
ಡಾ.ಸುಜಾತಾ.ಸಿ
ಎಲ್ಲವೂ ನೆಪ ಮಾತ್ರ
ಕಣ್ಣೊಟ ಕೂಡಿಯೂ
ಮರೆತ ಘಳಿಗೆಯಲಿ
ಬಿಗಿದ ಎದೆಯೂ
ಕೂಡಾ ಮಾತನಾಡದೇ ಬಿಮ್ಮನೇ ಧಿಮಾಕಿಗೆ
ಒಳಗಾಗಿ ಮುಖವಾಡ ಹಾಕಿದೆ
ಸರಿದ ಪರದೆಯ ನೋಟಕ್ಕೂ

ಹಳವಂಡಿಸುವ ನಿನ್ನೊಲವೂ
ಅದೆಲ್ಲಿ ಜಾರಿತು ಇಷ್ಟು ಬೇಗ
ಮುಖ ಕಾಣದೆ ತಡವಡಿಸುವ
ನಿನ್ನ ಬೇಗುದಿಗೆ ಸಾವಕಾಶ
ಮುಲಾಮು ಸವರಲು
ಎದುರಾದ ಘಳಿಗೆ ಮರೆತಂತಿದೆ
ಮಾತು ಮುನಿಸಾಗಿ ಅಂತರದ
ಕರ್ಮೋಡ ಕವಿದಾಗ
ಬೊರ್ಗಗರೆತದ ನಾದ ನಿನಾದವಾಗಿ
ಸಿಟ್ಟು ಸೆಡವೂ ಒಟ್ಟೊಟ್ಟಿಗೆ ಸೇರಿ
ಕಣ್ಣರೆಪ್ಪೆ ಹನಿಯಾಗಿ
ಮಾತಿಗಿಳಿದ ಮಧುರತೆ ಮಾಯದ
ಹಕ್ಕಿಯಾಗಿ ಎಲ್ಲಿ ಹಾರಿತೋ
ಹೇಳುವುದು ನೂರಾರು
ಕೇಳುವುದು ಸಾವಿರ
ಏನಿಲ್ಲದೆ ಜಾರಿಕೊಂಡ
ಬದುಕಿಗೆ ಏನಿದೆ ಅರ್ಥ

ದೂರ ಸರಿದರೂ
ನನ್ನಂತರದ ಸುಳಿಯಲಿ ಸುತ್ತಿ
ಸುಳಿದಾಡುವ ಒಲವಿನ ಹಾಡಾಗಿರುವೆ
ಧ್ವನಿಗೆ ಧ್ವನಿಗೂಡಿಸುವ ಒಮ್ಮೆ
ಹಂಬಲವು ಬಾನೆತ್ತರ ಹಾರುವ ಮುನ್ನ
ಸೇರುವ ಬಾನಾಡಿ ಹಕ್ಕಿಗಳಾಗಿ
ಮಳೆಗೆ ಇಳೆಗೆ ಇರುವ ಸಂಭಂಧದಂತೆ
ಕೊನೆಗಾಲದ ಕೊನೆಯವರೆಗೂ
ಅಳಿಯದ ಸ್ನೇಹದ ಸಂಕೊಲೆಯಂತೆ






ಚೆನ್ನಾಗಿದೆ