ಮಂಜುಳ ಸಿ ಎಸ್
ಸಖನಿವ
ಅವ
ನನ್ನಂತೆಯೇ
ಹೊಸ ಹೊಸ ರೆಕ್ಕೆ
ಕಟ್ಟ ಬರುವ
ನನ್ನೊಟ್ಟಿಗೆ
ಪ್ರಪಂಚ ಸುತ್ತುವಾಸೆಗೆ !
ಕಾಮನಬಿಲ್ಲನೇರಿ
ಬಣ್ಣ ಬಣ್ಣದ
ಮೋಡವೇರಲು
ಕೈ ಚಾಚುವ
ಹಿಂಜರಿದರೆ
ಇವನ ಕಡಲಂಥ
ಕಂಗಳೆ ಹೃದಯಕೆ
ಒತ್ತಾಸೆ !!
ಜೋಡಿ ಕಂಗಳಲಿ
ಬರೀ ಕನಸಲ್ಲ
ಜಗವ ಮೀರಿ
ಕನಸ ನನಸಾಗಿಸ ಬಲ್ಲ
ಛಲ
ಹೆದರುವುದಾದರೆ
ಅದು ಹೃದಯ
ಚೂರಾಗಿ ಚೀರುವ
ಭಯವಷ್ಟೇ !!

ಹೊರ ಜಗಗೆ
ಎಂದೂ ತೋರದ
ತನ್ನ
ಇವಳೆದರು
ಹಿಡಿ ಹಿಡಿಯಾಗಿ
ಬಿಚ್ಚಿಡುವ ಮುಚ್ಚು
ಮರೆಯಿಲ್ಲದೆ !!
ನಾಚಿಕೆ ಬಿಗುಮಾನದ
ಪರಿಚಯವೇ ಇಲ್ಲವೇನೋ
ಇವಗೆ!
ಮುನಿದರೆ ಕಿಚಾಯಿಸುವ
ಕೃಷ್ಣನೇ !
ಬಿಗುವಾದರೆ
ಮೌನದ ಮಗುವೇ
ಕರೆದರೆ ಕಾದಿದ್ದು
ಓಡಿ ಬಂದು
ತಬ್ಬುವ!
ಹನಿಗಣ್ಣಿಗೆ ಮರುಕ್ಷಣವೇ
ಸಂತೈಸುವ ಸಖ
ಪ್ರೇಮದ ನಿವೇದನೆ
ಸಂವೇದನೆ
ಆರಾಧನೆಗೆ
ಸಾಟಿಯಾರಿಲ್ಲ
ನಂಟಿನ ಅಂಟಿಗೆ
ಜೀವಮಾನ ಬರೆದು
ಕೊಡಲು ಕಾದಿರುವ
ಸಖನಿವ!!






0 Comments