ಪ್ರೀತಿ ಇಲ್ಲದ ಮೇಲೆ ಈ ತಾಣ ಹುಟ್ಟೀತು ಹೇಗೆ?

ಪ್ರೀತಿ ಇಲ್ಲದ ಮೇಲೆ ಹಾಡು ಹುಟ್ಟೀತು ಹೇಗೆ? ಎಂದು ಕೇಳಿದ್ದರು ಕವಿ ಜಿ ಎಸ್ ಎಸ್. ಹೌದಲ್ಲಾ, ಪ್ರೀತಿ ಇಲ್ಲದ ಮೇಲೆ ಏನಾದರೂ ಒಂದು ಹೊಸದು ಹುಟ್ಟಲು ಸಾಧ್ಯವೇ? ಹೌದು- ಎನ್ನುವುದನ್ನು ಕನಸಿಗರ ದಂಡೊಂದು ಇಲ್ಲಿ ಸಾಬೀತುಪಡಿಸಿದೆ.

kuntadi nitheshಅಪಾರ ಪ್ರೀತಿಯಿಂದ ಅಡಿಗರನ್ನು ಕಟ್ಟಿಕೊಟ್ಟಿದೆ. ವೆಬ್ ತಾಣಗಳು ಅಕಾಲ ಸಾವನ್ನಪ್ಪುತ್ತಿರುವ ಈ ದಿನಗಳಲ್ಲಿ, ಆನ್ ಲೈನ್ ಎನ್ನುವುದೊಂದು ತಲೆಹರಟೆಯ ತಾಣ ಎಂದು ಭಾವಿಸಿರುವವರ ಮಧ್ಯೆ, ಫೇಸ್ ಬುಕ್ ಎನ್ನುವುದು ಬಾಯ್ಬಡುಕರ ಕೂಟ ಎಂದುಕೊಂಡಿರುವವರ ಮಧ್ಯೆ ಈ ಪ್ರೀತಿ ಮೊಳಕೆ ಒಡೆದಿದೆ.

sankathana‘ಬನವಾಸಿ ಬಳಗ’ ಅಲೆಮಾರಿ ದೇವನೂರು ಮಹಾದೇವರನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಿತ್ತು. ದೇವನೂರು ಮಹಾದೇವರ ಬರಹ, ವಿಡಿಯೋ, ಫೋಟೋ, ಅವರ ಕಾರ್ಯಕ್ರಮ, ಅವರ ಬಗೆಗಿನ ಸುದ್ದಿ, ಭಾಷಣ.. ಹೀಗೆ ಎಲ್ಲವೂ ಒಂದೆಡೆ ಕಾವು ಕುಳಿತಿತ್ತು.

ಈಗ ಕುಂಟಾಡಿ ನಿತೇಶ್ ನೇತೃತ್ವದಲ್ಲಿ ‘ಸಂಕಥನ’ ತಂಡ ಅದೇ ರೀತಿಯ ಸಾಹಸಕ್ಕೆ ಕೈ ಹಾಕಿದೆ. ಅವರು ಆರಿಸಿಕೊಂಡದ್ದು ಕನ್ನಡಕ್ಕೆ ಕಟ್ಟುವ ಕನಸನ್ನು ಕೊಟ್ಟ ಅಡಿಗರನ್ನು. ‘ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು..’ ಎಂದಿದ್ದರು ಅಡಿಗರು. ಅಡಿಗರಿಗೂ ಗೊತ್ತಿರಲಿಲ್ಲ ದಶಕಗಳ ನಂತರ ಈ ರೀತಿ ಒಂದು ಕನಸಿಗರ ತಂಡ ತಮಗೆ ಒಂದು ರಸದ ಬೀಡು ಕಟ್ಟಿ ಕೊಡುತ್ತಾರೆ ಎಂದು.

ಸರಿಯಾಗಿ ಓದಿಕೊಂಡ, ಆಳವಾಗಿ ಪ್ರೀತಿಸಿದ ಮನಸ್ಸುಗಳಿಗೆ ಮಾತ್ರ ಈ ರೀತಿಯ ತಾಣ ಕಟ್ಟಲು ಸಾಧ್ಯ ಎನ್ನುವಂತೆ ಈ ತಾಣ ಮೂಡಿಬಂದಿದೆ.

‘ಕಂಗ್ರಾಟ್ಸ್ ಕುಂತಾಡಿ ನಿತೇಶ್ ಹಾಗೂ ಸಂಕಥನ’ ಎನ್ನಲು ಅವಧಿಗೆ ಖುಷಿ

ಈ ಸಾಹಸಕ್ಕೆ ಕೈ ಜೋಡಿಸಿ. ಧನ ಸಹಾಯ ಮಾಡುವ ಮೂಲಕ, ಅಡಿಗರ ಬಗೆಗೆ ಮಾಹಿತಿ ಒದಗಿಸುವುದರ ಮೂಲಕ..

ಒಡೆಯಲು ಮುಂದಾಗಿರುವ ಕಾಲದಲ್ಲಿ ಕಟ್ಟುವಿಕೆಯಲ್ಲಿ ನಿಮ್ಮ ಕೈಯೂ ಇರಲಿ

adiga sankathana2

 

‍ಲೇಖಕರು Admin

February 19, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಶಮ, ನಂದಿಬೆಟ್ಟ

    ಒಡೆಯಲು ಮುಂದಾಗಿರುವ ಕಾಲದಲ್ಲಿ ಕಟ್ಟುವಿಕೆಯಲ್ಲಿ ನಿಮ್ಮ ಕೈಯೂ ಇರಲಿ

    Congratulations

    ಪ್ರತಿಕ್ರಿಯೆ
  2. Namma Banavasi

    ಆತ್ಮೀಯ ಅವಧಿ ಬಂಧುಗಳೇ,
    ಮತ್ತೊಮ್ಮೆ ಈ ಮೂಲಕ “ನಮ್ಮ ಬನವಾಸಿ” ನೆನಪಿಸಿಕೊಂಡಿದ್ದಕ್ಕೆ ವಂದನೆಗಳು. ಆದರೆ ಈ ಕೆಲಸ ಮಾಡುತ್ತಿರುವುದು{ಈಗಾಗಲೇ ಈ ಹೆಸರಿನಿಂದ ಗುರುತಿಸಿಕೊಂಡಿರುವ} “ಬನವಾಸಿ ಬಳಗ” ಅಲ್ಲ ಎಂದು ವಿನಮ್ರವಾಗಿ ನಿಮ್ಮ ಗಮನಕ್ಕೆ ತರಬಯಸುತ್ತೇವೆ. ನಾವು “ಬನವಾಸಿಗರು”. ಇದು ದೇವನೂರರಿಗೆ ಪ್ರಿಯವಾದ ಪಂಪನ, ಇಡೀ ಕನಾಱಟಕವನ್ನು ಸೂಚಿಸುವ ಬನವಾಸಿಯ ನೆನಪಿಗೆ ಮತ್ತು ಅವರ ಪ್ರೀತಿಯ ತೋಟದ ಹೆಸರೂ ಅದೇ ಆಗಿರುವ ಕಾರಣಕ್ಕೆ ಇಟ್ಟಿರುವ ಹೆಸರು “ನಮ್ಮ ಬನವಾಸಿ”
    ಈ ಬನವಾಸಿಯಲ್ಲಿ[ಕನಾಱಟಕದಲ್ಲಿ} ನಾವು ವಾಸವಿರುವ ಕಾರಣಕ್ಕೆ ನಾವು…….
    “ಬನವಾಸಿಗರು”

    ಪ್ರತಿಕ್ರಿಯೆ
  3. vasudeva nadig

    ADIGARANNU horatu padisi kavya illave illa…kaavyada bhaashe kalisuva guru avaru

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: