ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಿಪಾಲರೆಡ್ಡಿ ಸೇಡಂ ಕವಿತೆ – ದೊರೆಸಾನಿ…

ಮಹಿಪಾಲರೆಡ್ಡಿ ಸೇಡಂ

ಎದಿಯಾಗಿನ ನಾಡಿಯೊಳ್ಗ ನಿಂದೇ ಹೆಸ್ರ ಬಡಕೊಳ್ತಿದೆ ದೊರೆಸಾನಿ
ನಿನ್ ಎದಿಯೊಳ್ಗ ನನ್ ಪಿರುತಿ ಬಡಕೊಲಾಗ್ಯಾದ ದೊರೆಸಾನಿ

ನಿನ್ ದೋಸ್ತಿ ದೂರಾದ ಮ್ಯಾಲ ಮೆದುಳಿಗಿ ಮಬ್ ಹತ್ಯಾದ
ಮನ್ಸು ಬೇಗುದಿಯೊಳ್ಗ ಬೆಂದು ಗೋರಿಯಾಗ್ಯಾದ ದೊರೆಸಾನಿ

ನೀ ರ‍್ದ ರ‍್ದ ಕಳಿಸಿರೋ ಪ್ರೇಮದೋಲೆಗಳೀಗ ಕಾಡತಾವ
ಮನ್ಸು ಬಲೆಯೊಳ್ಗ ಸಿಕ್ಹಾಕಿಕೊಂಡು ಒದ್ಯಾಡತಾದ ದೊರೆಸಾನಿ

ನೀ ಅಪ್ಕೊಂಡು ಮುತ್ತಿಟ್ಟ ಶಂಭೋರ ನೆನಪಗೋಳ ಅದಾವ
ಮನ್ಸು ಬೆಂಕಿಯೊಳ್ಗ ಸುಟ್ಟು ಕರಕಲಾಗ್ಯಾದ ದೊರೆಸಾನಿ

ನೀ ಕೊಟ್ಟ ಗುಲಾಬಿ ಹೂವಾ ಅರಳಿಸಬೇಕಿತ್ ಬದುಕು
ಮನ್ಸು ಮುಳ್ಳಿನೊಳ್ಗ ನಲುಗಿ ಗಾಯಗೊಂಡಾದ ದೊರೆಸಾನಿ

ನೀ ಒಂದೂ ಮಾತಾಡದೇ ದಾಟಿಹೋದೆ ಹೊಸ್ತಿಲು `ಮೈನಾ’
ಮನ್ಸು ಹಂದರದೊಳ್ಗ ಹರವಾಗಿ ಕರಗಿಹೋಗ್ಯಾದ ದೊರೆಸಾನಿ

‍ಲೇಖಕರು avadhi

19 February, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading