ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬೇಂದ್ರೆ ವರಕವಿ ಅಲ್ವೆ, ಸುಮ್ಮನಾಗಲೇಬೇಕಾಯಿತು..

 

 

 

ಚಿದಂಬರ ನರೇಂದ್ರ 

 

 

 

 

ಕೆ ಎಸ್ ನರಸಿಂಹ ಸ್ವಾಮಿಯವರ ಪತ್ನಿ ವೆಂಕಮ್ಮನವರ ಹೆಸರಿನಲ್ಲಿ ಕವಿ ಪತ್ನಿ ದಿನಾಚರಣೆಯ ನಡೆಯುತ್ತಿದೆ. ಚಂದ್ರಶೇಖರ ಕಂಬಾರರ ಪತ್ನಿ ಸತ್ಯಭಾಮ ಅವರಿಗೆ ಈ ಸಾಲಿನ ಪ್ರಶಸ್ತಿ.

ಇರಲಿ, ಈ ಪ್ರಯುಕ್ತ ಚಿದಂಬರ ನರೇಂದ್ರ ಅವರು ಬರೆದ ಒಂದು ಪದ್ಯ

ಸಿಂಪ್ಲಿ ಎಂಜಾಯ್ ಮಾಡಿ-

 

ಮೊನ್ನೆ,
ನನ್ನ ಇನ್ ಬಾಕ್ಸ್ ಗೆ
ಒಂದೇ ಸವನೇ
ಹೊಗಳಿಕೆಗಳ ಸುರಿಮಳೆ

“ನೀವೇಷ್ಟು ಒಳ್ಳೆ ಕವಿ,
ನಾನು ನಿಮ್ಮ ಅಭಿಮಾನಿ”
ಹಾಗೆ, ಹೀಗೆ ಅಂತೆಲ್ಲ.

ಸುಮ್ಮನಿರದೆ ಹೆಂಡತಿಗೆ ಮೆಸೆಜ್
ತೋರಿಸಿ ಸೊಕ್ಕಿನಿಂದ ಹೇಳಿದೆ ;

“ನೋಡು, ನನ್ನ ಕವಿ ಅಂತ
ಜನ ಒಪ್ಪಿದ್ದಾಯ್ತು,
ಇನ್ನು ಮೇಲೆ ಮನೆಯ
ಸಣ್ಣ ಸಣ್ಣ ಕೆಲಸ ಹೇಳಬೇಡ.
ನರಸಿಂಹಸ್ವಾಮಿಗಳ ಹೆಂಡತಿ
ಮೆಣಸಿನಕಾಯಿ, ಕೊತ್ತಂಬ್ರಿ ತರ್ಲಿಕ್ಕೂ ಕೂಡ
ಅವರನ್ನ ಹೊರಗೆ ಕಳಿಸ್ತಿರ್ಲಿಲ್ಲವಂತೆ”

ಹೆಂಗಸರದ್ದು
ಕೇಳಿ ಸುಮ್ಮನಿರುವ ಜಾಯಮಾನವಲ್ಲ.
ಅದರಲ್ಲೂ ಈಕೆ
ಧಾರವಾಡದಲ್ಲಿ ಹುಟ್ಟಿದವಳು.

“ನೀವೇನು ನರಸಿಂಹಸ್ವಾಮಿಗಳ ಥರ ಬರೀಬೇಕಾಗಿಲ್ಲ
ಬೇಂದ್ರೆ ಥರ ಬರೀರಿ ಸಾಕು.
ಬೇಂದ್ರೆ, ನಾಲ್ಕು ಕಿಲೋ ಮೀಟರ್ ನಡೆದು
ಹಾಲಗೇರಿ ಹಣಮಂತ ದೇವರ ಗುಡಿ ತನಕ ಹೋಗಿ
ಪಲ್ಲೆ ತರ್ತಿದ್ರಂತ. ”

ಒಂದು ಕ್ಷಣ ಅವಾಕ್ಕಾದೆ,
ಸಿಟ್ಟು ಬಂತು.
ಬೇಂದ್ರೆ ವರಕವಿ ಅಲ್ವೆ
ಸುಮ್ಮನಾಗಲೇಬೇಕಾಯಿತು.

‍ಲೇಖಕರು avadhi

18 November, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading