ಪಿ ಶೇಷಾದ್ರಿ ನಿರ್ದೇಶನದ, ಶಿವರಾಮ ಕಾರಂತರ ‘ಮೂಕಜ್ಜಿಯ ಕನಸುಗಳು’ ಚಿತ್ರದ ಬಗ್ಗೆ ಪ್ರೊ ಸಿ ಎನ್ ಆರ್ ಅವರು ವಿವರವಾದ ನೋಟವನ್ನು ಹರಿಸಿದ್ದರು. ಇದರಲ್ಲಿ ಒಂದು ಚಿತ್ರ ಮೂಲ ಕೃತಿಗೆ ನಿಷ್ಠವಾಗಿರಬೇಕೇ ಬೇಡವೇ? ಎನ್ನುವ ಪ್ರಶ್ನೆಯನ್ನು ಮುಂದುಮಾಡಿದ್ದರು.
ಇದಕ್ಕೆ ಜೋಗಿ ಪ್ರತಿಕ್ರಿಯಿಸಿದ್ದರು. ಅದು ಇಲ್ಲಿದೆ
ಈ ಪ್ರತಿಕ್ರಿಯೆಗೆ ಪ್ರೊ ಸಿ ಎನ್ ಆರ್ ಕೊಟ್ಟ ಉತ್ತರ ಇಲ್ಲಿದೆ–
‘ಅವಧಿ’ ಓದುಗರಾದ ಪಲ್ಲವಿ ಹೆಗಡೆ ಅವರ ಅನಿಸಿಕೆ ಇಲ್ಲಿದೆ-
ಬಿ ಸುರೇಶ್ ಬರೆದಿರುವುದು ಇಲ್ಲಿದೆ-
ಜೋಗಿ ಹಾಗೂ ಸಿಎನ್ನಾರ್ ಅವರ ಚರ್ಚೆಯನ್ನು ಇಟ್ಟುಕೊಂಡು ಪ್ರತಿಭಾ ನಂದಕುಮಾರ್ ಅವರು ನೀಡಿದ ಪ್ರತಿಕ್ರಿಯೆ ಇದು
ಪ್ರೊ ಸಿಎನ್ನಾರ್ ಅವರು ಪ್ರತಿಭಾ ನಂದಕುಮಾರ್ ಅವರಿಗೆ ಪ್ರತಿಕ್ರಿಯಿಸಿದ್ದಾರೆ. ಅದು ಇಲ್ಲಿದೆ
ಪ್ರತಿಭಾ ನಂದಕುಮಾರ್ ಅವರು ಚರ್ಚೆಯನ್ನು ಇನ್ನಷ್ಟು ವಿಸ್ತರಿಸಿದ್ದಾರೆ. ಅದು ಇಲ್ಲಿದೆ
ಇಂಗ್ಲೆಂಡ್ ನಿಂದ ಬಿ ಪ್ರೇಮಲತಾ ತಮ್ಮ ನೋಟವನ್ನು ಹಂಚಿಕೊಂಡಿದ್ದಾರೆ. ಅದು ಇಲ್ಲಿದೆ
ಅಪಾರ ಓದಿನ ಮಾಲಿನಿ ಗುರುಪ್ರಸನ್ನ ಈಗ ತಮ್ಮ ಅನಿಸಿಕೆಯನ್ನು ಮುಂದಿಟ್ಟಿದ್ದಾರೆ. ಇಲ್ಲಿ ಓದಿ
ಈಗ ‘ಅವಧಿ’ಯ ಓದುಗರಾದ ಸರೋಜಿನಿ ಪಡಸಲಗಿ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ
ಈ ಚರ್ಚೆಯಲ್ಲಿ ನೀವೂ ಭಾಗವಹಿಸಬಹುದು
avadhimag@gmail.com ಗೆ ನಿಮ್ಮ ಅನಿಸಿಕೆಯನ್ನುಕಳಿಸಿಕೊಡಿ
ಸರೋಜಿನಿ ಪಡಸಲಗಿ
”ಮೂಕಜ್ಜಿಯ ಕನಸುಗಳು” ಚಿತ್ರ ನಾನು ಇನ್ನೂ ನೋಡಿಲ್ಲ.ಆದರೆ ಆ ಕಾದಂಬರಿ ಓದಿದಾಗ ಮೂಕಜ್ಜಿಯ ಪ್ರಖರ ವೈಚಾರಿಕತೆಯ ಹರಿವಿಗೆ ಬೆರಗಾಗಿದ್ದೇನೆ.
ಆ ಕಾದಂಬರಿಯುದ್ದಕ್ಕೂ ಯಾವುದೇ ಒಂದು ನಿರ್ದಿಷ್ಟ ಕಥಾ ಹಂದರ ನನಗೆ ಸಿಕ್ಕಿಲ್ಲ. ಆದರೆ ವೈಚಾರಿಕತೆಯ ಕಡಲಿನಲ್ಲಿ ಮುಳುಗಿ ಹೋಗಿದ್ದೇನೆ ಎಂಬುದು ನಿಜ. ಇದನ್ನು ಒಂದು ಸಿನಿಮಾದ ಚೌಕಟ್ಟಿನಲ್ಲಿ ಮೂಡಿಸುವ ಸಾಹಸ ನಿಜವಾಗಿಯೂ ಶ್ಲಾಘನೀಯ. ಮೂಕಜ್ಜಿ ಎಚ್ಚರದಲ್ಲಿಯೇ ದೂರ ದಿಗಂತದತ್ತ ದಿಟ್ಟಿ ನೆಟ್ಟು ಯಾರೂ ಕಾಣದ್ದನ್ನು ಕಾಣುತ್ತ ಹೇಳುತ್ತಾ ಹೋಗುವಲ್ಲಿ ಮೂಡುವ ವಿಚಿತ್ರ ಪ್ರಭಾವವನ್ನು ದೃಶ್ಯ ಮಾಧ್ಯಮದಲ್ಲಿ ತೋರಿಸಿ ನೋಡುಗನನ್ನು ಒಂದು ಪ್ರಚಂಡ ವಿಚಾರ ಲಹರಿಯಲ್ಲಿ ತೇಲಿಸಿ ಬಿಡುವ ಸಾಧ್ಯತೆ ತುಂಬಾ ಪರಿಣಾಮಕಾರಿಯಾದೀತು.
ಮೂಕಜ್ಜಿಯ ಒಂದೊಂದು ನೋಟಗಳ ನಿರೂಪಣೆ ನೇರವಾಗಿ ಒಂದೊಂದು ಕಥೆ ಹೇಳ್ತಾ ಹೋಗ್ತಿದೆ. ನಿತ್ಯ ಸಂಸಾರದ ಗುಟ್ಟು, ಸಂಗತಿಗಳನ್ನು ದೇವರಲ್ಲಿಯೂ ಕಾಣುವ ಕನಸುಗಳೋ , ಹಳವಂಡವೋ ಯಾವುದೋ ಲೋಕದಲ್ಲಿ ತೇಲಿಬಿಡುವುದರಲ್ಲಿ ಎರಡು ಮಾತಿಲ್ಲ. ಆ ಉದ್ದುದ್ದ ದಟ್ಟವಾದ ಮಾತುಗಳು ಓದುವಾಗ ಬೀರುವ, ಹೊಂದಿರುವ ಗಾಢತೆ ತೆಳುವಾಗಿ ಹೋಗಬಹುದು ಸಂಭಾಷಣೆಯಲ್ಲಿ. ಮೂಕಜ್ಜಿಯ ಮಾತುಗಳು ಹೇಳುವ ಸತ್ಯ ನಿರಂತರ, ಅನಿಸುವಷ್ಟು ಸತ್ಯ.ದೇವ ಒಬ್ಬ ನಾಮ ಹಲವು ಎಂಬ ದನ್ನು ಸರಳವಾಗಿ ಹೇಳ್ತಾಳೆ ಮೂಕಜ್ಜಿ.
ಒಮ್ಮೊಮ್ಮೆ ಅಜ್ಜಿ ನಾಸ್ತಿಕಳೋ ಎಂಬ ಸಂಶಯ ತಲೆದೋರಿದರೆ ಮರುಕ್ಷಣ ”ಅಮ್ಮನ ಹತ್ತಿರ ಹೋಗೋದಿಕ್ಕೆ ಹೆದರಿಕೆ ಯಾಕೆ” ಎನ್ನುತ್ತ ಈ ಜೀವದ ಅಂತಿಮ ಗಮ್ಯ ಆ ತಾಯಿಯ ಆವಾಸವೇ ಎಂದು ಹೇಳಿ ಆ ಭಾವನೆ ಸುಳ್ಳು ಮಾಡ್ತಾಳೆ. ಇದನ್ನೆಲ್ಲ ನೋಡುಗನ ಮನಸ್ಸಿನಲ್ಲಿ ಮೂಡುವ ವಿಚಾರಗಳ ಸುಳಿಯಲ್ಲಿ ಸಾಂಕೇತಿಕವಾಗೂ ಮೂಡಿಸುವ ಸಾಧ್ಯತೆ ಇದೆ ಏನೋ.
ಒಟ್ಟಿನಲ್ಲಿ ಈ ಚಿತ್ರ ನಿರ್ದೇಶಕ ಹಾಗೂ ಪ್ರೇಕ್ಷಕ ಇಬ್ಬರಿಗೂ ಒಂದು ಸವಾಲು. ಈ ಅಪ್ರತಿಮ ಕಾದಂಬರಿಯನ್ನು ಚಿತ್ರ ವಾಗಿ ಪ್ರಸ್ತುತಪಡಿಸಿದ ಶೇಷಾದ್ರಿ ಹಾಗೂ ಅವರ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.






0 Comments