ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಳಿಂಗ ಹಾದಿಮನಿ ಕವಿತೆ- ಅರಮನೆ..

ಮಾಳಿಂಗ ಹಾದಿಮನಿ

ಅರಮನೆಯ ಬಾಗಿಲುಗಳು
ಇನ್ನೂ ತೆರೆದೆ ಇವೆ
ಯಾರಿಗಾಗಿ ದಾರಿ ಕಾಯುತಿದೆಯೋ

ಕವಿಕನಸುಗಾರರ ತನ್ನೊಳಗೆ
ತುಂಬಿಕೊಂಡು ನರ್ತನ ನಡೆಸುತಿತ್ತು
ಧೀರರ ಲೀಲೆಗಳ
ಮಹಾರಾಣಿಯರ ಸೌಂದರ್ಯ ಕಣ್ಣಾರೆ
ಕಂಡು ಹಿರಿ ಹಿರಿ ಹಿಗ್ಗುತಿತ್ತು

ಹಬ್ಬ ಹರಿದಿನಗಳಿಗೆ
ಸಿಂಗಾರಗೊಂಡು
ಹಸಿದಹೊಟ್ಟೆಗಳಿಗೆ ಮೃಷ್ಟಾನ್ನ
ಬಡಿಸಿತ್ತು
ಮುತ್ತುರತ್ನಗಳ ರಾಶಿ ಕಾಲುಕಾಲಿಗೆ
ಚೆಲ್ಲಾಡುತಿತ್ತು

ಇಂದು ಪಾಳು ಬಿದ್ದಿದೆ
ಗೋಡೆಯ ಮೇಲೆ ಗರಕಿಹುಲ್ಲು ಬೆಳೆದಿದೆ
ಯಾರು ಕೇಳುವವರಿಲ್ಲ
ಅಲ್ಲೊಂದು ಚೂರು ಬಿದ್ದಿದೆ
ಮಹಾರಾಜರು ಬದುಕಿಲ್ಲ
ಈಗಿನವರಿಗೆ ಬಣ್ಣ ಬಡಿಲಿಕ್ಕಾಗುವುದಿಲ್ಲ

‍ಲೇಖಕರು avadhi

20 May, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading