ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರಕಾಶ್‍ ಕೊಡಗನೂರ್ ಹೊಸ ಕವಿತೆ- ಮಹಿಮೆ

ಪ್ರಕಾಶ್‍ ಕೊಡಗನೂರ್

**

ಅವಳ ನೆನಪಾದೊಡನೆ

ಸುಡುವ ಬಿಸಿಲಿನಲ್ಲೂ

ತಂಪಾಗಿಬಿಡುತ್ತೇನೆ

ಅವಳ ನೆನಪಾದೊಡನೆ

ಗಾಢ ಕತ್ತಲೆಯಲ್ಲೂ

ಬೆಳಕಾಗಿಬಿಡುತ್ತೇನೆ

ಅವಳ ನೆನಪಾದೊಡನೆ

ಸುರಿವ ಮಳೆಯಲ್ಲೂ

ಒಣಗಿಬಿಡುತ್ತೇನೆ

ಅವಳ ನೆನಪಾದೊಡನೆ

ಕೊರೆವ ಚಳಿಯಲ್ಲೂ

ಬೆಚ್ಚಗಾಗಿಬಿಡುತ್ತೇನೆ

ಅವಳ ನೆನಪಾದೊಡನೆ

ಜಾರುವ ವಯಸ್ಸಿನಲ್ಲೂ

ಹದಿಹರೆಯದವನಾಗಿಬಿಡುತ್ತೇನೆ

ಅವಳ ನೆನಪಾದೊಡನೆ

ಕಾಡುವ ಬೇನೆಯಲ್ಲೂ

ಉಲ್ಲಸಿತನಾಗಿಬಿಡುತ್ತೇನೆ

ಅವಳ ನೆನಪಾದೊಡನೆ

ಬರಗೆಟ್ಟ ಬದುಕಿನಲ್ಲೂ

ಉಸಿರಾಗಿಬಿಡುತ್ತೇನೆ

‍ಲೇಖಕರು avadhi

20 December, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading