ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಸವರಾಜ ಕೋಡಗುಂಟಿ ಅಂಕಣ – ಕೊಡವ ಬಾಶೆಯ ಒಂದು ನೋಟ…

ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ

ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು.

ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು.

ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು.

‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ

ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ

ವೈವಿಧ್ಯತೆಯತ್ತ ಬೆಳಕು ಚೆಲ್ಲಲಿದ್ದಾರೆ.

ಅಂಕಿ ಸಂಖ್ಯೆ ಆಧಾರಿತ ವಿಶ್ಲೇಷಣೆ ನಮ್ಮ ನಂಬಿಕೆಗಳನ್ನು

ಅಲುಗಾಡಿಸಬಹುದು.

ಕರ‍್ನಾಟಕದ ಒಂದೊಂದು ಬಾಶೆಯ ಮೇಲೆ ಮೂವತ್ತಕ್ಕೂ

ಹೆಚ್ಚು ಬಿಡಿ ಬರಹಗಳನ್ನು ಇಲ್ಲಿ ಬರೆದಿದ್ದಾರೆ.

ರ‍್ನಾಟಕದ ಸುಮಾರು ನಲವತ್ತು ಬಾಶೆಗಳ ಹಂಚಿಕೆಯನ್ನ

ಇನ್ನು ಮುಂದೆ ಪರಿಚಯಿಸಲಾಗುವುದು.

42

ಕೊಡವ ಕರ‍್ನಾಟಕದಲ್ಲಿ ವಿಶೇಶವಾಗಿ ಕಂಡುಬರುವ ಬಾಶೆಯಾಗಿದೆ. ದೇಶದಲ್ಲಿ ಒಟ್ಟು ಕೊಡವರ ಸಂಕೆ ೧,೨೪,೮೫೭ ಆಗಿದೆ. ಇದರಲ್ಲಿ ಕೂರ‍್ಗಿ/ಕೊಡಗು ಮತ್ತು ಕೊಡವ ಎಂಬ ಎರಡು ತಾಯ್ಮಾತುಗಳು ದಾಕಲಾಗಿವೆ. ಎರಡೂ ತಾಯ್ಮಾತುಗಳಲ್ಲಿ ಕೆಳಗೆ ಪರಿಗಣಿಸುವಶ್ಟು ಮಂದಿ ದಾಕಲಾಗಿದ್ದಾರೆ. ಈ ಎರಡು ತಾಯ್ಮಾತುಗಳು ಹೆಸರಿನ ಬಿನ್ನತೆಗಿಂತ ಬೇರೆಯಾಗಿರಲಿಕ್ಕಿಲ್ಲ ಎಂಬ ಕಾರಣದಿಂದ ಇವೆರಡನ್ನೂ ಕೂಡಿಸಿ ಲೆಕ್ಕಿಸಿದೆ. ದೇಶದಲ್ಲಿ ದಾಕಲಾದ ಒಟ್ಟು ಕೊಡವರಲ್ಲಿ ಬಹುತೇಕರು ಅಂದರೆ ೧,೧೦,೫೦೮ ಮಂದಿ ಕರ‍್ನಾಟಕದಲ್ಲಿಯೆ ನೆಲೆಸಿದ್ದಾರೆ. ಇದು ಒಟ್ಟು ದೇಶದ ಕೊಡವ ಬಾಶೆಯ ೯೭.೦೫೮% ಆಗಿದೆ. ಕರ‍್ನಾಟಕದಲ್ಲಿ ದಾಕಲಾದ ಕೊಡವರಲ್ಲಿ ಕೊಡವ ತಾಯ್ಮಾತನ್ನು ಆಡುವವರು ದೊಡ್ಡ ಸಂಕೆಯಲ್ಲಿ ಇದ್ದಾರೆ (೯೬,೮೭೮) ಮತ್ತು ಕೂರ‍್ಗಿ/ಕೊಡಗು ತಾಯ್ಮಾತಿನ ಒಳಗೆ ದಾಕಲಾದವರು ಕಡಿಮೆ (೧೩,೬೩೦). ಆದರೆ, ಈಗಾಗಲೆ ಹೇಳಿದಂತೆ ಅವೆರಡೂ ಒಂದೆ ಎಂದು ಲೆಕ್ಕಿಸಿದೆ. 

ಕರ‍್ನಾಟಕದ ಒಳಗೆ ಕೊಡವ ಮಾತಾಡುವ ಬಹುತೇಕ ಮಂದಿ ಕೊಡಗು, ಉಡುಪಿ ಜಿಲ್ಲೆಗಳಲ್ಲಿ ದಾಕಲಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ದಾಕಲಾದ ಕೊಡವ 82,421 ಮಾತುಗರು. ಇದು ಒಟ್ಟು ಕರ‍್ನಾಟಕದ ಕೊಡವರ 74.583 ಆಗಿದೆ. ಆನಂತರ ಉಡುಪಿ ಜಿಲ್ಲೆಯಲ್ಲಿ 17,596 ಮಂದಿ ದಾಕಲಾಗಿದ್ದು ಇದು 15.922% ಆಗಿದೆ. ಆನಂತರ ಮಯ್ಸೂರು ಜಿಲ್ಲೆಯಲ್ಲಿ ಹತ್ತು ಸಾವಿರಕ್ಕಿಂತ ಕಡಿಮೆ ಮತ್ತು ಒಂದು ಸಾವಿರಕ್ಕಿಂತ ಹೆಚ್ಚು ಮಂದಿ, ಅಂದರೆ 6,627 ಮಂದಿ ದಾಕಲಾಗಿದ್ದಾರೆ.

ಇಲ್ಲಿ ಕೆಳಗೆ ಕೊಡವ ಮಾತುಗರ ಜನಸಂಕೆಯನ್ನು ಅಟ್ಟದಲ್ಲಿ ತೋರಿಸಿದೆ. 

ಪ್ರದೇಶಜಿಲ್ಲೆಯ ಜನಸಂಕೆಮಾತುಗರು  ಜಿಲ್ಲೆಯ % ಆ ಬಾಶೆಯ % 
ಕರ‍್ನಾಟಕ 6,10,95,2971,10,5080.180%100%
ಕೊಡಗು 5,54,51982,42114.863%74.583
ಬೆಂಗಳೂರು ನಗರ  96,21,55117,5960.182%15.922
ಮಯ್ಸೂರು  30,01,1276,6270.220%5.996
ದಕ್ಶಿಣ ಕನ್ನಡ  20,89,6499960.047%0.901
ಹಾಸನ 17,76,4216100.034%0.551
ಚಿಕ್ಕಮಗಳೂರು 11,37,9615570.048%0.504
ಉಡುಪಿ  11,77,3612720.023%0.246
ಬಾಗಲಕೋಟೆ  18,89,7521110.005%0.100
ಬೆಂಗಳೂರು ಗ್ರಾಮಂತರ 9,90,9231260.012%0.114
ರಾಮನಗರ  10,82,6361070.009%0.096
ಬೆಳಗಾವಿ 47,79,661790.001%0.071
ಕಲಬುರಗಿ  25,66,326770.003%0.069
ಉತ್ತರ ಕನ್ನಡ 14,37,169780.005%0.070
ಮಂಡ್ಯ 18,05,769890.004%0.080
ದಾವಣಗೆರೆ 19,45,497620.003%0.056
 ಹಾವೇರಿ 15,97,668590.003%0.053
ಶಿವಮೊಗ್ಗ 17,52,7531760.010%0.159
ರಾಯಚೂರು  19,28,812420.002%0.038
ಕೋಲಾರ 15,36,401740.004%0.066
ಚಾಮರಾಜನಗರ 10,20,791520.005%0.047
ಬೀದರ  17,03,300430.002%0.038
ಯಾದಗಿರಿ  11,74,271370.003%0.033
ಬಳ್ಳಾರಿ 24,52,595470.001%0.042
ಚಿತ್ರದುರ‍್ಗ 16,59,456380.002%0.034
ವಿಜಯಪುರ 21,77,331280.001%0.025
ದಾರವಾಡ  18,47,023370.002%0.033
ಗದಗ  10,20,791170.001%0.015
ತುಮಕೂರು 26,78,980420.001%0.038
ಚಿಕ್ಕಬಳ್ಳಾಪುರ 12,55,10464.780%0.005
ಕೊಪ್ಪಳ 13,89,92121.4380.001

ಕೊಡವ ಮಾತುಗರ ಹಂಚಿಕೆ

C:\Users\DELL\Downloads\Distribution of Kodava.jpg

‍ಲೇಖಕರು Admin

29 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading