ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಿ ನಂದಕುಮಾರ ಹೊಸ ಕವಿತೆ- ಒಂಟಿ ಹೂ

ಪಿ ನಂದಕುಮಾರ

**

ಈ ಓಣಿಯ ಕೊನೆಗಿರುವ ದಾರಿ ತಿರುವಿನಲ್ಲಿ 

ಹೂ ಅರಳಿರಬಹುದು

ಅದರ ನೆರಳು ನೀನೇ ಯಾಕಾಗಿರಬಾರದು?

ಹಗಲು-ಇರುಳಿನ ನಡುವೆ

ನೆಟ್ಟ ದೀಪಗಳ ಬೆಳಕು 

ಉಗುಳಿ ಹೋಗಿದ ಮೌನ 

ನೀನೇ ಯಾಕಾಗಿರಬಾರದು?

ಸುಡುವ ನೆತ್ತಿಯ ಮೇಲೆ

ಹಗಲ ಕಣ್ಣಿನ ಸೂರ್ಯ

ತೇಪೆ ಹೊಲೆದ ನೆರಳು

ಸುಳಿವಾತ್ಮ ನೀನೇ ಯಾಕಾಗಿರಬಾರದು?

ಬಿರಿದ ಒಂಟಿ ಹೂ

ಚೆಲ್ಲಿಹೋದ ಬಿಂಬ

ನೆನ್ನೆ ಹಗಲನು ಇಂದು ಮುಡಿಯಬಹುದೇ?

ಇದ್ದ ದಾರಿಯು ಬೇರೆ

ತುಳಿದ ದಾರಿಯು ಬೇರೆ

ಕೂಡುವಲ್ಲಿ ನಾವು

ಒಂದೇ ಆದೆವು

ಕ್ಷಣಕ್ಕೆ ಮಾಸಿದ ಗಾಯ

ಉಳಿಸಿ ಹೋಗಿದೆ ನೋವು

ನಗುವ ಚೆಲ್ಲುವವರು ಯಾರು

ದಿಟದ ದಾರಿಗೆ

‍ಲೇಖಕರು avadhi

29 February, 2024

1 Comment

  1. ಧರ್ಮಣ್ಣ ಎಚ್ ಧನ್ನಿ

    ಚೆಂದದ ಕವಿತೆಗಳು. ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading