ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಿಪಾಲರೆಡ್ಡಿ ಮುನ್ನೂರ್ ಹೊಸ ಗಜಲ್

ಮಹಿಪಾಲರೆಡ್ಡಿ ಮುನ್ನೂರ್

ನಿನ್ನೆಯ ರಾತ್ರಿಯಲಿ ಕನಸು ಹತ್ಯೆಯಾದಂತಿದೆ ದೊರೆಸಾನಿ..
ಕಣ್ದೆರೆದರೆ ನೀನಿಲ್ಲ ಬರೀ ಕತ್ತಲೆಯಂತಿದೆ ದೊರೆಸಾನಿ ..

ಹರೆಯ ನೆಪದಲ್ಲಿ ಚಿಗುರುತ್ತಿದ್ದ ನವಿಲುಗರಿಯಂಥ ಸಂಬಂಧಗಳು..
ಬಂಧಕ್ಕೆಂದು ಚಾಚಿದ ಬೊಗಸೆಯಿಂದ ಜಾರಿ ಸೋರಿದಂತಿದೆ ದೊರೆಸಾನಿ..

ಪುಟವೆಲ್ಲ ಪಟಪಟನೆ ತೆರೆದು ನೋಡಿದರೆ ತುಂಬಿವೆ ನಿಟ್ಟುಸಿರುಗಳು ..
ನಲುಗಿದ ಪದಗಳೆಲ್ಲ ಎದೆಯಿಂದ ಜಾರತಿರುವ ಸೆರಗಿನಂತಿದೆ ದೊರೆಸಾನಿ..

ಪ್ರತಿಷ್ಠೆ ತುಂಬಿದ ಮಾತಿನ ಮನೆಯಲ್ಲಿಲ್ಲ ಲವಲವಿಕೆಯ ತುಣುಕುಗಳು..
ಯಾವ ಸಂಬಂಧವಿಲ್ಲದ ಲಡಾಯಿ ಗತ ಅಪಮಾನದಂತಿದೆ ದೊರೆಸಾನಿ..

ಆ ರಾತ್ರಿ ಸತಾಯಿಸಿ ಸಾಯಿಸುತ ನೀ ಮರೆಯಾದ ಕ್ಷಣಗಳು..
‘ಮೈನಾ’ ಕಣ್ಣ ಕೊನೆಯಲ್ಲಿ ಸತ್ತ ಕನಸು ಹೊರಳಿ ಬಿಕ್ಕುವಂತಿದೆ ದೊರೆಸಾನಿ

‍ಲೇಖಕರು Avadhi

13 June, 2021

1 Comment

  1. Sharanagouda Patil

    Nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading