ಬಸವರಾಜ ಕೋಡಗುಂಟಿ
ಕರುನಾಟುಗ ನಾಡುಟ್ಟಿನ ದಿನಕ ಸಿಂಗಾರ ಅಯ್ದರಾಬಾದ ಕರ್ನಾಟಕ
ಒಟ್ಟಿಗೆ ಉಟ್ಟಿದೋರು ವಟ್ಟಿಯ ತಾಳಕ ಸುತ್ತ ದೇಶಕ ಯಲ್ಲವ್ವ
ಮಟ್ಟಿಲೆ ತಾಳ ಬೀಳತಾವ ನಾಡುಟ್ಟಿನ ದಿನಕ
ಸರಕಾರನೆಂಬೋದು ತಲಿ ಮ್ಯಾಲೆ ಕುಕ್ಕಿದಂಗ ಯಲ್ಲವ್ವ
ದರಕಾರಿಲ್ಲದ ನುಡಿದಾದ ನಾಡುಟ್ಟಿನ ದಿನ ಮಾತ
ಕಳ್ಳಿಗೆ ಕಸುವಿಲ್ಲ ನಿಲ್ಲಾಕ ನಾಳಿಗಿ ಬಣ್ಣಿಲ್ಲ ಯಲ್ಲವ್ವ
ಕಳ್ಳ ಕುಡದಂಗ ಕುಣಿತಾವ ನಾಡುಟ್ಟಿನ ದಿನಕ
ದಾರಿಲ್ಲ ದೆಸಿ ಇಲ್ಲ ದವಾಕಾನಿ ಗತಿ ಯಲ್ಲವ್ವ
ದಾರಿಗೆಲ್ಲ ಬಳದಾರ ಬಂಗಾರ ನಾಡುಟ್ಟಿನ ದಿನಕ
ಬೇಡೋರು ಕಾಡೋರು ನಾಡೋರು ಯಲ್ಲವ್ವ
ಮಡಿ ಮಯಿಲಿಗಿ ನಾಡುಟ್ಟಿನ ದಿನಕ
0 ಪ್ರತಿಕ್ರಿಯೆಗಳು