ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮುತ್ತು ಕಣ್ಣಿನಲ್ಲಿ ಹುಟ್ಟಿ..' – ಶಾ೦ತಿ ಕವಿತೆ

ತಾಕಿದ್ದು – ತಾಕದ್ದು

ಶಾಂತಿ ಕೆ ಎ.

  ಹುಡುಗಾ , ನನ್ನ ತಾಕಿದ್ದು ಕೇವಲ ನಿನ್ನ ಒರಟು ತುಟಿಗಳು.. ಉಳಿದದ್ದು ನಿನ್ನ ಲೋಳೆ ಎಂಜಲು…. ನಿನ್ನ ಆವೇಶದ ಹಿಡಿತಕ್ಕೆ… ತೋಳು ನಲುಗಿ, ಕೊರಳು ಬಾಗಿದ್ದು ನಿಜವೇ… ಆದರೆ ಆತ್ಮ ತಣ್ಣಗುಳಿಯಿತು.. ನಿನ್ನ ಅವಸರದ ಮುತ್ತು.. ಬಸವನಹುಳುವಿನ ನುಣುಪಿನಂತೆ.. ಮೆತ್ತಗೆ ಜಾರಿಬಿತ್ತು… ಮುಖದ ಗೆರೆಗಳು ಕದಲಿದವು.. ಬೇಡದ ಏನೋ…ಮೈಮೇಲೇ ಬಿದ್ದಂತೆ!! ಜೀವ ಮಿಸುಕದೆ ಸುಮ್ಮನಿತ್ತು.. ಕಣ್ಣಂಚಲ್ಲಿ ಕೇವಲ ಅಸಡ್ಡೆ!! ನಿನ್ನ ತೋಳಬಲಕ್ಕೆ ..ನನ್ನ ಕೋಮಲ ದೇಹ ಸೋತಿರಬಹುದು.. ಆದರೆ ಆಸೆ ಸಣ್ಣಗೆ ಅಲುಗಲೂ ಇಲ್ಲ… ಹುಡುಗಾ… ಮುತ್ತು ಕಣ್ಣಿನಲ್ಲಿ ಹುಟ್ಟಿ …ಕಿವಿಯಂಚನು..ತಾಕಿ.. ಎದೆಬಡಿತದಲಿ..ಜೀಕಿ..ತುಟಿಯಲ್ಲಿ ಸಮಾಪ್ತಿಯಾಗಬೇಕು…. ಮಾತು ಮರೆತ ತುಟಿಗಳಲಿ…ದಿವ್ಯ ಸಂಗೀತ.. ಮೊಳಗಬೇಕು… ದೇಹವಿಡೀ ನಾದದಲಿ ಝೇಂಕರಿಸಬೇಕು.. ಹಾಗೆ ಆತ್ಮವನು ತಾಕಬೇಕು.. ಹುಡುಗಾ ಈಗ ಹೇಳು ಸೋತಿದ್ದು ಯಾರು?        ]]>

‍ಲೇಖಕರು G

28 August, 2012

5 Comments

  1. Manjula Narayanarao

    superagide

  2. samyuktha

    Very nice!

  3. D.RAVI VARMA

    ಹುಡುಗಾ…
    ಮುತ್ತು ಕಣ್ಣಿನಲ್ಲಿ ಹುಟ್ಟಿ …ಕಿವಿಯಂಚನು..ತಾಕಿ..
    ಎದೆಬಡಿತದಲಿ..ಜೀಕಿ..ತುಟಿಯಲ್ಲಿ ಸಮಾಪ್ತಿಯಾಗಬೇಕು….
    ಮಾತು ಮರೆತ ತುಟಿಗಳಲಿ…ದಿವ್ಯ ಸಂಗೀತ..
    ಮೊಳಗಬೇಕು…
    ದೇಹವಿಡೀ ನಾದದಲಿ ಝೇಂಕರಿಸಬೇಕು..
    ಹಾಗೆ ಆತ್ಮವನು ತಾಕಬೇಕು..
    ಹುಡುಗಾ ಈಗ ಹೇಳು ಸೋತಿದ್ದು ಯಾರು?
    ಹಿಂದೊಮ್ಮೆ ಲಂಕೇಶ್ ಅವರು ಕಾವ್ಯ ಕನ್ನಿಕೆಯ ತೊಡೆಯ ಮೇಲೆ ಮಲಗಿ ನಿದ್ರಿಸಬೇಕು ಎಂದು ಬರೆದಿದ್ದರು. ಬಹುಷಃ ನೀವು ಬರೆದ ಕಾವ್ಯ ಕನ್ನಿಕೆಯೇ ಅವರಿಗೆ ಕಾಡಿರಬೇಕು ..ಇದು ಆತ್ಮ ಸಂಗಾತಿಯ ಹುಡುಕಾಟ .ದೈಹಿಕ ಸಂಭಂದ ಗಳಚೆಗಿನ ತೀವ್ರತೆ
    ಮತ್ತು ಅನನ್ಯ ಸಂಭಂದದ ಆಶಯ ,ಹಾಗೆ ನೋಡಿದ್ರೆ ಇಲ್ಲಿ ಮೀರಾ,ಅಕ್ಕಮಹಾದೇವಿಯವರ ಆಶಯವೂ ಇದೆ ..ಅಸ್ತೆ ಅಲ್ಲದೆ ಇಡೀ ಬದುಕಿನ ವಾಸ್ತವ ನೆಲೆಗಟ್ಟಿನಲ್ಲಿ ಹೆಣ್ಣು ಜೀವ ದ ಅತ್ಮದೊಳಗಿನ ಆಶಯಗಳು, ಹೃದಯ ತುಂಬಿದ ಬಯಕೆಗಳು, ಕನಸುಗಳು ಇಲ್ಲಿ heppugattive … ಇದು ನಿರಂತರ hudukaatavaste … ಆ ಹುಡುಕಾಟದ ಹಳಹಳಿಕೆಯಲ್ಲೇ…ನಾವು ಈ ಕಾಲದ ಜೊತೆ ಕಾಲವಶರಾಗಿಬಿದುತ್ತೆವೇನೋ …..
    ನಿಮ್ಮ ಕವನ….ಏನೆಂದು ಬಣ್ಣಿಸಲಿ… ಬಣ್ಣಿಸಲು ನಾನು ಕವಿಯು ಅಲ್ಲ , ಕಾವ್ಯವು ನನಗೆ ಗೊತ್ತಿಲ್ಲ …. ಆದರೆ ಇದು ನನ್ನ ಒಳ ಮನಸ್ಸನ್ನು ತಾಕಿ .. ಕಾಡಿತು .. ಕಾಡುತ್ತಲೇ ಇದೆ …..
    ರವಿ ವರ್ಮ ಹೊಸಪೇಟೆ

  4. Swarna

    Super.

  5. umesh desai

    good one

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading