ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಣಗಟ್ಟಲೆ ಕಥೆ ಸಿಗುವುದು ಮಾರುಕಟ್ಟೆಯಲಿ..

shivaji praveen

ಶಿವಾಜಿ ಪ್ರವೀಣ್ 

ಕಣ್ಣರಳಿಸಿ ಮೈಯೆಲ್ಲ ಕಿವಿಯಾಗಿಸಿ

ನಡೆದರೆ

ಮಣಗಟ್ಟಲೆ ಕಥೆ ಸಿಗುವುದು

ಮಾರುಕಟ್ಟೆಯಲಿ..
……………………………..

ಮರಳು ಮೂಟೆ ಹೊತ್ತವಳ

ಮುಂಗುರಳ ನೋಡಲು

ಗಾಳಿ ತವಕಿಸುತ್ತಿತ್ತು..
………………………………

ಯಾರದೋ ಮನೆಗೆf8652776861009785d9258e73d4da770

ಇಟ್ಟಿಗೆ ಹೊರುತ್ತಿದ್ದಾಳೆ

ಜೋಪಡಿಯಲ್ಲಿ ಆಡುತ್ತಿರುವ ಕಂದನಿಗಾಗಿ..
……………………………….

ಏಕಾಂಗಿಯ ಒದ್ದಾಟ

ನೋಡಲಾಗದೆ

ಹಲ್ಲಿ ಲೊಚಗುಟ್ಟುತ್ತಿದೆ
……………………………

ಗೋಡೆಗಂಟಿದ ಹಲ್ಲಿಯ

ಗೆಳೆತನ ಸಿಗುವುದು

ಏಕಾಂಗಿಗಷ್ಟೇ..
……………………………

ಎಚ್ಚರವಿಲ್ಲದವನಂತೆ

ಮಲಗಿದವನ ಕಂಡು

ಕನಸು ನಗುತ್ತಿತ್ತು
……………………………

ಗಾಳಿಗೆ ದೀಪವಾರಿದಾಗ

ಕತ್ತಲಿಗೆ ಅಮ್ಮ ಬೆಚ್ಚಿದಳು..

ಬದುಕಿಗೆ ಕಗ್ಗತ್ತಲು ಕವಿದಾಗ

ಹೆದರಲಿಲ್ಲ.
………………………….

ಹೊಸ ಚಪ್ಪಲಿಯ ಬಳಿ

ಅಂಗಾಲು

ಹಳೆ ಚಪ್ಪಲಿಯ ಕತೆ ಹೇಳುತ್ತಿದೆ

…………………………………

ನೂರಾರು ಮೈಲಿ ನಡೆದವನೊಬ್ಬ

ಕಾಲು ತೊಳೆದ

ಪಾದ ಧೂಳು ಎರಡಕ್ಕೂ

ವಿದಾಯದ ನೋವು.
…………………………………..

ಏನನ್ನೋ ಕಳೆದುಕೊಂಡವನಂತೆ

ಹುಡುಕುತ್ತ ಹೊರಟವನು

ಮಗುವಿನ ನಗು ಕಂಡು

ಸುಮ್ಮನೆ ನಿಂತ.
……………………………….

ಬಾನ ಚುಕ್ಕಿಗಳ ತೋರಿಸಿ

ಅಕ್ಕ ಹೇಳಿದಳು..

ನೋಡೋ ತಮ್ಮಾ

ನಕ್ಷತ್ರ ಮಲ್ಲಿಗೆ ಆಕಾಶದಲ್ಲಿ
…………………………………….

ಕೆಸರಲ್ಲಿ ಹಾವು ಹರಿಯುತ್ತಿದೆ

ತನ್ನ ಚಿತ್ರವನ್ನ

ತಾನೇ ಬಿಡಿಸುತ್ತ
……………………………..

ಗುಮ್ಮನಿಂದ ರಕ್ಷಿಸಲು

ಅಮ್ಮ ಬಳಸಿದಳು

ಸೆರಗನ್ನ..

…………………………….

ಹರಿದ ಚಾದರವ ಹೊದಿಸಿದಳು

ಅಮ್ಮ ಕಂದನ ಮೊಗ

ಚಂದಿರನಿಗೆ ಕಾಣಲೆಂದು

 

‍ಲೇಖಕರು admin

5 March, 2016

2 Comments

  1. Paramesh

    Chenda ide………..

  2. pallavi

    Superb

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading