ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಥಮ್ ಬುಕ್ಸ್ : ಗುಮ್ಮ‍ಣ್ಣ ಗುಮ್ಮಣ್ಣ..

ಗುಮ್ಮ ಅನ್ನೋ ಪದಕ್ಕೆ ಬಹುಶಃ ಶತಶತಮಾನಗಳಿಂದ ಪರ್ಯಾಯವೇ ಇಲ್ಲವೇನೋ?

ಅದರ ಭಾವಕ್ಕೆ ಇಂದಿಗೂ ಚ್ಯುತಿ ಬರದಂತೆ ಅದೇ ಅಭಿವ್ಯಕ್ತಿಯಲ್ಲಿ ಕಂದಮ್ಮಗಳನ್ನು ಹೆದರಿಸುವ ಪರಿಪಾಠ ಇವತ್ತಿಗೂ ಅಷ್ಟೇ ಜನಜನಿತ.

ಆದರೆ, ‘ಪ್ರಥಮ್ ಬುಕ್ಸ್’ನ ಗುಮ್ಮಣ್ಣ ಸ್ವಲ್ಪ ವಿಚಿತ್ರದವನು.

ಅವನು ಇಲ್ಲೊ, ಅಲ್ಲೊ ಎಲ್ಲೆಲ್ಲೂ ಇರಬಹುದು.

ಅಷ್ಟೇ ಏಕೆ, ನಿಮ್ಮ ಕೂದಲಲ್ಲೂ ಅಡಗಿರಬಹುದು.

ಈ ಗುಮ್ಮನ ಹಲ್ಲು ಮುರಿದವರಾರು ನಿಮಗ್ಗೊತ್ತಾ?

ಅವನ ಕೈ ತುಂಬಾ ಕೂದಲು, ಪೆಪ್ಪರಮೆಂಟನ್ನು ಅವನು ಹೇಗೆ ಅಗಿಯೋದು ಅಂತ ನೀವೂ ನೋಡಿ.

ಸಿಡುಕು ಮುಸುಡಿಯ ಈ ಗುಮ್ಮಣ್ಣನ ಹತ್ತಿರ ನೀವೇನಾದರೂ ಸುಳಿದೀರಿ ಜೋಕೆ..

ಯಾಕೆಂದರೆ ಅವನ ಹತ್ತಿರ ಗಬ್ಬು ವಾಸನೆ!

ಹಾ ಹುಷಾರು! ಹಸಿದ ಈ ಗುಮ್ಮಣ್ಣನಿಗೆ ನಿಮ್ಮ ಕೈ ಕಾಲೇ ಚಕ್ಕುಲಿ!

ಇನ್ನೂ ಏನೇನೆಲ್ಲಾ ಮಾಡ್ತಾನೆ ಈ ಗುಮ್ಮ ಅಂತ ಇಲ್ಲಿ ನೋಡಿ, ಅದೂ ಮಜಾ ಕೊಡುವ ಜಿಫ್‌ ಫಾರ್ಮಾಟಿನಲ್ಲಿ.

 

‍ಲೇಖಕರು nalike

23 May, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading