ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ಯಾಚುಲರ್ ರೂಮ್

ಶಂಕರಾನಂದ ಹೆಬ್ಬಾಳ

ಅಲ್ಲೊಂದು ಗೋಡೆ ಮೇಲೆ
ಹಳೆ ಪ್ರೇಯಸಿಯ ನೆನಪಿನ
ಕವಿತೆ ಉಸಿರಾಡುತ್ತಿದೆ…!

‘ನಿನ್ನ ಸ್ನೇಹ ಮಧುರ
ನಮ್ಮ ಪ್ರೇಮ ಅಮರ
ಈಗ ನಾನು ವಿಧುರ’

ಮೂಲೆಯಲ್ಲಿ ಬಂಡಲ್
ಅಸೈನ್ ಮೆಂಟ್,
ಧೂಳುಗಟ್ಟಿ, ಜೇಡಗಳು
ಮನೆಮಾಡಿವೆ,
ಹಲ್ಲಿ ಲೊಚಗುಟ್ಟಿತು,
ಥೂ…! ದರಿದ್ರವೆ…!
ಕೊಳಕು ರೂಮಿನಲ್ಲಿ,
ವಾಸ ಇದು ಅವರಿಗೆ ಸನಿವಾಸ…!

ಅವನ ತೂತು ಬಿದ್ದ
ಬರ್ಮುಡಾ…
ಕತ್ತರಿಸಿದ ಉದ್ದಂಗಿ,
ಒಂದೆ ಚೊಂಬಿನಲ್ಲಿ
ಸ್ನಾನ ಸಂಗೀತದ ಮಜಾ
ನೀರಿಲ್ಲದ ಶೌಚಾಲಯದ ಸಜಾ…?
ಪೇಸ್ಟಿಗೆ ಹತ್ತು ಬ್ರಷು,
ಒಡೆದ ಕನ್ನಡಿ ಗಾಜಿನ ತುಣುಕು,
ಹೇಗಿದೆ ಖುಷಿ…
ಗೀಜರ್ ನೀರು ಅರೆಬಿಸಿ…
ಇಲ್ಲಿಲ್ಲ ಫ್ಯಾನು ಏಸಿ..!
ಏನು ಮೋಜು..? ಏನು ಮಸ್ತಿ…?

ಎಡಮೂಲೆ ಮಾಡಿನಲ್ಲಿ
ಮನೆದೇವರ ಪೋಟೋ..!
ಬಲಗಡೆ ಹಾಟ್ ಮಾಡೆಲ್
ಅರೆನಗ್ನ ವೈಯಾರ ಚಿತ್ರ,
ರಸಿಕರಾಸ್ಥಾನ,
ಬಿಟ್ಟಿರಲು ಬಿಂಕ ಬಿಗುಮಾನ,
ಇದೆ ಆವಸ್ಥೆ ದಿನವೂ…!!

ಹರಿದ ಹಳೆಯ ಚಪ್ಪಲಿ
ಕಿತ್ತಿದ್ದು, ತೇಪೆ ಹಚ್ಚಿದ್ದು,
ನೆನಪಿನ ತಿಜೋರಿಲ್ಲಿ ಭದ್ರ,
ಮರೆಯಬಹುದೆ..?
ಈ ಸವಿನೆನಪುಗಳ ಪುಸ್ತಕ
ಪ್ರತಿ ಕ್ಷಣವು ಅಮೋಘ,
ನೋಡಲು ಈಗಲೂ ಇದೆ
ಅದೇ ಓಲ್ಡ ಬ್ಯಾಚುಲರ್ ರೂಮ್…!!

‍ಲೇಖಕರು Avadhi

1 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading