ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮನವ ಸೂರೆಗೊಂಡಿರುವಳು…

ಮಹಾದೇವ ‌ಎಸ್ ಪಾಟೀಲ

ಮದಿರೆ ಕುಡಿಯದೆ ಹೊತ್ತು ಮುಳುಗುವುದಿಲ್ಲ ನನಗೆ
ಪ್ರೀತಿಯಿಲ್ಲದೆ ಕ್ಷಣವೂ ಬದಕಲಾಗುವುದಿಲ್ಲ ನನಗೆ

ಅವಳೆಂದರೆ ನಗು ಮೋಹದ ಮಧು ಪಾತ್ರೆಯಂತೆ
ಕುಡಿದ ನಶೆ ಇಳಿಯದೆ ಚಲಿಸಲಾಗುವುದಿಲ್ಲ ನನಗೆ

ಪ್ರತಿ ಕೃತಿಗಳಿಗೂ ಅವಳೆ ಮುನ್ನುಡಿ, ಅವಳೆ ಬೆನ್ನುಡಿ
ಮಧುಶಾಲೆ ಬಿಟ್ಟು ಉಸಿರಾಡಲಾಗುವುದಿಲ್ಲ ನನಗೆ

ಪ್ರೇಮದ ನಶೆಯು ಬಿಡಿಸಲಾಗದ ಬಂಧನವಾಗಿದೆ
ಕುಡಿಯದೇ ಗಜಲ್ ಬರೆಯಲಾಗುವುದಿಲ್ಲ ನನಗೆ

ನನ್ನ ಎದಿಯಾಗ ನಲ್ಮೆಯ ದೀಪ ಹಚ್ಚಿದವಳವಳು
ಉಸಿರಿರುವವರೆಗೂ ಮರೆಯಲಾಗುವುದಿಲ್ಲ ನನಗೆ

ವಿರಹದುರಿಯಲಿ ಮನವ ಸೂರೆಗೊಂಡಿರುವಳು
ಅವಳಿಲ್ಲದ ದೋಣಿ ಮುಂದೆ ಸಾಗುವುದಿಲ್ಲ ನನಗೆ

ಮಹಾದೇವನಿಗೆ ಕುಡಿತ ವಾಸಿಯಾಗದ ಖಾಯಿಲೆ
ಅವಳನ್ನು ಮರೆತು ಬದುಕಿರಲು ಸಾಧ್ಯವಿಲ್ಲ ನನಗೆ

‍ಲೇಖಕರು Admin

30 December, 2021

1 Comment

  1. Bi

    ಸೊಗಸಾದ ಭಾವ ತುಳುಕಿಸುವ ಗಝಲ್..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading