ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಿದಲೋಟಿ ರಂಗನಾಥ್ ಹೊಸ ಕವಿತೆ- ಬೆತ್ತಲ ರಾತ್ರಿ…

ಬಿದಲೋಟಿ ರಂಗನಾಥ್

ನೋಡ ಬೇಕೆನಿಸಿತು
ಆ ಬೆತ್ತಲ ರಾತ್ರಿ
ಕನಸಿಗೆ ಬಂದು ಕನವರಿಸಿ
ಹುತ್ತವಾದವಳನ್ನು

ಸೋಲ ಬೇಕೆನಿಸಿತು
ತೊಳ್ತೆಕ್ಕೆಯಲಿ ಬಂಧಿಯಾಗಿ
ಕಡೆದ ಚಂದ್ರ ಚಿತ್ರಕೆ
ಬಣ್ಣ ಹಚ್ಚದೇ ಹೋದವಳಿಗೆ

ಕವಿಯಬೇಕೆನ್ನಿಸಿತು
ಕಣ್ಣರೆಪ್ಪೆಯ ಗೂಡೊಳಗೆ
ಮಂಪರು ತುಂಬಿ
ಅರೆ ನಿದ್ದೆ ಮಾಡಿ ಹೋದವಳನ್ನು

ಕೆನ್ನೆ ಸವರ ಬೇಕೆನಿಸಿತು
ಕಸಿದ ಮುತ್ತುಗಳ ರಾಶಿ ಮಾಡಿ
ಹೃದಯ ತುಂಬದೇ
ಗುರುತು ಮಾಡಿ ಹೋದವಳಿಗೆ

ಗಟ್ಟಿಯಾಗಿ ಕೂಗ ಬೇಕೆನ್ನಿಸಿತು
ಉಸಿರ ಬೆರೆಸಿ
ಪರದೆ ಕಟ್ಟಿ
ಚಿಟ್ಟೆರೆಕ್ಕೆಯಡಿ ಕೂತ
ಅವಳ ಕಿವಿ ಮುತ್ತಲು

ಕವಿತೆ ಬರೆಯ ಬೇಕೆನ್ನಿಸಿತು
ಅಳಿದುಳಿದ ಹೆಜ್ಜೆ ಸಪ್ಪಳ ತುಂಬಿ
ದೂರದಲ್ಲೆಲ್ಲೋ
ದಿಕ್ಕೆಟ್ಟ ಮನಸ ಹೊತ್ತು
ನನ್ನತ್ತಲೇ ಕಣ್ಣಾಸಿ
ಕಾಯುತ್ತಿರುವ ಮನಸ ಕಾವಾಗಿಸಲು

‍ಲೇಖಕರು Admin

21 December, 2021

2 Comments

  1. ಎಂ.ಜವರಾಜ್

    “ಅಳಿದುಳಿದ ಹೆಜ್ಜೆ ಸಪ್ಪಳ ತುಂಬಿ
    ದೂರದಲ್ಲೆಲ್ಲೋ
    ದಿಕ್ಕೆಟ್ಟ ಮನಸ ಹೊತ್ತು
    ನನ್ನತ್ತಲೇ ಕಣ್ಣಾಸಿ
    ಕಾಯುತ್ತಿರುವ ಮನಸ ಕಾವಾಗಿಸಲು”

    ಇವು ‘ಬೆತ್ತಲ ರಾತ್ರಿ’ಯ ಶಕ್ತ ಸಾಲುಗಳಿವು.

    ಬಿದಲೋಟಿಯವರ ಕವಿತೆಗಳು ಓದುಗನನ್ನು ಬೆಚ್ಚಿ ಬೀಳಿಸುತ್ತವೆ.

    ಇವರ ಕವಿತೆಗಳು ಜೀವದ್ರವ್ಯದ ಕಣಜ. ಹೊಸ ತಲೆಮಾರಿನ ಜೀವನ್ಮುಖೀ ತುಮುಲಗಳ ಜೀವ ಬೀಜಗಳು ಆಗಿವೆ. ಈ ಜೀವ ಬೀಜಗಳು ಮಳೆ ನೆಂದ ಮಣ್ಣೊಳಗಿಂದ ಪುಟಿದೆದ್ದ ಮೊಳಕೆಯಂತೆ!

  2. Bi

    ಅರ್ಥಪೂರ್ಣ ಕವಿತೆ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading