ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಚ್ಚಿಡುವೆ ಎದಯ ಬಿಸಿ ದಫ್ತರಿನಲ್ಲಿ..

ಸಿಕ್ಕರೆ ತಿಳಿಸಿ

question mark

ರಮೇಶ ಹೆಗಡೆ

ಹೋಗಿವೆ ಉದುರಿ
ಸಪೂರನೆಯ ನಗುವೆಲ್ಲ
– ಬಿರು ಬಿಸಿಲ ಅಡಿಗೆ

ಸಿಕ್ಕರೆ ನಗೆ ಚೂರು
ತಿಳಿಸಿಬಿಡಿ ನನಗೂ
– ವಿಳಾಸವನಿತ್ತು

ಕಾಸಿಗಾದರೆ
ಬೇಡ ಮತ್ತೆ,- ಕಿಸೆಯೆಲ್ಲ
ಬರಿಯ ಕಸ

ನೀವು ನಕ್ಕರೂ
ಸರಿಯೇ,- ಬಚ್ಚಿಡುವೆ
ಎದಯ ಬಿಸಿ ದಫ್ತರಿನಲ್ಲಿ

shirts

ಬಾಕಿಯನು . . 

ನಿನ್ನದೇ ನೆನಪುಗಳ ಮೆಲುವಾಗಿ ಬೆರೆಸಿ/
ಹೀರುವೆನು ಮಧುವನ್ನು ವೇದನೆಯ ಸರಿಸಿ//

ನಶೆಯೇರಲಿಲ್ಲ ತುಸು ತಾಸಾದರೂನು/
ದುಂಬಿಯದೇ ಒಲವ ದನಿ ಎದೆಹೂವ ಅರಸಿ//

ಯಾವುದೋ ದಾರಿ ಇದು ಎಷ್ಟನೇ ಸಾರಿ/
ಕಳೆದು ಹೋಗುವುದೇಕೆ ಮೌನವನು ಸುರಿಸಿ//

ಆಟವಾಡುವ ಚಟಕೆ ನನ್ನಂತರಂಗ/
ಆಟಿಕೆಯ ತುಂಡಲ್ಲ ಅರೆ ನಿಮಿಷ ಕುಣಿಸಿ//

ಕಂತಿನಂತಲ್ಲ ನಗದು ರಾಶಿಯಿದು ಪ್ರೀತಿ/
ಒಟ್ಟುಮೊತ್ತವ ಹಿಡಿಸು ಬಾಕಿಯನು ಭರಿಸಿ//

‍ಲೇಖಕರು Admin

12 January, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading