ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಗುವಿನಾಟಕ್ಕೆ ಈ ಸದ್ದುಗಳು ದಣಿದಿವೆ..

ಮಣ್ಣಿನಂಗಳದ ಮಗು

ಸಂಗೀತ ರವಿರಾಜ್

ಅಲ್ಲೊಂದು ಕೇರಿ
ಡೋಲು, ತಮಟೆ, ನಗಾರಿಗಳು
ಸರಹದ್ದುಗಳ ಮೀರಿ

drum beatingಗುಡಿಸಿ ಗುಡಿಸಿ ನುಣ್ಣಗಾದ ಮನೆಯಂಗಳದಿ
ಇಹಪರದ ಇರುವಿಕೆಯಿಲ್ಲದ ಮಗುವಿನಾಟಕ್ಕೆ
ಈ ಸದ್ದುಗಳು ದಣಿದಿವೆ.

ಕಾಲ ಕಾಲವು ಕಳೆದು
ಏನೊಂದು ಬದಲಾವಣೆಲ್ಲದ
ಡೋಲಿನ ಲೋಕದ ಬದುಕು
ಡೋಲಾಯಮಾನ ಅಲ್ಲವೇ ಅಲ್ಲ
ಎಂಬ ಎದೆಯೊಳಗಿನ ನಂಬಿಕೆ

ತಲೆಮಾರುಗಳು ಈ ನಂಬಿಕೆಯ ಉಳಿಸಿ
ಜೊತೆಗೆ ಜ್ಞಾನ ವನ್ನು ಗಳಿಸಲಿ
ಇದು ದುಡಿ ಕುಣಿತದ ಜಗತ್ತಿನಲ್ಲಿ
ಬೇಲಿ ಹೂಗಳ ಆಯ್ದು ಕಟ್ಟುವ ಕೆಂದುಟಿಗಳ ಕನಸು….
ಜೊತೆಗೆ ನಮ್ಮೆಲ್ಲರದ್ದು ಹೌದು.

ಕುಲಕಸುಬಿಗೊಂದು ಜೀವ ಕೊಡುವ ಮಗು
ಡೋಲು ಬಡಿದೆ ತೀರುತ್ತದೆ
ಅಥವ
ಮಗು ಡೋಲು ಬಡಿಯಲೇ ಬೇಕು
ಎಂದೆನಿಸಿದ ಅಪ್ಪನ ಸಂತೃಪ್ತಿಯಲ್ಲು
ತೃಪ್ತಿ ಕಾಣದ ಕಂಗಳು

ಮಣ್ಣಿನಂಗಳದ ಮಗುವಿನ ಮುಂದೆ ಡೋಲನಿಟ್ಟರೆ
ಬಾರಿಸಲೊಪ್ಪದ ಆ ಕೂಸು
ಕಿವಿಗಚ್ಚುವ ಡೋಲು ಸದ್ದಿಗು ಎದ್ದೇಳುತ್ತಿಲ್ಲ!
ಪಕ್ಕದ ಶಾಲೆಯ ಗಂಟೆಯ ಶಬ್ದಕ್ಕೆ
ಸದ್ದಿಲ್ಲದೆ ಧಾವಿಸುತ್ತಿದೆ…!

 

‍ಲೇಖಕರು admin

17 March, 2016

1 Comment

  1. Anonymous

    ಧನ್ಯವಾದಗಳು ಅವಧಿ
    ಸಂಗೀತ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading