ನಾಗೇಶ್ ಹೆಗಡೆ ಅಂತಾರೆ: ಕಣ್ಣು ಮುಚ್ಚಿ ಲೈಕ್ ಒತ್ತುವವರು ಹುಷಾರಾಗಿರಿ

ನಾಗೇಶ್ ಹೆಗಡೆ

ಏನಿದು ‘ಅಂಕೀಯ ಅಸಮಾನತೆ?’

ಕನ್ನಡ ಪತ್ರಿಕೆಗಳಲ್ಲಿ ಇಂದು ನಿನ್ನೆ ಎರಡು ಪೂರ್ಣ ಪುಟಗಳ ಫೇಸ್ ಬುಕ್ ಜಾಹೀರಾತು ಬಂದವು. ಯಾರಿಗೂ ಅರ್ಥವಾಗದ ವಿಲಕ್ಷಣ ಭಾಷೆಯಲ್ಲಿ ಫ್ರೀ ಬೇಸಿಕ್ಸ್ ಬಗ್ಗೆ ನಮ್ಮನ್ನೆಲ್ಲ ಪುಸಲಾಯಿಸುವ ಹೇಳಿಕೆಗಳು ಬಂದವು. ಉಚಿತ ಇಂಟರ್ ನೆಟ್ ಕೊಡುತ್ತಾರಂತೆ, TRAIಗೆ ಇದನ್ನು ಜಾರಿಗೊಳಿಸುವಂತೆ ಒತ್ತಾಯ ಮಾಡಬೇಕಂತೆ. ನಾವೆಲ್ಲ ಜೈ ಎನ್ನಬೇಕಂತೆ.

ಈ ಆಮಿಷಕ್ಕೊಳಗಾಗಿ ನಾವೆಲ್ಲ ಲೈಕ್ ಒತ್ತುವಂತೆ ನಮ್ಮ ಅನೇಕ ಸಹೃದಯ ಮಿತ್ರರೂ ಜೈಕಾರ ಹಾಕುತ್ತಿದ್ದಾರೆ. ಇದರ ಹಿಂದಿನ ಕೊಳಕು ಹುಳುಕುಗಳನ್ನು ಈದಿನದ ‘ಪ್ರಜಾವಾಣಿ’ಯಲ್ಲಿ ಇಸ್ಮಾಯಿಲ್ ವಿವರವಾಗಿ ಬರೆದಿದ್ದಾರೆ. ಓದಿ ನಂತರವೇ ಮತ ಚಲಾಯಿಸಿ. ಕಣ್ಣು ಮುಚ್ಚಿ ಲೈಕ್ ಒತ್ತುವವರು ಹುಷಾರಾಗಿರಿ.

ಜಾಹೀರಾತಿನ ಆಮಿಷಕ್ಕೆ ಬಲಿಯಾಗಲೇಬೇಕೆಂದಿದ್ದರೆ ತುಸು ನಿಧಾನವಾಗಿ, ಯುಕ್ತಾಯುಕ್ತ ವಿವೇಚನೆ ಮಾಡಿ ಬಲಿಯಾಗಿ.

‘ಅಂಕೀಯ ಸಮಾನತೆ’ಯ ದಿಕ್ಕಿನಲ್ಲಿ ಪ್ರಥಮ ಹೆಜ್ಜೆ

‘Free Basics by Facebook ಒಂದು 100 ಕೋಟಿ ಭಾರತೀಯರನ್ನು ಮಿನ್ಕಾನ್ಕೆಯ ಉದ್ಯೋಗ, ಶಿಕ್ಷಣ ಮತ್ತು ಅವಕಾಶಗಳೊಂದಿಗೆ ಒಟ್ಟುಗೂಡಿಸುವೆಡೆ ಮತ್ತು ಅಂತಿಮವಾಗಿ ಉನ್ನತಭವಿಷ್ಯದೆಡೆ ಮೊದಲ ಹೆಜ್ಜೆ ಇಟ್ಟಿದೆ. ಆದರೆ Free Basics ನಿಷೇಧಕ್ಕೆ ಒಳಗಾಗುವ ಅಪಾಯಸಾಧ್ಯತೆಯಲ್ಲಿದೆ, ಮತ್ತೆ ಅದರಿಂದಾಗಿ ಅಂಕೀಯಸಮಾನತೆ ಪ್ರಗತ ಮಂದವಾಗಿದೆ

‘Free Basics ಅನ್ನು ಸಮರ್ಥಿಸಿ ಭಾರತವನ್ನು ಪ್ರಗತಿಯ ದಿಕ್ಕಿನಲ್ಲಿ ಮುಂದುವರಿಯುವುದಕ್ಕೆ ಸಹಾಯ ಮಾಡಿ’ ಬಹುತೇಕ ಕನ್ನಡ ಪತ್ರಿಕೆಗಳಲ್ಲಿ ಎರಡು ಪೂರ್ಣ ಪುಟಗಳಲ್ಲಿ ಕಾಣಿಸಿಕೊಂಡ ಈ ಬರಹದ ಏನನ್ನು ಹೇಳುತ್ತಿದೆ? ಇಲ್ಲಿರುವ ‘ಮಿನ್ಕಾನ್ಕೆ’, ‘ಅಂಕೀಯಸಮಾನತೆ’, ‘ಪ್ರಗತ’ ಮುಂತಾದ ಪದಗಳಿಗೆ ಬಳಕೆಗೆ ಲಭ್ಯವಿರುವ ಸಾಮಾನ್ಯ ಪದಕೋಶಗಳಲ್ಲಿ ಅರ್ಥ ಸಿಗುವುದಿಲ್ಲ. ಈ ಕಾರಣದಿಂದಾಗಿಯೇ ಈ ಜಾಹೀರಾತು ಏನನ್ನು ಹೇಳುತ್ತಿದೆ ಎಂಬುದು ಸಾಮಾನ್ಯ ಕನ್ನಡಿಗನಿಗೆ ಅರ್ಥವಾಗುವುದು ಕಷ್ಟ. ಹೆಚ್ಚು ಕಡಿಮೆ ಇದೇ ಬಗೆಯ ಪದಗಳನ್ನು ಹೊಂದಿರುವ ಜಾಹೀರಾತುಗಳು ಬಹುತೇಕ ಎಲ್ಲಾ ಪ್ರಮುಖ ಭಾರತೀಯ ಭಾಷಾ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಈ ಎಲ್ಲಾ ಜಾಹೀರಾತುಗಳನ್ನು ನೀಡಿರುವ ಸಂಸ್ಥೆ ಫೇಸ್‌ಬುಕ್.

ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಪ್ರಕಟಿಸಲಾಗಿರುವ ಈ ಜಾಹೀರಾತುಗಳ ಅರ್ಥವನ್ನು ಶೋಧಿಸುವುದಕ್ಕೆ ಸ್ವಲ್ಪ ಇತಿಹಾಸದ ಮೇಲೆ ಕಣ್ಣು ಹಾಯಿಸಬೇಕಾಗುತ್ತದೆ. ಈ ವರ್ಷ ಮಾರ್ಚ್ ತಿಂಗಳಿನಲ್ಲಿ ಟ್ರಾಯ್ (ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ) ಅಂತರ್ಜಾಲವನ್ನು ಬಳಸಿಕೊಂಡು ನೀಡುವ ವಾಟ್ಸ್ ಆ್ಯಪ್‌ನಂಥ ಸೇವೆಗಳು (ಓಟಿಟಿ ಸೇವೆಗಳು=ಓವರ್ ದ ಟಾಪ್ ) ಮತ್ತು ಅಲಿಪ್ತ ಜಾಲ(ನೆಟ್ ನ್ಯೂಟ್ರಾಲಿಟಿ)ಗಳಿಗೊಂದು ನಿಯಂತ್ರಣ ಚೌಕಟ್ಟನ್ನು ರೂಪಿಸುವುದಕ್ಕಾಗಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವುದಕ್ಕಾಗಿ ಪ್ರಶ್ನಾವಳಿಯೊಂದನ್ನು ರೂಪಿಸಿತ್ತು.  ಇದು ಮೊಬೈಲ್ ಸೇವಾದಾತರ ಪರವಾದ ಅಭಿಪ್ರಾಯವನ್ನು ಸಂಗ್ರಹಿಸುವುದಕ್ಕಾಗಿಯೇ ರೂಪುಗೊಂಡಂತೆ ಕಾಣಿಸುತ್ತಿತ್ತು.

ಸಂಪೂರ್ಣ ಲೇಖನಕ್ಕಾಗಿ ಇಲ್ಲಿ ಒತ್ತಿ

‍ಲೇಖಕರು admin

December 24, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: