ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಬಯಲು ಬೆತ್ತಲೆಯ ಒಳಗೆಳೆದುಕೊಂಡರೆ…'

ಸಂಬಂಧ

dattu kulkarni

– ದತ್ತು ಕುಲಕರ್ಣಿ

ಯಾವಾಗಲೂ ಆಗುವದೇ ಹೀಗೆ….
ಆಗುವದೆಲ್ಲ ಏನೂ ಅಲ್ಲದ ಹಾಗೆ…
 
ಬಯಲು ಬೇಸರವಾಗಿ
ಬದುಕು ಹಿಡಿಯಿತು ಮತ್ತೊಂದು ಹಾದಿ
ಈ ಬದಿ ಆ ಬದಿಯ ತಡವಿ
ಇಡಿ ಅಡವಿಯನು ಸುತ್ತಾಡಿ
ಕೊನೆಗೆ
ರಾತ್ರಿಯಲ್ಲಿಯೇ ಕಂಡ ಬಾವಿಯಂತ ಗವಿಗೆ
ಎಳೆದು ತಂದಿತು ಮನಸೆಂಬ ದಾಯಾದಿ
 
ಗವಿಯಲ್ಲಿ
ಹೊರಗೆ ರಣ ಬಿಸಿಲಿದ್ದರೆ ಒಳಗೆ ತಂಪು
ಹೊರಗೆ ಛಳಿಯಿದ್ದರೆ ಒಳಗೆ ಬೆಚ್ಚನೆಯ ಬಿಸುಪು
ಮತ್ತೆ ಒಳಗಿನ
ಕಾರ್ಗತ್ತಲೆಗೆ ಕಣ್ಣು ಹೊಂದಿಕೊಂಡರೆ
ಅಣುರೇಣುಗಳೂ ಸ್ಪಟಿಕ ಸದೃಶ್ಯ
ಇಲ್ಲವಾದಲ್ಲಿ ಹೆಜ್ಜೆ ಹೆಜ್ಜೆಯೂ
ಎಡರು-ತೊಡರುಗಳ ಆಗರ
2
ಗವಿಯ ಗೊಂದಲುಗಳ ಸಂದಿಗಳಲ್ಲಿ
ಚಕಿತತೆಯ ಸೊಬಗು
ಸ್ಪಷ್ಟ ಪರಿಚಿತತನದ ಅಸ್ಪಷ್ಟ ಪರಿಯೇ
ಅನಂತ ಬೆರಗುಗಳ ತವರು
 
ಒಮ್ಮೊಮ್ಮೆ
ಗವಿಯ ಒಳ ಠಾವಿನಲ್ಲೆಲ್ಲ ಬೂದಿ ಮುಚ್ಚಿದ ಕೆಂಡ
ಸುಪ್ತ ತಂತಮ್ಮತನಗಳ ದಿಗಿಲಿನ ನಿಗಿ ನಿಗಿ ಭುಗಿಲು
ಮತ್ತೊಮ್ಮೆ ಕೂಡಿ ಕುಚ್ಚಿದ ತಣ್ಣನೆಯ ಬರಿ ಇದ್ದಿಲು
 
ಈ  ಗವಿಯನ್ನೆ
ಗಮ್ಯವಾಗಿಸಲಾರೆ
ಇದನ್ನು ಬಿಟ್ಟೂ ಹೋಗಲಾರೆ
ಗವಿ ಬಾಗಿಲಿಗೆ ಮುಕ್ತತೆಯ ಕೊರೆದು
ಬಯಲು ಬೆತ್ತಲೆಯ ಒಳಗೆಳೆದುಕೊಂಡರೆ
ಒಳಗೆಲ್ಲ ತಂಪನೆಯ ಆಪ್ತ ನೆರಳು
ಹಾಗೆಯೇ ನಿರ್ಬಂಧ ಜೀವ ಗಾಳಿಯ ಬೆಳಕು….

‍ಲೇಖಕರು G

11 September, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading