ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಗುವಿನಂಥ ತಂದೆ ತಟ್ಟೆಯ ಮುಂದೆ…

ದಿನರಾತ್ರಿ

ಪ್ರವೀಣ್ ಕುಮಾರ್ ದೈವಜ್ಞಾಚಾರ್ಯ

ನನ್ನಪ್ಪನ ಸಿಡುಕಗಳನೆಲ್ಲ
ಊದುಗೊಳವೆಯಲಿಟ್ಟು
ಗಾಳಿ ಊದುತ್ತಾಳೆ -ನನ್ನವ್ವ
ಧಗಧಗನೆ ಉರಿದು
ಅನ್ನ ಬೇಯುವ ನೆಪದಲ್ಲಿ
ಸುಟ್ಟು ಬೂದಿಯಾಗುವವು ಸಿಟ್ಟುಗಳೆಲ್ಲ
 
ತಟ್ಟೆಯ ಮುಂದೆ
ಮಗುವಿನಂಥ ತಂದೆ
 
ತುತ್ತು ಮೆಲ್ಲುವಾಗ
ಸತ್ತ ಸಿಟ್ಟಿನ ಬೂದಿ
ನಗುತ್ತದೆ ಒಳಗೊಳಗೆ
ಹೊಗೆಯಾಡುತ್ತದೆ ಒಳ-ಹೊರಗೆ
 
ಈಗೀಗ ನನ್ನಪ್ಪನಿಗೆ ಸಿಟ್ಟು ಬರುವದಿಲ್ಲ
ಹಟ ಮಾಡುವದಿಲ್ಲ
ತಟ್ಟೆಯಲಿ ಅನ್ನವಿರುವಾಗಲೆ ಕೈತೊಳೆಯುವದಿಲ್ಲ
 
ಮಗುವಿನಂಥ ತಂದೆ
ತಟ್ಟೆಯ ಮುಂದೆ.
 

‍ಲೇಖಕರು avadhi

16 June, 2013

4 Comments

  1. ಗುರು ಡಿಜಿಹಳ್ಳಿ

    ನೆನಪಿನ ಬುತ್ತಿ
    ಬಿಚ್ಚಿ ಹಂಚಿ ಉಂಡರೆಷ್ಟು ಮುದ……
    ಸುಂದರವಾದ ರಚನೆ.:-)

  2. Vithal Dalawai

    Very nice poem praveenkumar.

  3. Vanamala V

    ತುಂಬಾ ತುಂಬಾ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading