ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಲಾ ಮ ಅಕ್ಕಿಶೆಟ್ಟಿ ಕವಿತೆ- ಜುಲ್ಮಿ…

ಮಾಲಾ ಮ ಅಕ್ಕಿಶೆಟ್ಟಿ

ಗಿಡದಾಗ ಇರಬೇಕಾದ ಕಾಯಿ
ತಗದ್ ಬುಟ್ಟ್ಯಾಗ ಹಾಕಿ,
ಹಣ್ಣಾಗದಿದ್ದಾಗ ಒತ್ತಿ, ಹಿಚಕಿ
ಬೇಕಾದ್ ಹಣ್ಣಾಗತೈತಿ?
ಕಾಯಿ ಗಿಡದಾಗ ಹಣ್ಣಾದ್ರ ಫಲ
ಒತ್ತಾಯ ಸರ್ವಕಾಲ ಅಸಾಧ್ಯ

ಬ್ಯಾಡಾದ ಶಿಕ್ಷಣದಾಗ ಸರಸ್ವತಿ ಒಲಿಯಲ್ಲ
ಇಚ್ಛಿಸದ ನೌಕರಿಯಾಗ ತೃಪ್ತಿಯಿಲ್ಲ
ತಾನಾಗೇ ಬಂದ ಒಲವಿನ್ಯಾಗ
ಹೂವ್ ಘಮಿಸಿ ಅರಳಲ್ಲ
ಅನಿರೀಕ್ಷಿತ ಸಂಬಂಧಗಳೋಳಗ
ಬದುಕಿನ್ನ ರುಚಿ ಪಸರುದಿಲ್ಲ

ಲೌಕಿಕ ರುಚಿಯುಂಡಾವ
ಅಲೌಕಿಕ ಮಠದ ಮುಖ್ಯಸ್ಥ ಮಾಡಿ,
ಅಲೌಕಿಕದಲ್ಲಿ ಹಾಯಾಗಿರುವ
ಜುಲ್ಮಿಯ ಲೌಕಿಕ ಮದುವೆಯಲ್ಲಿ ಬಂಧಿಸಿ,
ಮಕ್ಕಳಂದ್ರ ದೂರ ಸರಿಯಾಂವ
ಮುದ್ದಾದ ಕೂಸಗಳಿಗೆ ಅಪ್ಪ ಆದಂಗ

ಜೀವನ್ ಪಿಯೂಷ,ಉಳಿದವ್ರಿಗೆ ಪಾಷಾಣ
ಈಜಿ ಜಯಿಸಬೇಕೆನ್ನೊದ ಸರಿ
ನರಕದಾಗ ಬಾಳ್ವೆ ಐತಿ?
ಎಲ್ಲಾ ಜುಲ್ಮಿದ್ssss ಅಗಣಿತ ಬಾಹುಗೋಳ್!!!!
ನಿರೀಕ್ಷೆ ಇದಷ್ಟ ಸ್ವಾದ ಕಡಿಮೆ
ಬರೀ ಒಗರ್ ಒಗರ್ ಒಗರ್!!!

‍ಲೇಖಕರು avadhi

16 January, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading