ಖಂಜೂಸು ಬದುಕಿನ ಜೊತೆಗೆ…
– ಮಂಜುನಾಯಕ್ ಚೆಲ್ಲೂರ್
ಸಣ್ಣಗೆ ಹನಿಯುತಿದೆ ಮಳೆಯಿನ್ನೂ ಮನದ ಬೀದಿಯ ಮೇಲೆ..
ಮಾಯವೋ? ಮಾಯದ ಗಾಯವೋ? ನವೆಯೋದು ನಿಂತಿಲ್ಲ ಎದೆಯಲ್ಲಿ.
ಸುತ್ತೆಲ್ಲ ಕವಿದಿರೋ ಸಂತೆ ಗದ್ದಲದಲ್ಲೂ ಕೇಳುತಿದೆ ಹಾಡೊಂದು ನಂಗಷ್ಟೆ..
ಕತೆಯೊಂದು ಪಟ್ಟಾಗಿ ಕುಳಿತು ಆಕಳಿಸುತಿದೆ ಎದೆಯ ಜಗುಲಿಯ ಮೇಲೆ:
ಸುಟ್ಟರೂ ಸುಗಂಧ ಸವೆಯದ ಸುರಗಿ ಹೂವಿನಂಥ ನೆನಪುಗಳು,
ಕಲ್ಲಾಕಿದರೂ ಸಾಯದ ಕಲ್ಲು ಭಾವಗಳು, ಆಗಾಗ ಚುಚ್ಚುವ ತೆಗೆಯದೇ ಬಿಟ್ಟ ಚಪ್ಪಲಿಯೊಳಗಿನ ಮುಳ್ಳುಗಳು..
ಖಂಜೂಸು ಬದುಕ ಜೊತೆಗಿನ ವಶೀಲಿಯಲ್ಲಿ ಸೋತು ಸುಣ್ಣವಾಗದಿದ್ದಷ್ಟೇ ಸಾಕು ಕನಸುಗಳು






chennaagide kavite..apurNa anisitu..
thank you mmshaik