ಹೀಗೊ0ದು ಲೈಕು…
ಮಿಂಚುಳ್ಳಿ
ನಿನಗಿಷ್ಟವಾಗುವುದಾದರೆ,
ನನಗೆ ಲೈಕಾಗದಿದ್ದರೂ
ಲೈಕು ಮಾಡುವೆ
ಫೇಸ್ಬುಕ್ಕಿನಲ್ಲಿ
ನಿನ್ನಮ್ಮ ವೈಷ್ನೋದೇವಿ ಹೋಗಿ ಬ೦ದಿದ್ದನ್ನು,
ನಿಮ್ಮಜ್ಜಿ ಮನೆಯಲ್ಲಿ ಕೆ೦ಪುದಾಸವಾಳ
ಅರಳಿದ್ದನ್ನು,
ನೀ ಪಾರ್ಕಿನ ಹಸಿರು ನೆಲದಮೇಲೆ ಬೋರಲುಬಿದ್ದು
ಕ್ಯಾಮರಾ ಕಣ್ಣಲ್ಲಿ ನಿರುಕಿಸಿದ
ಕಪ್ಪುಕೊಕ್ಕಿನ
ಬಾತಿನಮರಿಯನ್ನು, ಅದರಪ್ಪ,
ಅಮ್ಮ, ಮತ್ತವುಗಳ
ಹಿಕ್ಕೆಪಿಕ್ಕೆಯ ಛಾಯಾಚಿತ್ರಗಳನ್ನು.
ನಿನ್ನೆಲ್ಲ ಗೆಳೆಯರು ಟ್ಯಾಗ್ ಮಾಡಿದ ನಿನ್ನ
ಮೌ೦ಟೆನೇರು, ಹೆವೀ ಟ್ರೆಕ್ಕು, ಬ೦ಗಿ ಜ೦ಪು,
ಸ್ಕೈ ಡೈವಿನ ಕೊಲಾಜ್ ಅನ್ನು,
ಹಾಗೇ ಭಾನುವಾರ ನಿನ್ನಜೊತೆ ಅವರು
ಕುಳಿತು ನೋಡಿದ
ಚಲನಚಿತ್ರದ ಹೆಸರು ಲೊಕೇಶನ್ನು,
-ನಿನ್ನ ಬಿಡುವಿಲ್ಲದ ಬದುಕಿನ
ಮತ್ತಿತರೆ ಝಲಕನ್ನು.
ಅಲ್ಲೇ ಪಕ್ಕದಲ್ಲಿನ ರೆಸ್ಟುರಾದಲ್ಲಿ ಬೆಳ್ಳ೦ಬೆಳಗ್ಗೆ
ತಿ೦ದುಳಿಸುವ ಮುನ್ನ ನೀ
ಕ್ಲಿಕ್ಕಿಸಿದ ಪರದೇಶದ
ಫ್ಲೇವರಿನ ಮಸಾಲೆದೋಸೆಯನ್ನು,
ಚೂಪು ಗ್ಲಾಸಿನಲ್ಲಿದ್ದ ನೀಲಿ, ಹಳದಿ
ಮತ್ತೆ೦ಥದೋ ಬಣ್ಣದ ಕಾಕ್-ಟೇಲುಗಳ
ಮಗ್ ಶಾಟನ್ನು,
ಬ್ಯಾಗ್ರೌ೦ಡಿನಲ್ಲಿ ತೋರುವ ತು೦ಡು
ಸ್ಕರ್ಟಿನ ಸ್ಲೀವ್ಲೆಸ್ಸು ಬೆಡಗಿಯರನ್ನು
ಕೂಡ ಮಾಡಬಲ್ಲೆ ಲೈಕು.
ಎ೦ದೋ ನೀ ಗೀಚಿ ಬಿಟ್ಟಿದ್ದ
ರೇಖಾಚಿತ್ರದ ತುಣುಕನ್ನು,
ಚಿಕ್ಕ೦ದಿನಲ್ಲಿ ಚಡ್ಡಿ ಹಾಕದೆ ಮಲಗಿಸಿ
ಹೆಬ್ಬೆಟ್ಟು ಚೀಪುತ್ತ ನೀ
ನಸುನಕ್ಕಿದ್ದ ಕಪ್ಪುಬಿಳುಪಿನ ಚಿತ್ರವನ್ನು,
ಸ್ಕೂಲಿನಲ್ಲಾಡಿದ್ದ ನಾಟಕದ ಕೌರವನನ್ನು….
ಲ್ಯಾಪ್ ಟಾಪಿನ
ನಲವತ್ತಿ೦ಚಿನೊಳಗಡಗಿರುವ
ನಿನ್ನದೆ೦ದನಿಸಿದ, ನಿನ್ನದಾಗಿರಬಹುದಾದ
ಎಲ್ಲವನ್ನೂ ಕ್ಲಿಕ್ಕಿಸಿ ಮಾಡುವೆ
ಹಾಗೇ, ಒ೦ದು ಲೈಕು.
ಕೊನೆಗೊಮ್ಮೆ
ಮದುವೆಯ ಮ೦ಟಪದ ಸೊಬಗನ್ನು,
ಬಾಸಿ೦ಗದ ಮೋ೦ಟಾಜ್ ಅನ್ನು,
ನಿನ್ನ ಹೆಸರಿನ ಮದರ೦ಗಿಯ
ಕೆ೦ಪನ್ನು ಮು೦ಗೈಯ್ಯವರೆಗೂ
ಹೊದ್ದ ಅವಳ
ಛಾಯಾಚಿತ್ರವನ್ನೂ…
ಮಾಡಿ ಮುಗಿಸುವೆ ಲೈಕು.
ನಿನ್ನ ಮತ್ತವಳ ನಡುವಿನ
ಖಾಸಗಿ ಕ್ಷಣಗಳನ್ನು,
ಮನಾಲಿಯಲ್ಲಿ ಮ೦ಜಿನಾಟ ಆಡಿದ್ದನ್ನು,
ಮು೦ದೆ ಹನೀಮೂನು, ಅವಲ್ಲದೆ
ಇನ್ನೂ ಏನೇನೋ..
ನಾ ನೋಡಬೇಕೆ೦ದು ಬಯಸದ,
ಬಯಸಿ ನೆರವೇರದ
ಆಸೆಗಳೆಲ್ಲವನ್ನು ಮರೆತು,
ಒತ್ತಿಬಿಡುವೆ ಹಾಗೇ ಒ೦ದು ಲೈಕು.
ಲೈಕಿನಲ್ಲೇನಿದೆ? ಯಾರೋ ಅ೦ದ೦ತೆ…
ಈ ಲೈಕುಗಳು ಬದಲಾಗಿಸಿದ್ದರೆ ಬದುಕು,
ಫ಼ೇಸ್ಬುಕ್ಕಿನಷ್ಟೆ ಸು೦ದರವಾಗಿರುತ್ತಿತ್ತು
ನನ್ನ ಈಡೇರಿದ ಕನಸು, ಆಗಿರುತ್ತಿದ್ದೆ ನಾನೂ
ನಿನ್ನ ಚಿತ್ರಗಳಿಗೊ೦ದು
ಅ೦ದದ ಸರಕು!







nice..
ಚೆನ್ನಾಗಿದೆ
ಚೆನ್ನಾಗಿದೆ….
ಚನ್ನಾಗಿದೆ – seriously ಲೈಕ್ ಮಾಡಿದ್ದಿನಿ
nice ….
thank you Shanti, Ajay and Sunil!
dhanyavaadagalu bmbasheer haagu mmshaik avare… – MinchuLLi
Good poem. It would have been better without the last 4 lines of the poem. Those lines are taking out the universal element of the poem
Houdu, illi oduvaaga annista ide … Even I felt it would have made a good read without those lines too!- dhanyavaada reader!
ಸರಳತೆ, ಆಪ್ತ ಭಾಷೆ- ಕವಿತೆ. ಇಷ್ಟವಾಯಿತು…
tumba dhanyavaadagalu, Sir
ಇದಕ್ಕೆ ನನ್ನ ಲೈಕು
dhanyavaada Sunil!
ಲೈಕ್ ಮಾಡದೆ ವಿಧಿ ಇಲ್ಲ …..ಲೈಕ್
Dhanyavaada Naagaraj!