
ನಾನು ನನ್ನ ತಂಗಿ ಶನಿವಾರ ಬಿಸಿಲಿಳಿದ ಮೇಲೆ ಬೆಂಗಳೂರಿನ ಬಸ್ ಹತ್ತಿದ್ವಿ. ಅದಕ್ಕಿಂತ ಮುಂಚೆ ನಮ್ಮ ಪಾಲಿನ ಸಾಕ್ಷಾತ್ ದೇವಿ ನಮ್ಮ ಅಜ್ಜಿಯ ಕಾಲಿಗೆ ನಮಸ್ಕಾರ ಮಾಡಿ, ತಾತನ ಆಶೀರ್ವಾದ ಪಡೆದು, ನನ್ನ ತಂಗಿ ಹೆಚ್ಚು ಪ್ರೀತಿಸುತ್ತಿದ್ದ ದೇವಾಂಗ ಬೀದಿಯ ದೈವ ಚೌಡೇಶ್ವರಿಗೆ ನಮಸ್ಕರಿಸಿ, ನಮ್ ತಾತ ಮುನಿಸಿಪಾಲ್ಟಿ ಗಣೇಶನಿಗೆ ಕೈ ಮುಗಿದು ಅಡ್ಡಬಿದ್ದು ಹೋಗ್ರೋ ಅಂದಿದ್ದನ್ನು ನೆರವೇರಿಸಿ, ಬಸ್ ಸ್ಟಾಂಡಿನಲ್ಲೇ ಬೇಲೂರ ಚನ್ನಕೇಶವನನ್ನು ನೆನೆದು ನಾವಿಬ್ರೂ ಹೊರಟ್ವಿ. ಒಟ್ಟಾ ಬದುಕಿನ ಅಸಹಾಯಕತೆಗಳನ್ನು ನೀಗಲು ಸಮಾಧಾನ ಮಾಡುವ ಎಲ್ಲ ಶಕ್ತಿಗಳು ನಮ್ಮ ಜೊತೆ ಇರಲಿ ಕಾಪಾಡಲು ಅನ್ನಿಸಿಬಿಡತ್ತೆ. ಆಗ ಎಷ್ಟೊಂದು ಅಧೀರರಾಗಿ ಬಿಡುತ್ತೇವೆ ಅಲ್ವಾ.
ಬೇಲೂರಿನ ಬಸ್ ಬೆಂಗಳೂರಿನ ಕಡೆ ಹೊರಟಿತು. ಹಗರೆ ಬಿಡೋ ತನಕ ನಮ್ಮಿಬ್ಬರನ್ನೂ ಹೇಳಲಾಗದ ಮೌನ ಆವರಿಸಿ ಬಿಟ್ಟಿತ್ತು. ಇನ್ನೂ ಏನಿಲ್ಲಾ, ಎಂತಿಲ್ಲಾ ಮದ್ವೆ ಗೊತ್ತಾಗಿ ಬಿಟ್ರೆ ಇಬ್ರೂ ಒಬ್ಬರನ್ನು ಒಬ್ರು ಬಿಟ್ಟಿರಬೇಕು ಅನ್ನುವ ಆಕಾಶದಷ್ಟು ಅಗಲದ ಭಯ ಮತ್ತು ಆತಂಕ ಇಬ್ಬರನ್ನೂ ಆವರಿಸಿಕೊಂಡುಬಿಟ್ಟಿತ್ತು. ಸರಿ ನಾವಿಬ್ರೂ ಮಾತಾಡೋ ಹೊತ್ತಿಗೆ ಇಬ್ಬರ ಕಣ್ಣು ತೇವ ಅಲ್ಲ , ನೀರು ಬಳ ಬಳ ಇಳೀತಿದ್ವು. ಬಸ್ನಲ್ಲಿರೋರು ನಮ್ಮನ್ನೇ ದುರುಗುಟ್ಟಿಕೊಂಡು ನೋಡುತಿದ್ರು. ಅವರಲ್ಲೊಬ್ಬರು ಯಾಕಪ್ಪ ಅಪ್ಪ ಅಮ್ಮಂಗೆ ಹೇಳದೇ ಹುಡ್ಗೀನ ಹಾರಿಸಿಕೊಂಡು ಬಂದಿದಿಯಾ ಅಂದ್ರು. ನಾ ಉತ್ತರ ಕೊಡದೇ ಸುಮ್ಮನಿದ್ದೆ. ನನ್ನ ತಂಗಿ ಹುಡ್ಗ ಹುಡುಗಿ ಜೊತೆ ಇದ್ರೆ ಸಂಬಂಧ ಕಲ್ಪಿಸೋದೆ ನಿಮ್ಮ ಕೆಲಸಾನ ಅಂತ ಗಟ್ಟಿ ದನಿಯಲ್ಲಿ ದಭಾಯಿಸಿ. ಇವನು ನಮ್ಮ ಅಣ್ಣ , ನನ್ನ ತಂದೆ, ನನ್ನ ಗುರು, ನನ್ನ ಜೀವ ಅಂತೆಲ್ಲಾ ಬಡ ಬಡ ಹೇಳಿ ಬಿಟ್ಟಳು. ಹೇಳಿದವರು ತೆಪ್ಪಗೆ ಕೂತರು. ನಾ ನಕ್ಕು ಸುಮ್ಮನಾದೆ.
ಇದೆಲ್ಲಾ ಆದ ಮೇಲೆ ಅವಳಿಗೆ ನನ್ನ ರೆಗ್ಯುಲರ್ ಪಾಠಗಳು ಶುರು ಆದವು ಅವಳಿಗೆ. ನಮ್ಮಿಬ್ಬರ ಸಂಭಾಷಣೆ ಹೇಗಿತ್ತು ಅಂದ್ರೆ ಬೆಂಗಳೂರು ಬರುವ ತನಕ ಒಂದು ಕ್ಷಣಾನೂ ನಮ್ಮಿಬ್ಬರ ಬಾಯಿ, ಮನಸು, ಬುದ್ಧಿ ಸುಮ್ಮನಿರಲಿಲ್ಲ. ಮರದ ಬಾಯಾಗಿದ್ದರೆ ನಮ್ಮ ಮಾತುಗಳಿಗೆ ಅದು ಒಡೆದೇ ಹೋಗುತ್ತಿತ್ತೇನೋ. ನಮ್ಮ ಮಾತು ಶುರು ಆಗಿದ್ದು ಹೀಗೆ,
ಚೂಡಿದಾರ್ ಇಸ್ತ್ರಿ ಹಾಳಾಗದ ಹಾಗೆ ಇಟ್ಟುಕೊಂಡಿದ್ದೀಯ ?
ಇಟ್ಟುಕೊಂಡಿದ್ದೇನೆ.
ಉಮಾಶ್ರೀ ಅವರು ಗೊತ್ತೇನಮ್ಮ
ಸಿನೆಮಾದಲ್ಲಿ ನೋಡಿದ್ದೇನೆ.
ಅವರ ಮಗನ್ನ ನಿನಗೆ ಮದುವೆ ಮಾಡೋಣ ಅಂತಾ, ಆ ವಿಷ್ಯ ನಿನಗೆ ಮೊನ್ನೆ ಹೇಳಿದ್ದೇ ಅಲ್ವೇನಮ್ಮ. ನಾನು ಹುಡುಗನ ಫೋಟೋ ನೋಡಿದ್ದೇನೆ. ನೇರವಾಗಿ ನೋಡಿಲ್ಲ. ನಾಳೆ ನಾವಿಬ್ರೂ ನೋಡೋಣ ನಿನಗೆ ಇಷ್ಟ ಆದ್ರೆ ಮದುವೆ ಮಾಡಿಸುತ್ತೇನೆ. ಅಂದೆ
‘ಅದೆಲ್ಲಾ ಸರಿ ಕಣೋ ಮದುವೆ ಮದುವೆ ಅಂತಾ ಕುಣಿತಿದ್ದೀಯಲ್ಲ, ಅದಕ್ಕೆ ಬೇಕಾಗೋ ರಾಶಿ ಹಣ ಎಲ್ಲಿ ತರ್ತೀಯಾ’? ಅಂದ್ಲು
ಅದೆಲ್ಲಾ ನೀನು ಯೋಚಿಸಬೇಡ ಶೇತಮ್ಮ . ನಿಮ್ಮಪ್ಪ ಕುಡಿದಾಗ ‘ಹದಿನಾರು ಚಪ್ರ ಹಾಕಿಸಿ ಎಂಟು ಜತೆ ವಾಲಗ ಊದಿಸಿ ನಿನ್ನ ಮದ್ವೆ ಮಾಡಬೇಕು’ ಅಂತ ಬಾಯಿ ಮಾತಿಗಾದ್ರು ಹೇಳುತ್ತಿದ್ದುದು ಮರೆತು ಬಿಟ್ಟಾ. ಅದೇನೇ ಇರ್ಲಮ್ಮ. ನೀನು ನನ್ನ ಜೀವದ ತಂಗಿ. ಎಷ್ಟೇ ಕಷ್ಟ ಆದ್ರೂ ಸರಿ, ನಿನ್ನ ಮದುವೆನಾ ಅದ್ದೂರಿಯಿಂದ ಮಾಡುತ್ತೇನೆ ಅಂದೆ.

ಅದೆಲ್ಲಾ ಸರಿ ಕಣೋ ನೀನು ಉಮಾಶ್ರೀ ಅವರ ಮಗನಿಗೆ ಮದುವೆ ಮಾಡ್ತೀನಿ ಅಂತಿದಿಯಾ, ಅವರು ಸಿನೆಮಾ ನಟರು. ಅವರಿಗೆ ತಕ್ಕಂತೆ ಮದುವೆ ಮಾಡಲು ನಿಂಗೆ ಆಗುತ್ತೇನೋ ?
ಮೊದಲು ಹುಡುಗನನ್ನು ನೋಡೋಣಾ ಆಮೇಲೆ ಮಿಕ್ಕಿದ್ದು ಅಲ್ವಾ.
ಅವರು ಸ್ಟ್ಯಾಂಡರ್ಡ್ ತೋರಿಸಿದ್ರೆ ನಾನಂತೂ ಒಪ್ಪಲ್ಲಾ ರಘು, ಆಮೇಲೆ ಇನ್ನೊಂದು ವಿಷಯ ಯಾವ ಕಾರಣಕ್ಕೂ ನಿನಗೆ ನೋವಾಗುವ ಸಣ್ಣ ಸಂದರ್ಭ ಬಂದರೂ ನಾನೂ ಮದುವೆ ಆಗಲ್ಲ ಕಣೋ. ನಮ್ಮ ಅಸಹಾಯಕತೆಗಳು ನಮ್ಮ ಸ್ವಾಭಿಮಾನಕ್ಕೆ ಅಡ್ಡಿ ಮಾಡಬಾರದು ಅಲ್ವಾ ? ಅದನ್ನು ನಿನ್ನಿಂದ ಚೆನ್ನಾಗಿ ಕಲಿತಿದ್ದೇನೆ. ಅದನ್ನು ಯಾವ ಕಾರಣಕ್ಕೂ ನಾ ಬದಲಿಸಿಕೊಳ್ಳಲಾರೆ.
ಹಾಗೆಲ್ಲಾ ಏನಾಗಲ್ಲ ಬಾಮ್ಮ, ನಮ್ಮ ಒಳ್ಳೇತನ ನಮ್ಮ ಕಷ್ಟ, ನಮ್ಮ ಪರಿಶ್ರಮ ನಮ್ಮನ್ನು ಕೈ ಬಿಡೋಲ್ಲ ಶೇತಿ
ಸರಿ ಅವರು ಸಿನೆಮಾದಲ್ಲಿ ಬರಿ ಗಟಾಣಿ ಪಾತ್ರ ಮಾಡಿದ್ದಾರೆ. ರಾಣಿ ಮಹಾರಾಣಿ ಸಿನೆಮಾನೇ ಕಣ್ಣ ಮುಂದೆ ಬರುತ್ತಿದೆ ರಘು.
ಸಿನೆಮಾನೇ ಬೇರೆ, ಜೀವನಾನೇ ಬೇರೆ ಶೇತಿ.
ಏನೋಪ್ಪಾ, ಆದ್ರೂ ನಂಗೆ ಸಿನೆಮಾದ ಚಿತ್ರಗಳೇ ಕಣ್ಣ ಮುಂದೆ ಬರುತ್ತಿದೆ.
ಅದೆಲ್ಲವನ್ನು ಮರ್ತು ಅವರ ಮುಖದಲ್ಲಿ ನನ್ನ ನೆನಪಿಸ್ಕೋ. ನೀನು ಚಿಕ್ಕವಳಿದ್ದಾಗ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಾಗ ಸರಿಯಾಗಿ ಬಾರಿಸ್ತಿದ್ದೆ ಅಲ್ವಾ, ಆಗ, ನೀನು ಮುನಿಸ್ಕೊಂಡು ನಿಂತ ಕಡೇ ಗರ ಹೊಡೆದೋಳ ತರ ನಿಂತು ಬಿಡ್ತಿದ್ದೆ ಅಲ್ವಾ, ಆದ್ರೂ ಮತ್ತೆ ಬಂದು ಪ್ರೀತಿಯಿಂದ ಮಾತಾಡುತ್ತಿದ್ದೆ ಅಲ್ವಾ. ನಮಗೆ ಯಾವುದಾದರೂ ಹಿಡಿಸದ ಚಿತ್ರ ಕಣ್ಣ ಮುಂದೆ ಬಂದ್ರೆ ಅಲ್ಲಿ ನಮಗೆ ತುಂಬಾ ಇಷ್ಟಾ ಆಗೋ ಸನ್ನಿವೇಶ ನೆನಪಿಸಿಕೊಂಡರೆ ತುಂಬಾ ನಿರಾಳ ಆಗಿ ಬಿಡುತ್ತೇವೆ ಶೇತಮ್ಮ. ಆಮೇಲೆ ಎಲ್ಲಾ ಇಷ್ಟ ಆಗಿಬಿಡತ್ತೆ. ಸಿನೆಮಾದವರು ಉಮಾಶ್ರೀ ಅವರನ್ನು ಹಾಗೆ ತೋರಿಸಿದ್ದಾರೆ ಅದಕ್ಕೆ ಅವರು ಹಾಗೆ ಕಾಣಿಸಿದ್ದಾರೆ. ನೀನು ಸಿನೆಮಾದಲ್ಲಿ ಕಾಣುವ ಉಮಾಶ್ರೀಯನ್ನು ಮರೆತು ಬಿಡಮ್ಮ. ಮೊದ ಮೊದಲು ರಘು ಮುಖದಲ್ಲಿ ಉಮಾಶ್ರೀಯನ್ನು ನೋಡು ಅವರು ನಿನಗೆ ಹತ್ತಿರ ಆಗುತ್ತಾರೆ. ಆಮೇಲೆ ಉಮಾಶ್ರೀ ಉಮಾಶ್ರೀಯಾಗಿಯೇ ನಿನಗೆ ಹತ್ತಿರ ಆಗುತ್ತಾರೆ.
ಸರಿ ರಘು ಅವರೇನಾದ್ರೂ ಕೇಳಿದ್ರೆ ಎನ್ ಹೇಳೋದು ? ನಂಗೆ ಅಷ್ಟು ದೊಡ್ಡ ನಟಿಯ ಜೊತೆ ಮಾತಾಡಕ್ಕೆ ಬರಲ್ಲ. ಭಯ ಬೇರೆ.
ಭಯ ಬೇಡ. ಅವರು ಎನ್ ಕೇಳಿದರೂ ಧೈರ್ಯದಿಂದ ಮಾತಾಡು. ಅವರ ಮಗ ಮಾತಡಿಸಬೇಕು ಅಂದ್ರೂ ಆರಾಮಗೇ ಮಾತಾಡು. ನಂಗೆ ಗೊತ್ತು, ನೀನು ಅಷ್ಟು ಆರಾಮಾಗಿ ಮಾತಾಡೋಕೆ ಆಗಲ್ಲ ಅಂತ. ಆದ್ರೂ ಮಾತಾಡು. ಶೇತಮ್ಮ ಇನ್ನೊಂದು ವಿಷಯ, ಅವರು ಇಷ್ಟ ಪಡೋದು ಮಾತ್ರ ಅಲ್ಲಮ್ಮ, ನೀನೂ ಮತ್ತು ನಾನು ಅವರನ್ನು ಇಷ್ಟ ಪಡಬೇಕು. ಹಾಗಾಗಿ ಹೆದರಿಕೆ ಬೇಡ. ಆರಾಮಾಗಿ ಗಡಿಬಿಡಿ ಮಾಡಿಕೊಳ್ಳದೇ ಇರಮ್ಮ.
ಇಷ್ಟೆಲ್ಲಾ ಹೇಳುವಾಗ ಅವಳ ಮುಖದಲ್ಲಿ ನಾಚಿಕೆಯ ಜೊತೆ ಭಯ ಎದ್ದು ಎದ್ದೂ ಕಾಣುತ್ತಿತ್ತು. ನಾನು ವ್ಯಕ್ತಿ ಸ್ವಾತಂತ್ರ ಮತ್ತು ಪ್ರೀತಿ ಇವುಗಳಿಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಹಂಚಿಕೊಂಡೆ. ಏನು ಹೇಳಿದರೂ ಇಂಥಹ ಸಮಯದಲ್ಲಿನ ಹೆಣ್ಣಿನ ಸಹಜ ನಾಚಿಕೆ ಮತ್ತು ಭಯ ಹೆಚ್ಚು ಅವಳನ್ನು ಆವರಿಸಿತ್ತು.
ಮದುವೆಯಾಗುವ ಹುಡುಗ ಏನಾದರೂ ಮಾತಾಡಿಸಿದರೆ ‘ನೀವು ಏನೇನ್ ಕೇಳಬೇಕು ಅನ್ಕೊಂಡಿದ್ದೀರೋ ಅದನ್ನೆಲ್ಲಾ ನಮ್ಮ ಅಣ್ಣನನ್ನು ಕೇಳಿಬಿಡಿ’ ಅಂತ ಹೇಳುತ್ತೇನೆ ಅಂದ್ಲು. ಅದಕ್ಕೆ ಬಸ್ಸಿನ ಛಾರ್ಸಿ ಹಾರೋಗತರ ನಕ್ಕಿದ್ದೆ. ಅವಳಿಗೆ ಆಗ ತುಂಬಾ ನೋವಾಗಿ ಜೋರಾಗಿ ಅತ್ತುಬಿಟ್ಟಿದ್ದಳು. ಅವಳ ಮುಗ್ಧತೆ, ನಾನೊಳ್ಳೆ ದೊಡ್ಡ ಅನುಭವಿ ತರ ಪ್ರವಚನ ಮಾಡಿದ್ದೂ ಅದೆಷ್ಟೋ ಅನುಭವದ ಪಾಠಗಳನ್ನು ಕಟ್ಟಿಕೊಡುತ್ತಲೇ ನಮ್ಮಿಬ್ಬರನ್ನು ಬದುಕಿಗೆ ಹೇಗೆ ನಾವು ತೆರೆದುಕೊಳ್ಳಬೇಕು ಅಂತ ತಿಳಿಸಿತ್ತು.
ಮಾತಾಡಿ ಮಾತಾಡಿ ಮಾತಾಡಿಕೊಂಡು ಬೆಂಗಳೂರು ಸೇರಿದ್ದಾಯಿತು. ಮೊದಲು, ಅಲ್ಲೇ ಕಾಟನ್ಪೇಟೆಯಲ್ಲಿದ್ದ ನಮ್ಮಜ್ಜಿ ಮನೆಗೆ ಹೋಗಿ ಲಗ್ಗೇಜ್ ಇಟ್ಟು ಫ್ರೆಶ್ ಆಗಿ ಅವರಾರಿಗೂ ಹುಡುಗನನ್ನ ನೋಡಲು ಹೋಗುತ್ತಿದ್ದೇವೆ ಅನ್ನುವ ಸುಳಿವು ಕೊಡದೇ ಹೊರಟ್ವಿ. ಚೂಡತ್ತಿಗೆ ಮನೆ ಜೆ. ಪಿ. ನರದಲ್ಲಿತ್ತು. 2 ನೇ ನಂಬರ್ ಬಸ್ ಹತ್ತುವ ಮೊದಲು ಅಲ್ಲೇ ಮೆಜೆಸ್ಟಿಕ್ ನಲ್ಲಿ ಆಗ ತಾನೇ ಸುಂದರವಾದ ಕಟ್ಟಿದ ಮಲ್ಲಿಗೆ ಮೊಗ್ಗನ್ನು ಎರಡು ಮೊಳ ತಗೊಂಡೆ. ಆ ಮೊಗ್ಗು ತಗೊಂಡ ಕೂಡ್ಲೇ ನಂಗೆ ಮದುವೆ ಮನೆಯ ಬಹುದೊಡ್ಡ ದೃಶ್ಯ ಕಣ್ಣ ಮುಂದೆ ಬಂದುಬಿಡ್ತು. ಆ ಸುಖವನ್ನು ವಿವರಿಸಲು ಆಗಲ್ಲ ಬಿಡಿ. ರಾಗಿಗುಡ್ಡದಲ್ಲಿ ಬಸ್ ಇಳ್ದು ಒಂದಿಷ್ಟು ಸ್ವೀಟ್ ತಂಗೊಂಡು ನಿಗಧಿಯಾಗಿದ್ದ ಜಾಗಕ್ಕೆ ಹೋದ್ವಿ. ಹೋಗುವಾಗ ಶೇತಮ್ಮನ ಭಯ ಮತ್ತು ಅಂತಕದ ಹೆಜ್ಜೆಗಳು, ನನ್ನ ಹೆಜ್ಜೆಗಳಿಗೆ ಮತ್ತು ಮನಸಿಗೆ ಗೊತ್ತಾಗುತ್ತಿತ್ತು. ಮತ್ತೆ ಮತ್ತೆ ಏನೂ ಹೇಳುವುದು ಬೇಡ ಅಂತ ಸುಮ್ಮನೇ ನಾ ಹೋದೆ. ಆದ್ರೆ ಅವಳ ಕಣ್ಣುಗಳು ಮಾತ್ರ ನಾ ಮತ್ತೆ ಮತ್ತೆ ಮೌನದಲ್ಲೇ ಏನಾದ್ರೂ ಹೇಳಬೇಕೆಂದು ಬಯಸುತ್ತಿದ್ದವು.
ಹೋಗಿದ್ದಾಯಿತು ನನ್ನ ತಂಗಿ ತಲೆ ಬಾಚ್ಕೊಂಡು, ತೆಗೆದುಕೊಂಡು ಹೋಗಿದ್ದ ಎರಡು ಮಳ ಹೂವಿನಲ್ಲಿ ಒಂದು ಮೊಳ ಮುಡಿದಳು. ಇನ್ನೊಂದು ಮಳ ಉಮಾಶ್ರೀ ಅವರಿಗೆ ಅರಿಶಿನ ಕುಂಕುಮ ಕೊಡಲು ಎಂದು ಇರಿಸಲಾಯಿತು. ಚೂಡತ್ತಿಗೆ ಕಾಫೀ ಬಿಸ್ಕತ್ತು ರೆಡಿ ಮಾಡಿಟ್ಟಿದ್ದರು. ಅವರು ಹೇಳಿದ ಸಮಯಕ್ಕೆ ಮೊದಲು 5 ನಿಮಿಷ ಫೋನ್ ಮಾಡಿದರು ಬರುತ್ತಿದ್ದೇನೆ ಅಂತ. ನಾನು ಮತ್ತು ಚೂಡತ್ತಿಗೆ ಇಬ್ಬರೂ ಕೆಳಗಡೆ ಹೋದ್ವಿ. ಉಮಾಶ್ರೀ ಅವರು ವ್ಹೈಟ್ ಅಂಬಾಸಿಡರ್ ಕಾರ್ನಲ್ಲಿ ಒಬ್ರೇ ಬಂದ್ರು. ಆಗ ಅವರು ಎಂ.ಎಲ್.ಸಿ ಆಗಿದ್ದರು. ಒಂದು ಬ್ಯಾಗ್ ನಲ್ಲಿ ಹಣ್ಣು ಹಂಪಲು ಹೂವು ಮಾತ್ರ ಕಾಣುತ್ತಿತ್ತು. ಹುಡುಗ ಮಾತ್ರ ಬಂದಿರಲಿಲ್ಲ. ನಿಮ್ಮ ಮಗ ಯಾಕೆ ಬರಲಿಲ್ಲ ಅಂತ ಬಾಯಿಗೆ ಬಂತು ಕೇಳಲು ಧೈರ್ಯ ಸಾಲದೇ ಸುಮ್ಮನಾದೆ. ನಾನು ನಮಸ್ಕಾರ ಅಮ್ಮ ಬನ್ನಿ ಒಳಗೆ ಅಂದೆ. ಅದೇ ಮೊದಲ ಬಾರಿ ಅವರು ಕೈ ಕುಲುಕಿ ಸ್ಪರ್ಶಿಸಿದ್ದು. ಚೆನ್ನಾಗಿ ನೆನಪಿದೆ ಹಚ್ಚ ಹಸುರಿನ ಸೀರೆ. ದೊಡ್ಡ ಕುಂಕುಮ ಇಟ್ಕೊಂಡು ಬಂದಿದ್ರು. ಪೂರ್ತಿ ಉಮಾಶ್ರೀ ಅವ್ರು ನನ್ನ ಮೆದುಳು ಮತ್ತು ಎದೆಯಲ್ಲಿ ಅಚ್ಚಾಗಿದ್ದು ಆಗಲೇ.
ಬೇಲೂರು ರಘುನಂದನ್ ಕಾಲಂ : ಉಮಾಶ್ರೀ ಅವರು ವ್ಹೈಟ್ ಅಂಬಾಸಿಡರ್ನಲ್ಲಿ ಒಬ್ರೇ ಬಂದ್ರು..

ಎಂದಿನಂತೆ ಸುಂದರ ನಿಮ್ಮ ಬರವಣಿಗೆ… ಮುಂದಿನ ಕಂತಿಗೆ ಕಾಯುವಂತಿದೆ ಕಥನ… 🙂
ಇಂದಿನ ಸಂಚಿಕೆ ಅಣ್ಣ ತಾಯಿಯಾಗಿದ್ದ ಸನ್ನಿವೇಶ ಎಂದೇ ಹೇಳಬಹುದು. ಚೆಂದದ ನಿರೂಪಣೆ ಸರ್. ಕಾಯುತ್ತಿದ್ದೇವೆ ಮುಂದಿನ ಸಂಚಿಕೆಗೆ.
Changide
Kutuhala kuda
Sooper…gurugale,,,
Anna tangiyara sambhanda hege irbeku annodanna naav ee nimma barahadinda Kaliyabahudu,,
Waiting for next one,
ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಯಿತು ಸರ್. ಸುಂದರ. ಮುಂದಿನ ಕಂತಿಗೆ ಕಾತುರದಿಂದ ಕಾಯುತ್ತಿರುವೆ.
ಕಾಯುವಂತಿದೆ..
ತಮ್ಮ ಬದುಕಿನಾನುಭವ, ನೋವು, ನಲಿವು, ಸಂಕಟ ಎಲ್ಲವನ್ನು ನಮ್ಮ ಮುಂದೆ ತೆರದಿಡುತ್ತಿದ್ದೀರಿ. ಮುಂದೇನೋ? ಅಂತ ಕುತೂಹಲ ಹುಟ್ಟುತ್ತಿದೆ. ಮುಂದಿನ ಬರೆಹಕ್ಕೆ ಕಾಯುತ್ತಿದ್ದೇನೆ.
nice
ವಾವ್ವ್!! ರಘು ಸರ್ ಎಷ್ಟು ಚೆಂದ ವಿವರಿಸ್ತಿದ್ದೀರಿ. ಬರುವ ಕಂತಿಗಳಿಗಾಗಿ ಕಾತುರಳಾಗಿದ್ದೇನೆ !! 🙂
Interesting narration… Stage is set for Umashree Madam’s story
its simply super…sir..we can see the brother becoming everything to his sister,,,,,very rare in picture in today’s world we can see…..I am not that much capable to give value added feed back but I will express what I felt after reading your article..It was so pleasant-full in reading and curious to know what happened next…. God bless you both of you……….happy reading
” ಅಸಹಾಯಕತೆಗಳು ನಮ್ಮ ಸ್ವಾಭಿಮಾನಕ್ಕೆ ಅಡ್ಡಿ ಮಾಡಬಾರದು ಅಲ್ವಾ ? ” ee saalu tumbaa ishta aaythu.
Good narration. Eagerly waiting for next edition..
ತುಂಬಾ ಚೆನ್ನಾಗಿ ವಾಸ್ತವವಾಗಿ ನಿರುಪಿಸಿದಂತೆ ಅನಿಸಿತು…..ಅದ್ವಿತೀಯ ವಾಗಿದೆ ರಘು ಸರ್…..
ಮುಂದುವರಿದ ಭಾಗದ ನಿರೀಕ್ಷೆಯಲ್ಲಿ….
ಮಾರ್ಮಿಕವಾದ ನಿರೂಪಣೆ…
ಮದುವೆ ಸಡಗರ ಒಂದು ಕಡೆಯಾದರೆ ಮದುವೆ ಮಾಡಿಕೊಳ್ಳುವ ವರ ಸಂಕಟ ಇನ್ನೊಂದು ಕಡೆ.
ಕೂಡಿ ಆಡಿ ಬೆಳೆದ ಮನೆ ಪ್ರಾಣಕ್ಕೆ ಪ್ರಾಣವಾದ ಅಣ್ಣನ ಬಿಟ್ಟು ಹೊರಡುವನೆಂದರೆ ಮನದೊಳಗಿನ ಸಂಕಟದ ಜೊತೆ ಬೇರೆ ಮನೆಯೊಂದರ ಪ್ರವೇಶ.
ಮನಸಿನ ಮಾತು ಯಾರಿಗೂ ತಿಳಿಯದು…..
ಜೀವನದ ಕಟು ಸತ್ಯ
ನಿಮ್ಮಿಂದಲೇ ಸಂಕ್ಷಿಪ್ತವಾಗಿ ಕಥೆಯನ್ನು ಕೇಳಿದ ನನಗೆ ಇದನ್ನು ಓದುವುದೂ ಒಂದು ಅನನ್ಯ ಅನುಭವ ಅನ್ನಿಸುತ್ತಿದೆ. ಪರಿಶ್ರಮದ ಜೀವನದಲ್ಲಿ ಎಲ್ಲಿಯೋ ಸಿಹಿನೀರಿನೊರತೆಯೊಂದನ್ನು ದೇವರು ಕರುಣಿಸದೆ ಬಿಡುವುದಿಲ್ಲ. ಆ ಹೊತ್ತಿಗೆ ಪಟ್ಟ ಪಾಡು, ಜೀವನದುದ್ದದ ಪರದಾಟವೆಲ್ಲ ಒಂದು ಗಟ್ಟಿಯಾದ ಅರ್ಥ ಪಡೆದುಕೊಂಡುಬಿಡುತ್ತದೆ. ಶಿಕ್ಷಕನಾಗಿ ನೀವು ಜೀವನದುದ್ದಕ್ಕೂ ಮಕ್ಕಳಿಗೆ ತೋರಿದ ದಾರಿದೀಪ ನಿಮಗೆ ಶ್ರೀರಕ್ಷೆ. ಬರಹ ಚನ್ನಾಗಿ ಮೂಡಿ ಬರುತ್ತಿದೆ. ಅದೃಷ್ಟವೊಲಿದ ರಾಜಕುಮಾರಿಯ ಕಥೆಯಂತಿದೆ ಇದು. ಒಳಿತಾಗಲಿ ನಿಮಗೆ.
Interesting. ಮುಂದಿನ ಕಂತಿಗೆ ಕಾಯುತ್ತಿದ್ದೇನೆ
ಕಾಯ್ತಿದ್ದೆ .. ಮತ್ತೆ ಕಾಯಬೇಕಲ್ಲಾ ಎಂಬೋ ಸಂಕಟ ಕೊನೆಯಲ್ಲಿ …ಅದ್ಭುತ ನಿರೂಪಣೆ… ಮದುವೆಗೆ ಗಂಡನ್ನು ನೋಡಬೇಕಾದ್ರೆ ಹೆಣ್ಣಿನ ಮನದಲ್ಲಿ ಆಗುವ ಆ ನವಿರು ತಳಮಳ ಬಹಳ ಚೆನ್ನಾಗಿ ಬಿಂಬಿಸಿದ್ದೀರಾ
ನಿಮ್ಮಿಂದಲೇ ಸಂಕ್ಷಿಪ್ತವಾಗಿ ಕಥೆಯನ್ನು ಕೇಳಿದ ನನಗೆ ಇದನ್ನು ಓದುವುದೂ ಒಂದು ಅನನ್ಯ ಅನುಭವ ಅನ್ನಿಸುತ್ತಿದೆ. ಪರಿಶ್ರಮದ ಜೀವನದಲ್ಲಿ ಎಲ್ಲಿಯೋ ಸಿಹಿನೀರಿನೊರತೆಯೊಂದನ್ನು ದೇವರು ಕರುಣಿಸದೆ ಬಿಡುವುದಿಲ್ಲ. ಆ ಹೊತ್ತಿಗೆ ಪಟ್ಟ ಪಾಡು, ಜೀವನದುದ್ದದ ಪರದಾಟವೆಲ್ಲ ಒಂದು ಗಟ್ಟಿಯಾದ ಅರ್ಥ ಪಡೆದುಕೊಂಡುಬಿಡುತ್ತದೆ. ಶಿಕ್ಷಕನಾಗಿ ನೀವು ಜೀವನದುದ್ದಕ್ಕೂ ಮಕ್ಕಳಿಗೆ ತೋರಿದ ದಾರಿದೀಪ ನಿಮಗೆ ಶ್ರೀರಕ್ಷೆ. ಬರಹ ಚನ್ನಾಗಿ ಮೂಡಿ ಬರುತ್ತಿದೆ. ಅದೃಷ್ಟವೊಲಿದ ರಾಜಕುಮಾರಿಯ ಕಥೆಯಂತಿದೆ ಇದು. ಒಳಿತಾಗಲಿ ನಿಮಗೆ.
Reply
ಅಣ್ಣ ತಂಗಿಯ ಸಲುಗೆ, ಮದುವೆ ವಿಚಾರದಲ್ಲಿ ಹೆಣ್ಣು ಮಕ್ಕಳ ಭೀತಿ ಅನುಮಾನ, ಸಿನಿಮಾದವರ ಬಗ್ಗೆ ಇರುವ ಅಸ್ಪಷ್ಟತೆ ಎಲ್ಲವೂ ಸರಳ ಸುಂದರ ಪದಬಳಕೆಯೊಡನೆ ವಿವರಿಸಿದ್ದೀರ. ಮುಂದಿನ ಕಂತಿನ ನಿರೀಕ್ಷೆಯಲ್ಲಿ ಮಂಜುತಿಮ್ಮ
ಅಣ್ಣ ತಂಗಿಯರ ಅಪ್ಯಾಯಮಾನ ಮಾತುಕತೆ ಆಪ್ತವಾಗಿತ್ತು.ನಿಮ್ಮ ಭಕ
ಭಕ್ತಿ,ಹಿರಿಯರೆಡೆಗಿನ ಶ್ರದ್ಧೆಯ ಜೊತೆಗೆ ಸ್ವಾಭಿಮಾನದ ಮಾತುಗಳೂ ಅರ್ಥಪೂರ್ಣ. ಮುಂದೇನಾಯ್ತು?ಕುತೂಹಲವಿದೆ..ಕಾಯುತ್ತೇವೆ.
E yugadalu hiriyarandigina nade nudy samskara, daivatvada nambikeyondigina payana odidaga shivarama karantarara ‘alidamele’ kadambariya payanada drushya modalige kanna munde chitritavadare, saha prayanikarondigina sanna sangarsha,asya manoranjakavagide:-). .
Anna thangiyandigina naduvina naija odanata, hennina sukshma manosthity,samajadali unnatha mattadavarondigina vivahada sambandadadige yeduraguva savala yemba preshne, annanagi thangige heluva kivi mathu,annana javadari,ase,swabimana edara thiruladare:-). . avarondigi (umashri)na prethiya odanata sahaja sundaravagi mudibandide:-). .
Koneyadagi edu samajamukiyondige sukantya kanali yendu ashisthene:-). .
THANGIGE THAKK A ANNA REALY AM MISSING RAGHU SIR
THANGIGE THAKK A ANNA REALY AM MISSING RAGHU SIR