ಫೇಸ್ ಬುಕ್ ನ ಅರ್ಥ ಮಾಡ್ಕೊಳಕ್ಕೇ ಆಗ್ತಿಲ್ಲ ಗುರೂ…

v l amrutha varshini

ಅಮೃತವರ್ಷಿಣಿ ವಿ ಎಲ್

ಈ ಫೇಸ್ಬುಕ್ ನ ಸ್ವರೂಪ ಅರ್ಥ ಮಾಡ್ಕೊಳಕ್ಕೇ ಆಗ್ತಿಲ್ವಲ್ಲ ಗುರೂ…

ಒಂದು ಕಡೆ ಮ್ಯಾಜಿಕ್ ನೋಡಿ ಉರುಳಾಡಿಕೊಂಡು ನಗೋ ಚಿಂಪಾಂಜಿ ತೋರ್ಸುತ್ತೆ, ಅದರ ಕೆಳಗಡೇನೇ ಇವರ್ಯಾರೋ ಇಂಥ ಈಶ್ವರಿ, ಈ ತಾಯಿಗೆ ಲೈಕ್ ಕೊಟ್ಟು ಕೃಪೆಗೆ ಪಾತ್ರರಾಗಿ ಅನ್ನೋ ಚಿತ್ರ ಕಾಣುತ್ತೆ. ಇನ್ನೊಬ್ರು ನಿಮ್ಗೆ ಈ ಚಿತ್ರದಲ್ಲಿ ನಿಮ್ಮ ಇಷ್ಟದೈವ ಕಂಡ್ರೆ ಕಮೆಂಟ್ ಮಾಡಿ, ಕಾಣದಿದ್ರೆ ಲೈಕ್ ಮಾಡಿ ಅನ್ನೋ ವಿಚಿತ್ರ ಆಪ್ಷನ್ ಕೊಡುತ್ತಾರೆ.

facebook likeಇಂತಿಪ್ಪ ಫೇಸ್ಬುಕ್ ಗೆ ಯಾವುದೋ ದಿನಾಚರಣೆ ಬಂದ್ಬಿಟ್ರೆ ಪರದಾಟ ತಪ್ಪಿದ್ದಲ್ಲ. ಮೈತುಂಬ ಆ ದಿನಾಚರಣೆಯ ಪಟಗಳನ್ನು ಅಂಟಿಸಿಕೊಂಡು ಯಾವುದನ್ನ ತೋರಿಸ್ಲಿ ಯಾವುದನ್ನ ಬಿಡ್ಲಿ ಅಂತ ಇಡೀ ದಿನ ಕಣ್ಕಣ್ಣು ಬಿಡ್ತಾ ಇದ್ಬಿಡುತ್ತೆ ಪಾಪ.

ಇನ್ನು ಯಾರಾದ್ರೂ ಸ್ವಲ್ಪ ಫೇಮಸ್ ಆದವ್ರು ಏನೋ ಆಗಿ ಸಾವನ್ನಪ್ಪಿದ್ರೆ ಥೇಟ್ ರಸ್ತೆ ರಸ್ತೆಗಳ ಮೂಲೆಗಳಲ್ಲಿ ನೇತಾಡುವ “ಭಾವಪೂರ್ಣ ಶ್ರದ್ಧಾಂಜಲಿ” ಗಳಂತೆ ಆಗುತ್ತೆ ಈ ನಮ್ ಫೇಸ್ಬುಕ್ ನ ಇಡೀ ಗೋಡೆ. ಆರ್ ಐ ಪಿಗಳ ಸರಮಾಲೆ ಎಷ್ಟುದ್ದ ಬೆಳೆದರೂ ಸಾಲದೇ ಸಾಲದು. ಯೋಧರ ಅಂತಿಮ ದರ್ಶನದ ಚಿತ್ರಗಳಂತೂ ನೋಡುಗರ ಕಣ್ಣಲ್ಲಿ ನೀರು ತರಿಸದೆ ಬಿಡಲು ಸಾಧ್ಯವೇ ಇಲ್ಲ ಎಂದು ಹಠ ತೊಟ್ಟಂತೆ ಕಾಣುತ್ತವೆ.

ಕೆಲ ಮಹಾನುಭಾವರು ತಮ್ಮದೇ ಮುಖಾರವಿಂದದ ಫೋಟೊಗಳನ್ನು ಏನೇನೋ ಆಂಗಲ್ ನಿಂದ ಕ್ಲಿಕ್ಕಿಸಿ ಹೇಗಿದೆ, ಗುಡ್ಮಾರ್ನಿಂಗ್, ಗುಡ್ನೈಟ್ ಇತ್ಯಾದಿ ಬರೆದು ಫೇಸ್ಬುಕ್ ಮೇಲೆ ಬಿಸಾಟಿರುತ್ತಾರೆ. ಇದೇ ಕ್ಯಾಟಗರಿಯಲ್ಲಿ ಹ್ಯಾಪಿ ಸಂಡೇ, ಹ್ಯಾಪಿ ವೀಕೆಂಡ್ ಗಳಿಗೇನೂ ಬರ ಇಲ್ಲ.

ಫೋಟೋಶಾಪ್ ಬಂದ ಮೇಲಂತೂ ಛಾಯಾಚಿತ್ರಗಳ ಅಸಲೀಯತ್ತು ಎಲ್ಲಿ ಕಳೆದುಹೋಗಿದೆಯೋ ಆ ಫೋಟೋಶಾಪ್ ಬ್ರಹ್ಮನೇ ಬಲ್ಲ. ಯಾವುದೋ ಚಿತ್ರಕ್ಕೆ ಇನ್ಯಾವುದನ್ನೋ ಅಂಟಿಸಿ, ಮತ್ಯಾವುದನ್ನೋ ಕಿತ್ತು ಹಳವಂಡ ಮಾಡಿಟ್ಟು ನೋಡಿದವರ ತಲೆ ಮೊಸರನ್ನ ಆಗುವಂತೆ ಮಾಡುವುದು ಫುಟ್ ಪಾತ್ ಮೇಲೆ ನಡೆದುಕೊಂಡು ಹೋದಷ್ಟೇ ಸಲೀಸಾಗಿಬಿಟ್ಟಿದೆ.

facebook doorಇಷ್ಟರ ಮಧ್ಯೆ ಯಾರೋ ಯಾವತ್ತೋ ಹಾಕಿದ್ದ ಮದುವೆದೋ ಇನ್ಯಾವುದೋ ಫೋಟೋ ವರ್ಷಾನುಗಟ್ಟಲೆ ಹಳೆಯದಾದ್ರೂ ಒಬ್ಬೊಬ್ಬರು ಲೈಕ್, ಕಮೆಂಟ್ ಕೊಟ್ಟಾಗಲೂ ನೀರಿನಲ್ಲಿ ಮುಳುಗಿಸಿಟ್ಟ ಬಲೂನು ಮೇಲೆ ತೇಲುವಂತೆ ಅವಾಗವಾಗ ಮೇಲೆ ಕಾಣಿಸಿಕೊಳ್ಳುತ್ತವೆ.

ಹೀಗೆಲ್ಲಾ ಹೇಳಿದ ಮಾತ್ರಕ್ಕೆ ಇಲ್ಲಿ ಒಳ್ಳೆಯದು ಏನೂ ಇಲ್ಲವೆಂದಲ್ಲ, ಹೊಟ್ಟೆ ಹುಣ್ಣಾಗುವಂತೆ ನಗಿಸಬಲ್ಲ ಬರಹ, ಫೋಟೊ, ವಿಡಿಯೋಗಳಿವೆ. ಗೊತ್ತಿಲ್ಲದ ಎಷ್ಟೋ ವಿಷಯಗಳನ್ನು ತಿಳಿದುಕೊಳ್ಳಬಹುದು. ಜಂಜಾಟದ ಜೀವನದಲ್ಲಿ ಕಳೆದುಹೋಗಿದ್ದ ಸ್ನೇಹಿತರೊಂದಿಗೆ ಮತ್ತೆ ಸಂಪರ್ಕ ಸಾಧಿಸಬಹುದು.

ಇದರ ಸಂದಿಗೊಂದಿಗಳಲ್ಲಿ ಅಲ್ಲಲ್ಲಿ ಒಂದೊಂದು ನ್ಯೂಸ್ ತುಣುಕುಗಳು. ಪೊಲೀಸರ ಪ್ರಕಟಣೆಗಳು. ಇನ್ನು ಕೆಲವು ಜಾಹಿರಾತುಗಳು.

ನಾವೇ ಬರೆದ ಪೋಸ್ಟ್ ನಮಗೇ ಕಾಣದಂತೆ ಕ್ಷಣಾರ್ಧದಲ್ಲಿ ಮಾಯ ಮಾಡಿಬಿಡಬಲ್ಲ ಅವಧೂತ ಶಕ್ತಿಯೂ ಈ ಫೇಸ್ಬುಕ್ಕಿಗಿದೆ.
ಮರ್ತಿದ್ದೆ, ಚುನಾವಣಾ ಪ್ರಚಾರಕ್ಕೂ ಇದೇ ವೇದಿಕೆ ಸ್ವಾಮಿ!

ಅಯ್ಯೋ ನನ್ನ ಈ ಹೆಬ್ಬೆರಳು ಇನ್ನೂ ಏನೇನನ್ನ ಸ್ಕ್ರಾಲ್ ಮಾಡ್ಬೇಕೋ, ಈ ಕಣ್ಣುಗಳು ಏನೇನೆಲ್ಲಾ ನೋಡ್ಬೇಕೋ. . .

‍ಲೇಖಕರು Admin

June 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: