ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೋದಿಲೇರ್ನೇ ಸಾರಿರುವನಲ್ಲ ಸಂಗಾತಿ…

ತಾ ತಾ ಕಷಾಯ…!

ವಿಜಯಕಾಂತ ಪಾಟೀಲ್

ಮಡದಿ,
ಭಾರೀ ಜತನದಿಂದ ನೀ ಕುದಿಸಿ ಸೋಸಿ
ಜೀವ ಕಣಗಳ ಸೇರಿಸಿ ಮೇಲೆ ಕೆಳಗೆ ಹೊಯ್ದಾಡಿಸಿ
ಕೆನೆ ಕರಗಿಸಿ ಕಾವಾರದಂತಿರಿಸಿ ಜಗ್ಗಿ ಜಗ್ಗಿ ಎಳೆತಂದು
ಕೂರಿಸಿ ಒರಗಿಸಿ ಕುಡಿಸುವ ಬಿಸಿಯುಸಿರ ಕಷಾಯ;
ತಾಜಾ ಹವೆಯಿಂದಲೇ ಮಾಡುವ ಕಮ್ಮನೆಯ ಬೇಸಾಯ..!
 
ಇಲ್ಲಿ, ಜೀರಿಗೆ ಕೋತಂಬರಿ ಕಾಳುಮೆಣಸು ಮೆಂತೆ ಶುಂಠಿ
ಪುದಿನಾ ಒಂದೆಲಗ ಅಮೃತಬಳ್ಳಿ ತುಳಸಿ
ಆ ಪತ್ರೆ ಈ ಪತ್ರೆಗಳ ಪಾತ್ರ-ತಾಪತ್ರಯವಿಲ್ಲ;
ಘಾಟಿಲ್ಲ,ಕಹಿಯಿಲ್ಲ,ಸೀನಿಲ್ಲ;
ಕುಡಿದದ್ದು ಅನುಭವಕ್ಕೇ ಬರುವುದಿಲ್ಲ,
ಕುಡಿದದ್ದು ಮಾತ್ರ ಸುಳ್ಳಲ್ಲ;
ಜಡ್ಡು-ಜಿಡ್ಡು-ಮಡ್ಡು ಎಲ್ಲ ಮಟಾಮಾಯ,
ಇದು ಖರೆ,ಮುಚ್ಚುಮರೆ ಏನಿಲ್ಲ..!

ಅರೆರೆ, ಖಂಡಿತ ದ್ರವರೂಪಿ ಇದಲ್ಲ;
ಥೇಟ್ ವಾಯೂರೂಪಿಣಿ..!
ಕುಡಿದ ಸಲಕೊಮ್ಮೆ ದಿಗಿಲು,
ಹೆಗಲ ಮೇಲೆಯೇ ಮುಗಿಲು;
ಮೋಡಗಳೇ ಸಡಿಲು..!
 
ಏ.. ಏನೇ ಇದು, ಏನೇನನು ಹಾಕುವೆಯೋ,
ಯಾತರೊಳು ಕುದಿಸುವೆಯೋ, ಅದ್ಯಾವ ಒಲೆಯೋ
ಅದೆಂಥ ಬೆಲ್ಲವೋ, ಶಿವನೇ ಬಲ್ಲ..!
ಖುದ್ದು ಸೋಮರಸವೇ ಇರಬಹುದೆ ಇದು,
ಸಂಶಯಗಳೇನೇ ಇರಲಿ,
ಏನೋ ಎಂಥದೋ ಒಟ್ಟಾರೆ
ಇದ ಹಿರಿ ಹಿರಿ ಹೀರಿದಂತೆ ಕಂಪು ತಂಪು ಜೊಂಪು..!
 
ಇರಲಿ ಬಿಡು,ಕುಡಿಸುತ್ತಿರು ಹೀಗೆಯೇ,
ಸಾಕೆನ್ನಲಾರೆ; ಕುಡಿಯುತ್ತಿರುತ್ತೇನೆ,
ಕುಡಿಕುಡಿಸಿದಂತೆ…!
 
ಬೋದಿಲೇರ್ನೇ ಸಾರಿರುವನಲ್ಲ ಸಂಗಾತಿ:
`ಏನನ್ನಾದರೂ ಕುಡಿ,ಆದರೆ ಕುಡಿ;
ತಡೆಯಿಲ್ಲದೇ ಕುಡಿ,ಸದಾ ನಿಶೆಯಲ್ಲಿರು..!
 
ತಾ.. ತಾ.. ಸದ್ಯಕ್ಕೆ ಕಷಾಯ,
ಕಾಲಾತೀತವಾಗಿರಲಿ ಈ ವ್ಯವಸಾಯ…!
 

‍ಲೇಖಕರು G

3 August, 2014

5 Comments

  1. ajit

    Kashaaya kudidu baredantide 🙂

  2. smitha Amrithraj

    dhennagide kavite

  3. mmshaik

    nice..very nice..sir

  4. ಮಂಜುನಾಥ್. ಪಿ

    ಚೆನ್ನಾಗಿದೆ ಸರ್ … ನಶೆಯಲ್ಲಿದ್ದುಕೊಂಡೇ ಬರೆದ್ರಾ ಸರ್….?!

  5. sangeetha raviraj

    Kavite thumba ehtavaytu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading