ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಕ್ತವಾಗಿ ಇರಬಹುದೇ ಮುಂಚೆಯ ಹಾಗೇ?

ಕರೊನಾ ಮಾಯೆ

ಭೂಮಿಕಾ ಎಸ್ ತಗಡೂರು

ಮಾತು ನಿಶಬ್ಧವಾಯಿತು
ನಿಶಬ್ಧ, ನೀರವ ಮೌನವಾಯಿತು
ಪರಿಕಲ್ಪನೆಗಳು, ಆಲೊಚನೆಗಳಾದವು
ಆಲೋಚನೆಗಳಲ್ಲೂ ತಪ್ಪದು
ಆ ದೇವರ ಸಂಚಲನೆ

ಸಂಜೆ ತಂಪಾದ ಗಾಳಿ
ಜೊತೆ ಕರೊನಾದ ಭೀತಿ
ಯಾವ ಪರಿ ನಮ್ಮ ಪ್ರಣ ಹಿಂಡುತ್ತದೆ ಎನ್ನುವ ರೀತಿ

ಮುಕ್ತಿ ಸಿಗುತ್ತದೆಯಾ
ಈ ಮಹಾಮಾರಿ ಕರೊನಾಗೆ?
ಮುಕ್ತವಾಗಿ ಇರಬಹುದೇ
ಮುಂಚೆಯ ಹಾಗೇ?

ಜಗತ್ತಿನ ವಿನಾಶದಲ್ಲೂ,
ನಗೆ ಬೀರುತ್ತಿದೆ
ಮಾನವೀಯ ಗುಣಗಳ
ಪ್ರೀತಿಯ ಛಾಯೆ

ರಕ್ತ ಸಂಬಂಧಗಳ
ನೋವಿನ ಚೀರಾಟವನ್ನೂ
ಕಡಿದು ಹಾಕುತ್ತಿದೆ
ಈ ಕರೊನಾ ಎಂಬ ಮಾಯೆ

ಆದಷ್ಟು ಬೇಗ
ಕೋವಿಡ್-19 ಗೆ
ಆಗಲ್ಲೊಂದು ಸಮಾಪ್ತಿ

ತರಲಿ,
ಎಲ್ಲರ ಮನಸಿನಲ್ಲೂ
ಸಮಾಧಾನ, ಸಂತೃಪ್ತಿ

 

‍ಲೇಖಕರು avadhi

8 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading