ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಯದ ಮನದ ಗಾಯಕೆ ಮದ್ದ್ಯಾವುದಿದೆ!

ಸೌಮ್ಯಶ್ರೀ ಎ‌.ಎಸ್.

ಮೈಸೂರು

 

ಮನದ ಗಾಯದ ಗೆರೆಗಳು

ಅದ್ಯಾವ ಮುಲಾಮು

ತಿಕ್ಕಿದರೂ ಮಾಗುತ್ತಲೇ ಇಲ್ಲ!

ಕುರುಹುಗಳ ಕರಗಿಸಲು

ದವಾಖಾನೆಯ ಕದ ತಟ್ಟಿ

ಕಾಲು‌ ಕಾಲ ಸವೆಯಿತಷ್ಟೇ!

 

ಮಾಘ ಮಾಸದ ಚಳಿ

ಗಟ್ಟಿಯಾಗಿ ಬೇರೂರಿ ಕೂತ

ಮರವು ಬಿರಿಯುವ ಕಾಲ!

ಅದ್ಯಾವ ಗಾಳಿಯೂ ನನ್ನತ್ತ

ಸುಳಿಯಬಾರದೆಂದು ಅದೆಷ್ಟು

ಎಚ್ಚರವಿದ್ದರೂ ಸವರಿ ಮರೆಯಾಗುತ್ತದೆ!

 

ಮಾಯವಾದಂತೆ ನಟಿಸಿದ್ದ ಗಾಯ

ಅದ್ಯಾವುದೋ ನೆನಪಿನ ಗಾಳಿ ಬೀಸಿ

ಅರೆಕ್ಷಣ ತಣ್ಣನೆಯ

ಖುಷಿಯ ಅಲೆಯಲ್ಲಿ ತೇಲಿಸಿ

ಮೊಗದಲ್ಲಿ ನಗು ಕುಣಿಯುವ ಮೊದಲೇ

ಮತ್ತಷ್ಟು ಉಲ್ಬಣಿಸಿ ಉರಿ ನೋವಿನಿಂದ

ಕಣ್ಣೀರು ಹರಿಸುತ್ತದೆ!

 

ಮಾಗುತ್ತಿದ್ದ ಗಾಯವ ಅದರಷ್ಟಕ್ಕೆ

ಸುಮ್ಮನೆ ಬಿಡದೆ ಕ್ಷಣದ ಹಿತಕ್ಕೆ

ಮತ್ತಷ್ಟು ಕೆರೆದು ಕರೆದು ಮನದಿಂದ

ಮನೆಯಿಂದ ಕಾಲು ತೆಗೆಯದಂತೆ

ಬಾಗಿಲು ಮುಚ್ಚಿ ಕುಳಿತಂತಿದೆ

 

ನನ್ನದೆಯಲ್ಲಿ ಕದಲದೆ ಕೂತು

ತನ್ನ ಇಚ್ಚೆಯಂತೆ ಮನದ ಕೀಲಿ

ಹಿಡಿದು ಬೊಂಬೆಯಂತೆ ಕುಣಿಸುತ್ತಿರುವ

ಆಟದ ಕೊನೆಯೆಂದು!

ಮರೆಯಾಗದೆ ಮೆರೆಯುತ್ತಿರುವ

ಮಾಯದ  ಮಾಗದ ಮಾಸದ

ಮನದ ಗಾಯಕೆ ಮದ್ದ್ಯಾವುದಿದೆ!

 

‍ಲೇಖಕರು avadhi

16 February, 2020

1 Comment

  1. Chethan Kumar

    Super lines

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading