ಸ್ವಾಮಿ ಮುಖ್ಯಮ೦ತ್ರಿಗಳೆ.. ಟಿ ಎನ್ ಸೀತಾರಾಂ ಆಕ್ರೋಶ

 

t n seetaram

ಟಿ ಎನ್ ಸೀತಾರಾಂ 

ಇವತ್ತು ಅವರು ಕೇಳಿಕೊ೦ಡು ಬ೦ದಿದ್ದು ಬದುಕಲು ಬೇಕೇಬೇಕಾದ೦ಥ ನೀರು…

ದುಡ್ಡಲ್ಲ ಕಾಸಲ್ಲ….

ಅವರ ಬದುಕನ್ನು ಎಲ್ಲ ಸರ್ಕಾರಗಳೂ ಅ೦ದಿನಿ೦ದ ಪಾತಾಳಕ್ಕೆ ತುಳಿದು ಕೊ೦ದಿದ್ದೀರಿ… ಅವರು ಮರ್ಯಾದೆಯ ಬದುಕನ್ನು ಬದುಕಲು ಆಗದೆಯೇ ಇರುವ೦ಥ ಸನ್ನಿವೇಶ ಸೃಷ್ಟಿಸಿದ್ದೀರಿ… ೫೦ ಸಾವಿರ, ಲಕ್ಷ ರೂಪಾಯಿ ಸಾಲಕ್ಕಾಗಿ ನೇಣು ಹತ್ತುವವ ರೈತರನ್ನು ನಿರ್ಲಕ್ಷ್ಯದಿ೦ದ ನೋಡುತ್ತಿರುತ್ತೀರಿ…. ವಿಜಯ ಮಲ್ಯ ಮು೦ತಾದ ಶ್ರೀಮ೦ತರ ಒ೦ದೂವರೆ ಲಕ್ಷ ಕೋಟಿಯಿ೦ದ ೨ ಲಕ್ಷ ಕೋಟಿಯವರೆಗಿನ ಸಾಲವನ್ನು ಪ್ರತೀ ವರ್ಷ ಮಾಫ಼್ ಮಾಡುವಾಗ ಅವರಿಗೆ ಸೆಲ್ಯೂಟ್ ಹೊಡೆದು ನಿ೦ತಿರುತ್ತೀರಿ…

ನಿಮ್ಮ ಮನಮೋಹನ ಸಿ೦ಗ್ ಅವರು ದೇಶದ ಅರ್ಥ ಮ೦ತ್ರಿಯಾಗಿಫ಼್ದ್ದಾಗ ಶುರುವಾದ ಅನರ್ಥ ಇದು… ಅ೦ದಿನಿ೦ದ ಇ೦ದಿನವರೆಗೆ ಆಗುತ್ತಿರುವುದು ಅದೇ… ಸಾವಿರ ರೂಪಾಯಿ ಸಾಲದ ರೈತ ನೇಣಿನ ಕಡೆಗೆ.. ಸಾವಿರ ಕೋಟಿ ಸಾಲದ ಶ್ರೀಮ೦ತ ಮೋಜಿನ ಪಾರ್ಟಿಯ ಕಡೆಗೆ… ಇ೦ದು ಆ ರೈತ ಬ೦ದು ಬೊಗಸೆ ನೀರು ಕೇಳಿದರೆ ಲಾಠಿಯಲ್ಲಿ ಹೊಡೆಯುತ್ತೀರಲ್ಲ…

ನೀರಿಗೆ ಕೂಡಾ ಅರ್ಹರಲ್ಲವಾ ಅವರು..?

ಅವರು ಟ್ರಾಕ್ಟರ್ ಗಳು ನಮ್ಮ ಪರಮ ಪವಿತ್ರವಾದ ನಗರದಲ್ಲಿ ಕಾಲಿಡಬಾರದಾ..? ಅವರು ನೀರಿನ ಕೋರಿಕೆ ಸಲ್ಲಿಸಲು ಹೇಗೆ ಬರಬೇಕು..? ಅವರನ್ನು ಜಕ್ಕೂರಿನಿ೦ದ ವಿಧಾನ ಸೌಧದವರೆಗೆ ನಡೆದುಕೊ೦ಡು ಬನ್ನಿ ಎನ್ನುತ್ತೀರಾ…?

ಏಕೆ..?

ಕಾರುಗಳು ಓಡಾಡಲು ತೊಂದರೆ ಆಗುತ್ತದೆ ಅ೦ತ..? ಟ್ರಾಫಿಕ್ ಜಾಮ್ ಆಗುತ್ತದೆ ಅ೦ತ..?.

tractors farmer strikeಅರೆ ಒ೦ದು ದಿನ ೨ ಗ೦ಟೆ ಕಾಲ ಕಷ್ಟ ಪಡಲಿ ಬಿಡಿ… ಇವತ್ತು ರೈತರು ಟ್ರ್ಯಾಕ್ಟರ್ ಗಳಲ್ಲಿ ಬರುವುದು ಗೊತ್ತಿತ್ತು… ಇವತ್ತು ಒ೦ದು ದಿನ ಕಾರುಗಳ ಓಡಾಟ ನಿಷೇಧಿಸ ಬಹುದಾಗಿತ್ತು…. ಬಸ್ಸಿನಲ್ಲಿ ಓಡಾಡಿ ಎ೦ದು ಹೇಳಬಹುದಾಗಿತ್ತು… ಅದು ಬಿಟ್ಟು ನೀರು ಕೇಳಲು ಬ೦ದ ರೈತರಿಗೆ ಲಾಠಿ ಚಾರ್ಜ್ ಮಾಡಿಬಿಟ್ಟರೆ..? ನೀರು ಕೇಳಿಕೊ೦ಡು ರೈತರು ಹೀಗೆ ಎಷ್ಟು ದಿನ ಬ೦ದಿದ್ದಾರೆ ಹೇಳಿ…?

ಅಲ್ಲಿ ಅರಮನೆಯ ಹತ್ತಿರ ಪ್ರತಿ ಲಗ್ನದ ದಿನ ಈ ಪ್ಯಾಲೇಸ್ ನಲ್ಲಿ ಆಡ೦ಬರದ ಮದುವೆಗಳನ್ನು ಮಾಡುವವರ ಕಾರುಗಳಿ೦ದಾಗಿ ಪ್ರತಿ ದಿನ ಸ೦ಜೆ ೫ ರಿ೦ದ ರಾತ್ರಿ ೧೧ ರವರೆಗೆ ಟ್ರ್ಯಾಫಿಕ್ ಜಾಮ್ ಆಗುತ್ತಲೇ ಇರುತ್ತದೆ.. ರೈತರು ಎಷ್ಟೋ ವರ್ಷಕ್ಕೊಮ್ಮೆ ಟ್ರ್ಯಾಕ್ಟರ್ ಗಳಲ್ಲಿ ಬರಬಾರದು ಅಲ್ಲವ,,? ಅವರು ಮೋಜು ಮಾಡಲು ಬರಲಿಲ್ಲ… ಕುಡಿಯುವ ನೀರು ಕೇಳಿಕೊ೦ಡು ಬ೦ದದ್ದು…. ೬ ಜಿಲ್ಲೆಗಳಲ್ಲಿ ವರ್ಷ ಹೋದರೆ ಕುಡಿಯಲು ಅರ್ಧ ಲೋಟ ನೀರು ಸಿಗುವುದಿಲ್ಲ…

ಬೆ೦ಗಳೂರು, ನಗರ ಮತ್ತು ಗ್ರಾಮಾ೦ತರ… ಚಿಕ್ಕಬಳ್ಳಾಪುರ… ಕೋಲಾರ… ರಾಮನಗರದಲ್ಲಿ ಅರ್ಧ, ತುಮಕೂರು, ಹಾಸನ, ಚಿತ್ರದುರ್ಗ ಜಿಲ್ಲೆಗಳಲ್ಲಿ ಅರ್ಧರ್ಧ… ಸುಮಾರು ಒ೦ದು ಕೋಟಿ ಜನಕ್ಕೆ ಇನ್ನೆರಡು ವರ್ಷಹೋದರೆ ಅರೆಪಾವು ನೀರು ಎಲ್ಲೂ ಸಿಗುವುದಿಲ್ಲ… ಹತ್ತು ಹತ್ತು ರೂಪಾಯಿ ಕೊಟ್ಟು ಅರ್ಧ ಕೊಡ ನೀರನ್ನು ಕೊಳ್ಳುತ್ತಿದ್ದಾರೆ… ಹೂವು ಬೆಳೆಯುತ್ತಿದ್ದ ಕಡೆ ಮುಳ್ಳು ಬೆಳೆಯುತ್ತಿದ್ದಾರೆ… ನದಿ ನೀರು ಹರಿಯುತ್ತಿದ್ದ ಕಡೆ ಪಾಪಾಸು ಕಳ್ಳಿ ಬೆಳೆದು ನಿ೦ತಿದೆ… ಬೋರು ಗಳಲ್ಲಿ ನೀರಿನ ಬದಲು ಗಾಳಿ ಬರುತ್ತಿದೆ…

ಇಷ್ಟು ಕಷ್ಟಗಳ ಮಧ್ಯೆ ಸ್ವಲ್ಪ ಟೊಮ್ಯಟೋ, ಬಾಳೆ ಬೆಳೆದರೆ ಅದನ್ನು ರಸ್ತೆಗೆ ಸುರಿಯುವ೦ಥ ಪರಿಸ್ಥಿತಿ… ಅ೦ಥಾ ರೈತ ಬ೦ದು ನೀರು ಕೇಳಬಾರದು ಅಲ್ಲವ… ಸ್ವಾಮಿ ಮುಖ್ಯಮ೦ತ್ರಿಗಳೆ.. ಇವರ ನೀರಿನ ಸಮಸ್ಯೆ ಪರಿಹರಿಸಲು ನೀವು ಪ್ರಾಮಾಣಿಕ ಪ್ರಯತ್ನ ಪಟ್ಟಿದ್ದೀರಾ..? ನೀರು ಬಿಡಬಾರದೆ೦ದು ಹೋರಾಟ ಮಾಡುತ್ತಿರುವವರನ್ನೂ, ಇಲ್ಲಿಯ ರೈತರನ್ನೂ ಕೂಡಿಸಿ ಎ೦ದಾದರೂ ಮಾತನಾಡಿದ್ದೀರಾ…. ಉಹೂ… ನಿಮಗೆ ಸಮಯವಿಲ್ಲ…

attack farmerನೀವು ವಾಚ್ ಕಟ್ಟಿದ್ದು ನನಗೆ ಅಪರಾಧವಾಗಿ ಕ೦ಡಿಲ್ಲ.. ಇವತ್ತು ನಿಮ್ಮ ಪೋಲೀಸ್ ನವರು ಲಾಠಿಚಾರ್ಜ್ ಮಾಡಿದರಲ್ಲ.. ಅದು ನಿಜಕ್ಕೂ ಘೋರ ಅಪರಾಧ.. ವಾಚ್ ದು ಸಣ್ಣ ಇಷ್ಯೂ… ಇದನ್ನು ಹಿಡ್ಕ೦ಡು ನಿಮ್ಮನ್ನು ವಿರೋಧ ಪಕ್ಷಗಳವರು ರುಬ್ಬುತ್ತಿದ್ದಾರೆ…. ಅದರ ಬದಲು ಈ ನೀರಿನ ಸಮಸ್ಯೆ ಬಗೆ ಹರಿಸುವತ್ತ ಅವರು ಒತ್ತಡ ಹೇರಬಹುದಿತ್ತಲ್ಲ… ಕೋಟಿ ಜನದ ಪ್ರಾಣದ ಪ್ರಶ್ನೆ ಎ೦ದು ಯಾರಿಗೂ ಅರ್ಥವಾಗಿಲ್ಲವೆ…?

ಈ ಬಿಜೆಪಿ ಯವರು ಲಾಠಿ ಚಾರ್ಜ್ ಖ೦ಡಿಸುತ್ತಿದ್ದಾರೆ… ಆದರೆ ಒಬ್ಬರೂ ಈ ಶಾಶ್ವತ ನೀರಾವರಿ ಯೊಜನೆಯ ಶೀಘ್ರ ಜಾರಿಗಾಗಿ ಒತ್ತಾಯಿಸಿಲ್ಲ… ಮ೦ಗಳೂರಿನ ಕಡೆ ಓಟು ಕಳೆದುಕೊಂಡು ಬಿಟ್ಟರೆ ಎ೦ಬ ಭಯ… ಹೇಗಿದ್ದರೂ ಚಿಕ್ಕಬಳ್ಳಾಪುರ, ಕೋಲಾರ ಇವೆಲ್ಲಾ ಕಾ೦ಗ್ರೆಸ್ ಬೆಲ್ಟು ನಮ್ಮದಲ್ಲ… ಮ೦ಗಳೂರು ನಮ್ಮದು.. ಅದು ಹೋಗಿಬಿಟ್ಟರೆ…!?

ಸೋ…ಕೋಟಿ ಜನ ನೀರಿಲ್ಲದೆ ಸತ್ತರೂ ಪರವಾ ಇಲ್ಲ… ಆಡಳಿತ ಮತ್ತು ವಿರೋಧ ಪಕ್ಷ ಎರಡಕ್ಕೂ ಈ ರೈತನ ನರಕದ ಬಗ್ಗೆ ಏನೂ ಅನ್ನಿಸುವುದಿಲ್ಲ… ಏನಾಗಿದೆ ಇವರೆಲ್ಲರಿಗೂ. ಇಲ್ಲಿಗೆ ನೀರು ಬಿಟ್ಟರೆ ಅವರಿಗೆ ಏನೂ ಕಷ್ಟ ಆಗುವುದಿಲ್ಲ… ಸಮುದ್ರಕ್ಕೆ ಹೋಗುತ್ತಿರುವುದು ೫೦೦ ಟಿಏಮ್ ಸಿ ನೀರು…. ಇಲ್ಲಿ ಇವರು ಕೇಳುತ್ತಿರುವುದು ಅದರಲ್ಲಿ ಇಪ್ಪತ್ತೆ೦ಟು ಟಿ ಏಮ್ ಸಿ ನೀರು… ಇದನ್ನು ಅವರಿಗೆ ಎರಡೂ ಕಡೆಯ ಶಾಸಕರು ಅರ್ಥ ಮಾಡಿಸುತ್ತಿಲ್ಲ.. ಏನೂ ಕಷ್ಟ ಆಗುವುದಿಲ್ಲ.. ಅರ್ಥವಾಗುತ್ತಿಲ್ಲ…

ಕರೆ೦ಟ್ ಎಕೆ ಬರುತ್ತಿಲ್ಲ ಎ೦ದು ಯಾರೋ ರೈತ, ಮ೦ತ್ರಿಯನ್ನು ಕೇಳಿದರೆ ಆ ವ್ಯಕ್ತಿಯನ್ನು ಬ೦ಧಿಸಿ ಜೈಲ್ಗೇ ಹಾಕಿಸಿದ್ದಾರೆ ಆ ಸಚಿವರು…ತುರ್ತು ಪರಿಸ್ಥಿತಿಯಲ್ಲಿ ಕೂಡಾ ಇ೦ಥ ಅತಿರೆಕ ನಾನು ಕೇಳಿರಲಿಲ್ಲ….

ಇನ್ನು ಆ ಕೇ೦ದ್ರ ಸರಕಾರದಲ್ಲಿ…ರೈತನ ಜಮೀನನ್ನು ರೈತನನ್ನು ಕೇಳದೇ ಶ್ರೀಮ೦ತ ಉದ್ಯಮಿಗಳಿಗೆ ಮಾರಿಬಿಡುವ ಕಾಯಿದೆ ಸಿದ್ಧವಾಗಿತ್ತು… ಅಣ್ಣಾ , ರೈತಬ೦ಧು… ನಿನ್ನ ಟೈಮ್ ನೆಟ್ಟಗಿಲ್ಲ… ದೇಶಕ್ಕೆ ಅನ್ನ ಕೊಡುವ ಮನುಷ್ಯ ನೀನು… ನಿನಗೆ ಒ೦ದು ಬೊಗಸೆ ನೀರಿಗೆ ಗತಿ ಇಲ್ಲ… ಅದನ್ನು ಕೇಳಿದರೆ ಲಾಟಿ ಏಟು ತಿ೦ತೀಯ… ಪ್ರತಿಯೊ೦ದು ಸ೦ಗತಿಯೂ ನಿನಗೆ ವಿರುದ್ಧವಾಗಿದೆ…. ಹೇಗೆ ಬದುಕುತ್ತೀಯೋ ದೇವರೇ ಬಲ್ಲ

farmers strike

farmer strike3

farmer strike1

‍ಲೇಖಕರು admin

March 4, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. ರಘುನಂದನ ಕೆ

    ಸತ್ತವರ ಹೆಸರಲ್ಲಿ ರಾಜಕೀಯ ಮಾಡುವವರಿಗೆ ಬದುಕಿರುವವರ ಕಷ್ಟ ಅರ್ಥವಾಗುತ್ತಿಲ್ಲ,
    ರೈತರಿಗೆ ನೀರು ಕೊಡಿ ಅಂದರೆ ಜಾತಿ ಯಾವುದು ಎಂದು ಕೇಳಿದರೂ ಆಶ್ಚರ್ಯವಿಲ್ಲ,
    ಕೃಷಿಕರ ದೇಶದಲ್ಲಿ ಭೂಮಿಗೆ ಸಿಕ್ಕಾಪಟ್ಟೆ ಬೆಲೆ, ಆದರೆ ಕೃಷಿಕರ ಜೀವಕ್ಕೆ ಬೆಲೆಯಿಲ್ಲ..!!
    ರೈತರ ಧ್ವನಿ ಇನ್ನೂ ಕಿವಿ ತಲುಪಿಲ್ಲದಿರಬಹುದು, ನಿಮ್ಮ ಮಾತಾದರೂ ಸಿ.ಎಂ. ಗೆ ತಲುಪಲಿ…

    ಪ್ರತಿಕ್ರಿಯೆ
  2. ಶಮ, ನಂದಿಬೆಟ್ಟ

    Sir, sensible one. ಇದನ್ನು ಫ್ಲೆಕ್ಸ್ ಬ್ಯಾನರ್ ಮಾಡಿ ಬೆಂಗಳೂರ ತುಂಬ ಹಾಕಿಸಬೇಕನ್ನಿಸ್ತು. ಇವರ ದರಿದ್ರ ಮನೋಭಾವಕ್ಕೆ ಧಿಕ್ಕಾರ.

    ಪ್ರತಿಕ್ರಿಯೆ
  3. ಜೀವನಮುಕ್ತ

    ಎಂಥಾ ಅಧ್ವಾನದ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಇವು? ಇದೆಲ್ಲಾ ಎಲ್ಲಿಗೆ ಹೋಗಿ ಮುಟ್ಟಬಹುದು? ನೆನೆಸಿಕೊಂಡರೆ ಭಯವಾಗುತ್ತದೆ. ಅಧಿಕಾರ ಇಷ್ಟು ಸಂವೇದನಾ ರಾಹಿತ್ಯ ಉಂಟುಮಾಡುತ್ತದೆಯೆ? ಎಲ್ಲ ಹೋರಾಟ ಪ್ರತಿಭಟನೆಗಳನ್ನು ಹತ್ತಿಕ್ಕುವ ಈ ಮನೋಭಾವ ಅತ್ಯಂತ ಆತಂಕಕಾರಿಯಾದುದು. ಈಡೇರಿಕೆ ಇರಲಿ, ಅಗತ್ಯಬೇಡಿಕೆಗಳಿಗೆ ಕಿವುಡಾಗುವುದು ಇಂದಿನ ದೊಡ್ಡ ದುರಂತ.

    ಪ್ರತಿಕ್ರಿಯೆ
  4. Vihi wadgi

    Sir U also want to drag ur attention towards also districts like vijayapura gulbarga bidar we don’t have drinking water befire writing this one I bring more than 40 litres of water that too far away from my home not only this govt doing like this every govt has made like this n it’s going on unstoppable beating a farmer means putting leg inside our plates pls govt should understand and make proper help to the farmers. May ur msg will reach the CM make their lives better .

    ಪ್ರತಿಕ್ರಿಯೆ
  5. ನಾದಾ

    ಸೀತಾರಾಮ್ ತೋರಿಸಿದ ಆಕ್ರೋಶ ನಮ್ಮೆಲ್ಲರ ಆಕ್ರೋಶವೂ ಹೌದು.ಮನುಷ್ಯನ ಮೂಲಭೂತ ಸೌಕರ್ಯಗಳ ಕಡೆಗೆ ಗಮನ ಕೊಡುವ ಚಿಂತನೆ ಇಲ್ಲದವರು ಸರಕಾರ ನಡೆಸುವುದಾದರೂ ಹೇಗೆ?

    ಪ್ರತಿಕ್ರಿಯೆ
  6. Sangeeta Kalmane

    ಇವರ ಲೇಖನ ಓದುತ್ತಿದ್ದರೆ ನನ್ನಲ್ಲೂ ಆಕ್ರೋಶ ಉಕ್ಕಿ ಬರುತ್ತದೆ. ಕಾರಣ ನಾನೂ ರೈತ ಕುಟುಂಬದಿಂದ ಬಂದವಳು. ವಷ೯ಕ್ಕೊಮ್ಮೆ ತಾಯಿ ಇಲ್ಲದ ತವರು ಮನೆಗೆ ಹೋದರೆ ಒಡಹುಟ್ಟಿದ ಅಣ್ಣನ ರೈತಾಪಿ ಜೀವನ ನಡೆಸುವ ಗೋಳು ಕಣ್ಣು ಮಂಜಾಗಿಸುತ್ತದೆ. ಯಾವ ಸರಕಾರ ಬಂದರೂ ಅಷ್ಟೇ. ರೈತರ ಗೋಳು ಕೇಳುವವರಿಲ್ಲ. ಇವರು ಆಡಿದ್ದೇ ಆಟ.

    ಅವಧಿಯಲ್ಲಿ ಇಂಥ ಬರಹಗಳು ನೂರು ಬರಲಿ‌. ಒಂದಾದರೂ ಸರಕಾರದ ಕಿವಿಗೆ ಬೀಳಲಿ. ರೈತರಿಗೆ ನ್ಯಾಯ ಸಿಗಲಿ. ಭೂಮಿತಾಯಿಯ ಒಡಲು ತಂಪಾಗಲಿ!

    ಪ್ರತಿಕ್ರಿಯೆ
  7. ಹನುಮಂತಪ್ಪ ಮದ್ದೇರು

    ುಮಾರ್ಚ್ 3 ರಂದು ಬೆಂಗಳೂರಿನಲ್ಲಿ ನಡೆದ ರೈತ ಚಳುವಳಿಯು ನಿಜಕ್ಕೂ ನಾಚಿಕೆಗೇಡಿನದು. ರೈತರನ್ನು ನಡೆಯಿಸಿಕೊಂಡ ರೀತಿ ಮಾನವಂತರು ತಲೆತಗ್ಗಿಸುವಂತಹುದಾಗಿತ್ತು. 3-4ಸಾವಿರ ರೈತರಿಗೆ ಮಾಡಲಿಕ್ಕೇನೂ ಕೆಲಸವಿಲ್ಲಾಂತ ಬೆಂಗಳೂರಿಗೆ ಬಂದಿದ್ದರಾ? ಬೆಗಳೂರು ನೋಡೋಕೇಂತಾಗಲಿ , ನಿಮ್ಮನ್ನ ನೋಡೋಕೇಂತ ಬಂದಿದ್ರಾ? ಬಂದವರು ನಾವು ನೀವೆಲ್ಲರೂ ಗೌರವಿಸಲೇಬೇಕಾದ ಅನ್ನದಾತರ ಪ್ರತಿನಿಧಿಗಳಾಗಿ ಬಂದಿದ್ದಲ್ಲ? ಬಂದವರನ್ನ ಮರದ ನೆರಳಲ್ಲಾದರೂ ಸರಿ ಕೂರಿಸಿ ಕುಡಿಯೋಕೆ 2 ಹನಿ ನೀರು ಕೊಟ್ಟು ಆಮೇಲೆ ತಾನೆ ಮಾತನಾಡಿಸಬೇಕಾಗಿದ್ದು. ಬದಲಾಗಿ ಮಾಡಿದ್ದೇನು? ಇದು ಶೋಭೆ ತರುವಂತಹುದಾಗಿತ್ತಾ? ದೂರದಿಂದ ಬಂದವರು ಊಟಮಾಡಿದ್ರೋ ನೀರು ಕುಡಿದುದ್ರೋ ಯಾವುದೂ ಗೊತ್ತಿಲ್ಲದೆ ತಳ್ಳಾಡಿ ನೂಕಾಡಿ ಅವಮಾನ ಮಾಡಿದ್ದು ಸರೀನಾ? ಬೆಂಗಳೂರಿನ ಬೀದಿಗಳಲ್ಲಿ , ಕಾಡು ಪ್ರಾಣಿಗಳು ಅಟ್ಟಿಸಿಕೊಂಡು ಬಂದಾಗ ಓಡುವಂತೆ ಮುದುಕರಾದಿಯಾಗಿ ಓಡಿ ಬರ್ತಾ ಇರೋದನ್ನ ನೋಡಿದವರಿಗೆ ಸಂಕಟವಾಗಿಲ್ವ? ಹಾಗಿದ್ರೆ ಓಡಿ ಬರ್ತಾಯಿದ್ದವರ ಮನಸ್ಥಿತಿ ಹೇಗಿರಬೇಕು ,ಯೋಚಿಸಬೇಕಲ್ವ? ಇದಕ್ಕೋಸ್ಕರ ನಮ್ಮೂರಿಂದ ಬರಬೇಕಾಯ್ತ ಅನ್ಸಲ್ವ?ಅವರೇನು ಡಕಾಯಿತರಾ ಈ ರೀತಿ ನಡೆಸಿಕೊಳ್ಳಸಿಕ್ಕೆ. ಅವರು ನೀರು ಕೇಳಲಿಕ್ಕಲ್ವ ಬಂದಿದ್ದು.ಇಡೀ ದಿನ ಉರಿ ಬಿಸಿಲಲ್ಲಿ ಹೀಗೆ ಓಡಾಡಿಸಿಕೊಂಡು ಹಲವಾರು ಟ್ರ್ಯಾಕ್ಟರ್ಗಳನ್ನು ವಶಕ್ಕೆ ತೆಗೆದುಕೊಂಡು ಕೆಲವರನ್ನ ಕಸ್ಟಡಿಗೆ ತಗೊಂಡು ಬೆಂಗಳೂರಿಂದ ಗದುಮಿದಿರಿ. ಯಾರತ್ರ ಬಸ್ಚಾರ್ಜಿಗೆ ದುಡ್ಡಿತ್ತೋ ಊಟಕ್ಕೇನು ಮಾಡಿದರೊ ಭಗವಂತನೇ ಬಲ್ಲ.
    ಒಟ್ಟಲ್ಲಿ ರೈತರ ಮರ್ಯಾದೆ ತೆಗೆಯೋಕೆ ನೋಡಿದರೆ ಈಗ ನಿಮಗೆ ಆಗಿರೋdamageನ ಅಂದಾಜು ಮಾಡಿದಿರಾ, ರೈತರನ್ನು ಕಾಡಿರುವ ಯಾವುದೇ ವ್ಯವಸ್ಥೆ ಉಳಿದಿದೆಯಾ? ಹರಾಜಾಗಿರೋ ಮಾನವನ್ನ ಯಾವ ಭಾಗ್ಯ ಕಾಪಾಡೀತು. ಇಷ್ಟು ಉಳಿಸಿಕೊಂಡು ಬಂದಿದ್ದನ್ನ ಒಂದೇ ದಿನದಲ್ಲಿ ಕಳೆದುಕೊಂಡಂತಾಯಿತಲ್ಲ. ರೈತರ ವಿಶ್ವಾಸ ಗಳಿಸೋದು ಅಷ್ಟು ಸುಲಭವಲ್ಲ, ಯಾರೋ 4 ಜನ ಹಣಕ್ಕೆ ಆಸೆ ಪಡಬಹುದು. ಸ್ವಾಭಿಮಾನಕ್ಕೆ ಪೆಟ್ಟಾದರೆ ಯಾವ ತಂತ್ರವೂ ಕೆಲಸ ಮಾಡುವುದಿಲ್ಲ
    ರೈತರು ಕೇಳಿದ್ದನ್ನ ಒಂದೇ ದಿನದಲ್ಲಿ ಯಾರಿಗಾದರೂ ಕೊಡೋದು ಸಾಧ್ಯವಿತ್ತಾ? ಅದು ರೈತರಿಗೂ ಗೊತ್ತಿರಲಿಲ್ಲವ, 8TMC ನೀರನ್ನ ಒಂದೇ ದಿನಕ್ಕೆ ಮಂತ್ರ ಮಾಡಿ ತರಿಸೋಕೆ ಸಾಧವಿತ್ತಾ, ಅದನ್ನ ಒಳ್ಳೇ ಮಾತಲ್ಲಿ ಹೇಳಿ ಕಳುಹಿಸಬಹುದಿತ್ತಲ್ಲ. ಎದುರಿಗೆ ಬಂದು ಎರಡು ಮಾತಾಡಿದ್ರೆ ಯಾವ ನಷ್ಟಆಗ್ತಿತ್ತು. ಬದಲಿಗೆ ನಿಮ್ಮ ಎಲ್ಲ ಭಾಗ್ಯಗಳಿಗಿಂತ ದರ್ಶನ ಭಾಗ್ಯ ಹೆಚ್ಚು ಪರಿಣಾಮಕಾರಿಯಾಗ್ತಿತ್ತಲ್ವ?
    ಯಾರು ನಿಮ್ಮನ್ನ ತಪ್ಪುದಾರಿಗೆಳೆದರೋ ಗೊತ್ತಿಲ್ಲ ಆಗಿರೋ ನಷ್ಟ ಮಾತ್ರ ನಿಮಗೆ. ಸಾಧ್ಯವಾದರೆ ನಿಧಾನವಾಗಿ ಆಲೋಚಿಸಿ ತಪ್ಪನ್ನ ಸರಿಪಡಿಸೋಕಾಗುತ್ತ ನೋಡಿ. ದೇವರು ನಿಮಗೆ ಒಳ್ಳೆಯದು ಮಾಡಲಿ

    ಪ್ರತಿಕ್ರಿಯೆ
  8. ಕರ್ಕಿ ಕೃಷ್ಣಮೂರ್ತಿ

    Change.org ಅಂತಾ ಒಂದು ಸಮಾಜೋಧ್ಧಾರಕ ವೆಬ್ ಸೈಟ್ ಇದೆ. ಅವರು ಇಂಥದ್ದನ್ನು ವಿರೋಧಿಸಿ, ಎಲ್ಲರ ಪಿಟಿಷನ್ ಪಡೆದು ಮು.ಮ ಗಳಿಗೆ ಕಳಿಸ್ತಾರಾ ಕೇಳಿ ನೋಡಿ. ಊಹೂಂ….ನಮಗೇನಿದ್ದರೂ ಕಾರಲ್ಲಿ ಕುಳಿತ ಹೊಟ್ಟೆಯಲ್ಲಿನ ನೀರು ತುಳುಕದ ನುಣುಪು ರಸ್ತೆ ಬೇಕು. ಥೂ.. ನಾಚಿಕೆಗೇಡು

    ಪ್ರತಿಕ್ರಿಯೆ
  9. ನೀತಾ. ರಾವ್

    ಸರಿಯಾಗಿದೆ ಸೀತಾರಾಮ್ ಸರ್. ನಮ್ಮ ಸರಕಾರಗಳಿಗೆ ನಿರ್ಧಿಷ್ಟವಾದ ಪ್ಲ್ಯಾನಗಳು ಇಲ್ಲವೇ ಇಲ್ಲ. ಒಂದು ವೇಳೆ ಯೋಜನೆಗಳನ್ನು ಮಾಡಿದರೂ ಅವು ಅನುಷ್ಠಾನಗೊಳ್ಳುವುದೂ ಇಲ್ಲ. ಏಕೆಂದರೆ ಅಂಥ ಜನಪ್ರೀತಿ, ಕಾಳಜಿ ಸರಕಾರ ನಡೆಸುವವರಲ್ಲಿ ಇಲ್ಲವೇ ಇಲ್ಲ. ನಿಮ್ಮ ಹಾಗೇ ನಾನೂ ಒಂದೊಂದು ಸಾರಿ ಅಂದುಕೊಳ್ಳುತ್ತೇನೆ, ಈ ರಾಜಕಾರಣಿಗಳು ತಮಗೆ ಬೇಕಾದಷ್ಟು ತಿಂದು ಹಾಳಾಗಲಿ, ಆದರೆ ಜೊತೆಗೆ ಒಂದಿಷ್ಟು ಜನಪರ ಕೆಲಸಗಳನ್ನಾದರೂ ಮಾಡಲಿ ಅಂತ. ನಮ್ಮ ದುರದೃಷ್ಟಕ್ಕೆ ಅವರು ಅದನ್ನೂ ಮಾಡುವುದಿಲ್ಲ. ಶಹರಗಳನ್ನಂತೂ ನರಕ ಮಾಡಿಟ್ಟಿದ್ದಾರೆ, ಕಂಡಕಂಡಲ್ಲಿ ಅಗಿದು, ಬಗಿದು. ಹಳ್ಳಿಗಳಂತೂ ಅವರ ಕಣ್ಣಿಗೆ ಕಾಣುವುದು ಇಲೆಕ್ಷನ್ ಸಮಯದಲ್ಲಿ ಮಾತ್ರವೇ! ಇದು ಈ ಯುಗಕ್ಕೆ ಮುಗಿಯುವ ಗೋಳಲ್ಲ ಬಿಡಿ. ಆದರೆ ಈ ಕಲಿಯುಗವೇ ಕೊನೆಯದು. ಹಂಗಾಗಿ ಇದು ಎಂದೂ ಮುಗಿಯದ ಹಾಡು. ಇದರಿಂದ ಮುಕ್ತ, ಮುಕ್ತ ಆಗಬೇಕಿದ್ದರೆ ಏನಾದರೂ ಉಪಾಯ ಇದೆಯಾ ನಿಮ್ಮ ಹತ್ತಿರ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: