ನಾನೊಮ್ಮೆ ಮೈ ಮುರಿದೆದ್ದು ಆಕಳಿಸಿದರೆ..

ಶ್ರೀದೇವಿ ಕೆರೆಮನೆ 

YOU CANNOT PUT A FENCE
AROUND THE PLANET EARTH
….. Marina de Bellangenta

ಎಷ್ಟೆಂದು ನನ್ನ ಕಟ್ಟಿಹಾಕಲು ನೋಡುತ್ತೀರಿ?
ಎಲ್ಲೆಲ್ಲಿ ನನ್ನ ಕಟ್ಟಿಡಲು ಬಯಸುತ್ತೀರಿ?
ಸ್ವಚ್ಛಂದವಾಗಿ ಭೋರ್ಗರೆಯುವ ನನ್ನ
ಬೆಳ್ನೊರೆಯ ಜೊತೆ ಚಿನ್ನಾಟವಾಡುತ್ತಲೇ
ಬಂಧಿಸುವ ಮನಸ್ಸಾದರೂ ನಿಮಗೇಕೆ?

ಅಭಿವೃದ್ಧಿಯ ಹೆಸರು ಹೇಳಿ
ಹಣ ಹೊಡೆಯುವ ಹುನ್ನಾರಕೆ
ನನ್ನ ತೀರವೇ ನಿಮಗೆ
ಮೊಗೆ ಮೊಗೆದು ಒಡಲ
ತುಂಬಿಸುವ ಖಜಾನೆಯಾಗಬೇಕೆ?

ಚಂದಗೊಳಿಸುವ ನಯವಾದ ಮಾತಿಗೆ
ಹೊಳೆವ ಮರಳ ರಾಶಿಯೂ ಮರುಳಾಗಿ
ಬಗೆ ಬಗೆದು ಎದೆ ಸೀಳಿ
ನಿಮ್ಮ ರಾವಣನ ಹೊಟ್ಟೆಗಿಷ್ಟು
ಅರೆಕಾಸಿನ ಮಜ್ಜಿಗೆ ಸುರಿಯ ಬೇಕೆ?

ಒಂದು ಅಲೆಗೇ ಬಿದ್ದು ಹೋಗುವ
ನನ್ನೊಡಲ ಬಂಡೆಗಲ್ಲಿಂದಲೇ ಗೋಡೆ ಕಟ್ಟಿ
ನನ್ನ ಕಟ್ಟಿಟ್ಟೆ ಎಂದು ಹಮ್ಮು ತೋರುವ
ನಿಮ್ಮ ಮುಗ್ಧತೆಗೆ ನನಗೆ ನಗು ಬರುತ್ತಿಲ್ಲ
ಅಳಲು ಒಡಲ ತುಂಬಾ ಇರುವ
ಉಪ್ಪು ನೀರು ಒಪ್ಪುತ್ತಿಲ್ಲ…

ಕಟ್ಟಿ ಬಿಡಿ, ಎಷ್ಟಾಗುತ್ತದೋ ಅಷ್ಟು
ನಾನೊಮ್ಮೆ ಮೈ ಮುರಿದೆದ್ದು ಆಕಳಿಸಿದರೆ
ಗಡಗಡನೆ ನಡುಗಿ ತರಗೆಲೆಯಂತೆ
ಬಿದ್ದು ಹೋಗುವ ಬಿದಿರು ತಡಿಕೆಯನ್ನು
ಎಂದೆಂದೂ ನನ್ನ ಸುತ್ತಲೂ ಬೇಲಿ
ನಿರ್ಮಿಸಲಾಗದು ಎಂಬ ಪರಿಜ್ಙಾನದೊಂದಿಗೆ.

‍ಲೇಖಕರು avadhi

November 18, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. rediffamail

    ತುಂಬಾ ಸುಂದರ ಹಾಗೂ ಮಾರ್ಮಿಕ ಕವನ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: