ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಮತ್ತೆ ಅಳು ಬಂತು' – ಹೇಮಾ ಕಳ್ಳಂಬೆಳ್ಳ

– ಹೇಮಾ ಕಳ್ಳಂಬೆಳ್ಳ

ನಾನು ಹುಟ್ಟಿದ ಮೊದಲ ದಿನ
ನಾನು ಹುಟ್ಟಿದ್ದೇ
ಅಳು ಅಳುತ್ತಾ…
 
ಲೇಬರ್‌ ವಾರ್ಡಿನಿಂದ ಜೋಪಾನವಾಗಿ
ಹೊರಗೆ ತಂದ ದಾದಿ
ಅಪ್ಪನ ಅಂಗೈಗಳಲ್ಲಿ
ನನ್ನನಿಟ್ಟಳು
ಹೂ ಬುಟ್ಟಿಯೊಳಗಿಡುವ ಹಣ್ಣಿನಂತೆ
 
ಅಪ್ಪನ ಅಂಗೈಗಳಲ್ಲಿ
ಸ್ವರ್ಗವಿತ್ತು
ಅಪ್ಪನ ಕಣ್ಣ ಕಡಲಿನಲಿ
ಸಂತಸದ ಅಲೆಗಳು
ಜಿಗಿ ಜಿಗಿದು ಕುಣಿದಿದ್ದವು
 
ಅಪ್ಪನ ನಗು ಮುಖವ ನೋಡಿ
ಅಳು ನಿಲ್ಲಿಸಿ
ನಾನೂ ನಗಲಾರಂಭಿಸಿದೆ
 
ಪಕ್ಕದಲ್ಲೇ ಕೂತಿದ್ದ ಅಜ್ಜಿ-
‘ಏನೂ, ಹೆಣ್ಣು ಮಗೂನಾ?’
ಅಂದಾಗ
ಮತ್ತೆ ಅಳು ಬಂತು.
 

‍ಲೇಖಕರು G

2 March, 2015

5 Comments

  1. Kantha

    good one..

  2. Chandra

    ಅಪ್ಪನ ಕಣ್ಣ ಕಡಲಿನಲಿ
    ಸಂತಸದ ಅಲೆಗಳು
    ಜಿಗಿ ಜಿಗಿದು ಕುಣಿದಿದ್ದವು !!!!!! Nice

  3. umavallish

    Ajji ya avivekakke nanage nagu banthu

  4. Rohini Satya

    Mottamodala aluvige saantvana illa. Ekendare aa alu idee jeevanada usiru. Aadare idee jeevanavannu alu himbaalisuvudu viparyaasave sari.kavana chennagide!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading