ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಹಮ್ಮದರ ಪ್ರೇಮವೆಂದರೆ ನೀ ಹಿಂಬಾಲಿಸಬೇಕಿರುವ ಉಮರ್ ನೆರಳು.

Just Shafi

ಮದೀನಾ ಕೇ ನೂರ್
ಎದೆಯೊಳಗಿನ ಪ್ರಕಾಶ
ಅರಿತಷ್ಟೂ ಆಗುವುದು
ದಾನಗಳು ರಹಸ್ಯ

😘
ಮದೀನಾದ ಕರುಣೆ
ಭೂಮ್ಯಾಕಾಶ ಸೋಲುವ ತೂಕ
ತೋರಿಕೆಯ ಪ್ರೇಮಗಳಿಗೆ
ಸಾಸಿವೆಯ ಕಿಮ್ಮತ್ತು

😘
ದುರಹಂಕಾರ ಹೊತ್ತ ಸಣ್ಣವರೇ
ಯಾ ಉಮ್ಮತೀ ಎಂದ
ಅನಕ್ಷರಿಯ ಅರಿಯಲು
ನಿನ್ಯಾವ ಪದವಿಯೂ ತೀರಾ ಕಡಿಮೆ

😘
ಅನಾಥರ ನಾಯಕ
ನೊಂದವರ ಸೈನಿಕ
ಮಹಮ್ಮದರ ಅಪ್ಪುಗೆಯಲಿ
ನಿರ್ಗತಿಕರೇ ಅಧಿಕ

😘
ಉಮರ್ ತಿಳಿದಿದೆಯೇ ?
ಬೊಟ್ಟು ಜೇನಿಗೂ ಅನುಮತಿಯ ಕೇಳಿದವರು
ನಾಯಿ ಸತ್ತರೂ ಉತ್ತರಿಸಬೇಕಾದೀತೆಂದು ಅತ್ತವರು
ನಿದಿರೆಯ ಸುಖಕ್ಕಿಂತ ಹಸಿದವರ ಹುಡುಕಿ ನಡೆದವರು
ಮುಹಮ್ಮದರ ಪ್ರೇಮವೆಂದರೆ
ನೀ ಹಿಂಬಾಲಿಸಬೇಕಿರುವ ಉಮರ್ ರ ನೆರಳು.

-ಹೃದಯವೆಲ್ಲ ಮುಹಮ್ಮದ್, ಹೃದಯ ಪೂರ್ತಿ ನೊಂದವರ ನಗು. ಸಲಾಮುನ್ ಅಲೈಕ್ ಯಾ ಹಬೀಬಿ.

‍ಲೇಖಕರು admin

24 December, 2015

2 Comments

  1. mmshaik

    Very nice I’d Mubarak tamagu haagu avadhiya balagakku.

  2. prajna

    very nice feelings. congratulations. your earlier poem was also very good

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading