಬೆಳೆದದ್ದು
ಯಾರದೊ ಆಸೆಗೆ ನೀರೆರೆದು
ಬಯಸದ ಗಿಡ ಮರವಾಗಿದ್ದು ||
ಬೇಕಿತ್ತೊ, ಬೇಡಿತ್ತೊ ಬಿಡು
ಮರವಾಗಿದ್ದಾಯ್ತು ಸಫಲ
ಹೂಬಿಟ್ಟು ಹಣ್ಣಾಗಿ ಸಂಕುಲ
ಪೀಳಿಗೆ ಪರಂಪರೆ ಜಾಲ ||
ಹಾಳು ಪ್ರಾಯವೆಲ್ಲ ನಿರತ
ನೆರಳಾಗುತ ತಾಯಾಗುತ ಸತತ
ಹುಮ್ಮಸ್ಸಲಿ ಎದೆ ತುಟಿ ಬಿಗಿದು
ದಣಿದಿದ್ದು ಐವ್ವತ್ತರ ಬೆವರಲಿ ||
ಯಾರಿಗೆ ಗೊತ್ತು ಸರಾಸರಿ?
ಹುಟ್ಟು ಸಾವ ಗೋರಿಯ ಕೊಸರು
ಬಿಟ್ಟೆಲ್ಲ ಬಂದುಬಿಡಿನ್ನು ತೊದಲದೆ
ಬದುಕೋಣ ನಮಗಾಗಿ ಕದಲದೆ ||






ತುಂ ತುಂ ತುಂಬಾ ಚೆನ್ನಾಗಿದೆ.
ಅಮಿತ ಪ್ರೀತ ಗಿರೀಶ
ಭಾವಗೀತೆಯ ಮಹೇಶ
ಭಾವ ವಾಗ್ವೈಕರಿಯ ಶ್ರೀಮಂತ
ಲಲಿತ ಲವಗುಣ ಚೆನ್ನ ಚಲಿತ
ಅತಿತ ಸುಂದರ ಕವನ ರಚಿತ!
– ವಿಜಯಶೀಲ ೧೭.೦೨.೧೫
kavite chennaagide sir…