ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಾಯದ ಹುಡುಗ, ಹುಡುಗಿಯರು ರಸ್ತೆಯಲ್ಲಿ ನಿಂತು..

ನಮ್ಮೂರು

ashish marali

ಆಶೀಷ್ ಮಾರಾಳಿ

 

…………
she lineartಕೋಮು ಗಲಭೆಯಲ್ಲಿ ಗಾಯಗೊಂಡವನ ಹೆಂಡತಿ
ಹೆತ್ತಿದ್ದಾಳೆ
ತೊಟ್ಟಿಲು ಶಾಸ್ತ್ರದ ದಿನ ಯಾವ ಧರ್ಮದೊಂದಿಗೂ
ತಳಕು ಹಾಕದ ಮಗುವಿಗೊಂದು ಹೆಸರು ಸಿಗದೇ
ತಲೆ ಮೇಲೆ ಕೈಹೊತ್ತು ಕೂತಿದ್ದಾಳೆ
…………………………

ಪ್ರಾಯದ ಹುಡುಗ, ಹುಡುಗಿಯರು ರಸ್ತೆಯಲ್ಲಿ ನಿಂತು
ಮಾತಾಡುವುದನ್ನು ನಮ್ಮೂರಿನಲ್ಲಿ ಯಾರು ಸಹಿಸುವುದಿಲ್ಲ
ಎಂಭತ್ತು ಮನೆಗಳ ಊರಿಗೆ ಹನ್ನೆರಡು ಮೊಬೈಲ್ ರೀಚಾರ್ಜ್ ಅಂಗಡಿಗಳಿವೆ
………………………….

ಗ್ರಾಮೀಣ ಭಾಗದಲ್ಲಿ ಕ್ರಷಿ ಪಂಪ್ ಸೆಟ್ ಗಳಿಗೆ
ರಾತ್ರಿ ಮಾತ್ರ ನಿಯಮಿತ ವಿದ್ಯುತ್ ಸರಬರಾಜು ,
ಕಬ್ಬು ನೆಟ್ಟವನ ಹೆಂಡತಿ ಈ ವರ್ಷವೂ ಗರ್ಭಿಣಿಯಾಗುವುದು ಅನುಮಾನ
………………..
B T ತಳಿ ಬದನೆಯಿಂದ ದೇಶಿ ಮಟ್ಟು ಗುಳ್ಳ ತಳಿ
ಬದನೆ ನಶಿಸಿಹೋಗುತ್ತದೆ ಎಂದು ಹಗಲಿಗೆ ಪ್ರತಿಭಟನೆ ಮಾಡಲಾಯ್ತು
ರಾತ್ರಿಗೆ k f c ಚಿಕನ್ ತರಲಾಯ್ತು
…………….
ನಮ್ಮೂರಿನ ಲೇಡಿಸ್ ಟೈಲರ್ ಕೈಗುಣ ತುಂಬಾ ಒಳ್ಳೆಯದು
ಹಂಚಿಕಡ್ಡಿಯಂತ ಹುಡುಗಿಯರಿಗೆ ಹೊಲಿದು ಕೊಟ್ಟ
ಮದುವೆ ಬ್ಲೌಸ್ ವರ್ಷದ ವಳಗೆ ಟೈಟ್ ಆಗುತ್ತದೆ

‍ಲೇಖಕರು Admin

6 June, 2016

4 Comments

  1. Sangeeta Kalmane

    ಕೊನೆಯದು ಮುಗುಳು ನಗು!☺

  2. Viny.nayak

    Sakath agide..

  3. ಹಜರತ್ಅಲಿ ದೇಗಿನಾಳ

    ಅನೂಹ್ಯ ಆಯಾಮ ಇತ್ಯಾದಿ ಹಳವಂಡಗಳಿಂದ ದೂರ ನಿಂತಿರುವ ಈ ಕವಿತೆ ಬಹಳ ಸುಂದರವಾಗಿದೆ.

  4. ಆದಿವಾಲ ಗಂಗಮ್ಮ

    ಭಿನ್ನ ಪ್ರಯತ್ನ, ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading