ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ವಿ ಸಿಂಧು ದೇಶದ ರಾಷ್ಟ್ರಗೀತೆಯನ್ನು ಮೊಳಗಿಸಿದ ಕ್ಷಣದಲ್ಲಿ..

ಸುಧಾ ಆಡುಕಳ

ನಾಲ್ಕು ದಶಕಗಳ ಹಿಂದೆ ಸಾಲಲ್ಲಿ ಮೂರು ಹೆಣ್ಣು ಹೆತ್ತ ನನ್ನಮ್ಮ ತುಂಬಾನೇ ಅನುಭವಿಸಿರಬಹುದೇನೊ? ಆದರೆ ಅಪ್ಪ ನಮ್ಮನ್ನೆಲ್ಲ ತನ್ನ ಹೆಮ್ಮೆ ಎಂದುಕೊಂಡಿದ್ದು ನಮ್ಮೆಲ್ಲರ ಭಾಗ್ಯ.

ಅವನ ನಿರೀಕ್ಷೆಯನ್ನು ನಾವೆಂದೂ ಹುಸಿಗೊಳಿಸಲಿಲ್ಲ.ಕಡುಕಷ್ಟದ ದಿನಗಳಲ್ಲೂ ಅವನಿಗೆ ನೋವಾಗದಂತೆ ಬದುಕು ನಿರ್ವಹಿಸಿದೆವು. ಅಪ್ಪ ಬಸ್ ಹತ್ತಿದನೆಂದರೆ ಅಲ್ಲಿರುವ ಪರಿಚಿತರೆಲ್ಲರ ಟಿಕೇಟನ್ನೂ ಅವನೇ ತೆಗೆಯುತ್ತಿದ್ದುದು ರೂಢಿ. ಅಷ್ಟಾದರೂ ಪರಿಚಿತರಿಗೆ ಸಹಾಯವಾಗಬೇಕೆಂಬುದು ಅವನ ಆಸೆ. ಹಾಗೇ ತನ್ನ ಸುತ್ತಲಿನವರೆಲ್ಲ ಸೆಕ್ಯುರ್ ಎಂಬ ಭಾವವನ್ನು ಸದಾ ಮೂಡಿಸುತ್ತಿದ್ದ.

ನನಗೆ ಮೊದಲ ಸಂಬಳ ಬಂದಾಗ ಅವನೊಂದಿಗಿನ ಪ್ರಯಾಣದಲ್ಲಿ ನಾನು ಟಿಕೇಟ್ ತೆಗೆದಾಗ ಇಡೀ ಬಸ್ ಗೆ ಕೇಳಿಸುವಂತೆ, ” ಇಂದು ನನ್ನ ಜನ್ಮ ಸಾರ್ಥಕವಾಯ್ತು. ಎಲ್ಲರ ಟಿಕೇಟ್ ತೆಗೆಯುತ್ತಿದ್ದ ನನ್ನ ಟಿಕೇಟನ್ನೇ ನನ್ನ ಮಗಳು ತೆಗೆದಳು” ಎಂದು ಹೇಳಿದ್ದ. ನಮ್ಮ ಕುಟುಂಬದ ಏಕಮೇವ ಮಗಳು ಕೂಡಾ ಇಂದು ಅದೇ ಹಾದಿಯಲ್ಲಿದ್ದಾಳೆ.

ಈ ಹುಡುಗಿಯರೇ ಹಾಗೆ. ಎಷ್ಟು ಸಂಯಮದಿಂದ ಬದುಕನ್ನ ಕಟ್ಟಿಕೊಳ್ಳುತ್ತಾರೆ. ಮನೆಗೆ, ದೇಶಕ್ಕೆ ಹೆಮ್ಮೆ ತರುವ ಕೆಲಸ ಮಾಡುತ್ತಲೇ ಇರುತ್ತಾರೆ. ಸುಖದಲ್ಲಿ ಮೈತುಂಬಿಸಿಕೊಂಡು ಆರಾಮವಾಗಿರುವ ಅವರು ಕಷ್ಟ ಬಂದಾಗಿ ಮೈಕೊಡವಿ ಎದ್ದು ಬದುಕಿನ ಕೌದಿಯನ್ನು ನೇಯುತ್ತಾರೆ.

ಹೆಣ್ಮಕ್ಕಳು ಮನೆವಾರ್ತೆ ನೋಡಿಕೊಂಡಿರಲಿ ಎಂಬ ಉಪದೇಶದ ಕಾಲದಲ್ಲಿಯೂ ಪಿ. ವಿ. ಸಿಂಧು ದೇಶದ ರಾಷ್ಟ್ರಗೀತೆಯನ್ನು ಮೊಳಗಿಸಿದ ಕ್ಷಣದಲ್ಲಿ ಹೀಗೆಲ್ಲ ಅನಿಸಿತು. ಹೆಣ್ಣುಮಕ್ಕಳನ್ನು ಭೂಮಿಗೆ ಬರುವ ಮೊದಲೇ ಇಲ್ಲವಾಗಿಸಬೇಡಿ ಪ್ಲೀಸ್. ಅವರು ಖಂಡಿತ ನಮ್ಮ ಬದುಕನ್ನು ಬೆಳಗುತ್ತಾರೆ.

‍ಲೇಖಕರು AdminS

27 August, 2019

6 Comments

  1. Vasundhara k m

    ಚೆಂದ ಬರೆದಿದ್ದೀರಿ..

    • Sudha Hegde

      Thank u

  2. T S SHRAVANA KUMARI

    ತುಂಬಾ ಚೆನ್ನಾಗಿದೆ

    • Sudha Hegde

      Thank u for the response

  3. Parashivamurthy M.V.

    ತಿರಸ್ಕಾರ ಪಶ್ಚಾತ್ತಾಪಕ್ಕೆ ಕಾರಣ.
    ಹೆಣ್ಣನ್ನು ಕಾಣುವ ಮತ್ತು ನೋಡುವ ದೃಷ್ಟಿ ಬದಲಾಗಬೇಕು
    ಪೋಷಕರಿಗೆ ತಿಳಿಸಿರುವ ಸೊಗಸಾದ ಮಾತು ಇದು.

  4. Sudha Hegde

    ಹೌದು. ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading