ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾದೇವ ಎಸ್ ಪಾಟೀಲ ಕವಿತೆ – ಕಾಣದಂತೆ ಹೋದಳು…

ಮಹಾದೇವ ಎಸ್ ಪಾಟೀಲ

ಮಾತಾಡಿಸಿದರು ಮಾತಾಡದಂತೆ ಹೋದಳು
ಎದುರುಬದುರಾದರು ನೋಡದಂತೆ ಹೋದಳು

ಪ್ರೇಮದ ಪತ್ರಗಳು ಬರೆದು ಬರೆದು ಹಾಕಿದೆ
ಹರಿದು ಹಾಕಿ ಕಣ್ಣಿಗೂ ಕಾಣದಂತೆ ಹೋದಳು

ಮಾತು ಮಾತಿನಲಿ ಪ್ರೀತಿಯ ಮಳೆ ಸುರಿದು
ತಂಗಾಳಿ ಬೀಸಿ ಬೀರುಗಾಳಿಯಂತೆ ಹೋದಳು

ಹಗಲಿರುಳು ಅವಳಿಗಾಗಿ ಶಭರಿಯಂತೆ ಕಾದೆ
ಪ್ರೇಮದಿಂದ ತಾಕಿದರು ಕರಗದಂತೆ ಹೋದಳು

ಎದೆಗೂಡಲಿ ಗುಬ್ಬಿಗೂಡು ಕಟ್ಟಿ ಆಡಿನಲಿದಳು
ಮೌನವ ಮುರಿದು ಮರೆತವರಂತೆ ಹೋದಳು

ಒಂದು ರಾತ್ರಿ ನಸುನಕ್ಕು ಶೃಂಗಾರ ಕಾವ್ಯ ಹಾಡಿ
ನನ್ನ ಕೈಗೆ ಸಿಗದೆ ಮಾಯಾಜಿಂಕೆಯಂತೆ ಹೋದಳು

ಮಹಾದೇವನಿಗೆ ಹಾಡಲು ಕೈಗೆ ತಂಬೂರಿ ಕೊಟ್ಟು
ಹಗಲುಗುರಡನ ಮಾಡಿ ಪರದೇಶಿಯಂತೆ ಹೋದಳು

‍ಲೇಖಕರು Admin

30 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading