ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಂಕ್ಚರ್ ಹಾಕೋಣಾ ಬನ್ನಿ..

ಇದು ಪ್ರತಿಭಾ ನಂದಕುಮಾರ್ ಹುಟ್ಟು ಹಾಕಿದ ವಿಶೇಷ ಕವಿತಾ ಸಾಹಸ.

ನಿನ್ನೆ ಸಂಸದ ತೇಜಸ್ವಿ ಸೂರ್ಯ ಪೌರತ್ವ ತಿದ್ದುಪಡಿ ಕಾಯಿದೆ ಸಮರ್ಥಿಸಿಕೊಳ್ಳುತ್ತಾ ‘ಎದೆ ಸೀಳಿದರೆ ಎರಡಕ್ಷರ ಇಲ್ಲದವರು, ಸೈಕಲ್ ಪಂಕ್ಚರ್ ಹಾಕುವವರು ಪ್ರತಿಭಟನೆ ನಡೆಸಿದ್ದಾರೆ’ ಎನ್ನುವ ಹೇಳಿಕೆ ಕೊಟ್ಟಿದ್ದರು

ಅದನ್ನು ವಿರೋಧಿಸಿ ಪ್ರತಿಭಾ ಫೇಸ್ ಬುಕ್ ನಲ್ಲಿ ಕೆಲವು ಸಾಲುಗಳ ಕವಿತೆಯನ್ನು ಪ್ರಕಟಿಸಿ ಅದನ್ನು ಮುಂದುವರಿಸುವಂತೆ ಇತರರಿಗೆ ಕೋರಿದ್ದರು.

ಅಂತೆಯೇ ಹಲವರು ಸ್ಪಂದಿಸಿದ ಕಾರಣ ಮೂಡಿಬಂದ ಕೂಡು ಕವಿತೆ ಇಲ್ಲಿದೆ- 

ಪ್ರತಿಭಾ ನಂದಕುಮಾರ್, ಸಂಧ್ಯಾ ರಾಣಿ, ಚಿದಂಬರ ನರೇಂದ್ರ, ಉಷಾ ಕಟ್ಟೆಮನೆ, ಗಿರಿಜಾ ಶಾಸ್ತ್ರಿ, ಜಯಶ್ರೀ ಜಗನ್ನಾಥ, ಎಲ್ ಸಿ ನಾಗರಾಜ್

ತವರೂರ ದಾರಿಯಲ್ಲಿ ಕಲ್ಲುಮುಳ್ಳುಗಳು ತುಂಬಿ
ನಡೆವ ಕಾಲುಗಳು ಓಡುವ ಕಾರುಸ್ಕೂಟರುಗಳು
ಪಂಕ್ಚರಾಗಿ ತಟಸ್ಥ ಸ್ಥಿತಿ ತಲುಪಿದೆ
ಪಂಕ್ಚರ್ ಹಾಕೋಣಾ ಬನ್ನಿ.

ಮಾತುಗಳ ಬಾಣಗಳು ಬದುಕುಗಳನ್ನು
ತಿವಿದು ಗಾಯಮಾಡುತ್ತಿವೆ
ನಂಬಿಕೆ ಪ್ರೀತಿಯ ಮುಲಾಮು ಹಚ್ಚಿ
ಪಂಚರ್ ಹಾಕೋಣ ಬನ್ನಿ

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ
ಈ ದುಷ್ಟ ಮನಸುಗಳಿಗೆ ಧಿಕ್ಕಾರ ಎನ್ನಿ
ಇವರು ಚುಚ್ಚಿ ನಿಲ್ಲಿಸಿರುವ ಬಹುತ್ವದ ಗಾಲಿಗೆ
ಪ್ರೀತಿ ಪ್ರೇಮದ ಅಂಟು ಹಚ್ಚಿ
ಪಂಕ್ಚರ್ ಹಾಕೋಣ ಬನ್ನಿ

ಎಷ್ಟು ಪಂಕ್ಚರ್ ಹಾಕಿದರೇನು
ಹಾದಿಯಲಿ ಕಲ್ಲು ಮುಳ್ಳು ಗಾಜು
ಪಂಕ್ಚರ್ ಹಾಕೋಣ ಖಂಡಿತಾ
ಆದರೆ ಗಾಡಿಗಳಿಗಲ್ಲ
ದೊಗರು ಬಿದ್ದ ರಸ್ತೆಗಳಿಗೆ
ಹರಕು ಆಶ್ವಾಸನೆಗಳಿಗೆ

ಗುರಿ ಬಹುದೂರವಿದೆ
ರಸ್ತೆಯೋ ಅನಂತದಂತ್ಯ
ಒಂದು ಪಂಕ್ಚರ್ನಿಂದೇನಾಯ್ತು
ಅಡಿಗಡಿಗೆ ಹೆಗಲೊಡ್ಡಬನ್ನಿ

ಚಕ್ರ
ಉರುಳುವುದು ಅದರ ಗುಣ.
ಮನುಕುಲದ ಮಹಾನ್ ಆವಿಷ್ಕಾರ.
ಉರುಳುವುದು ಅದರ ಗುಣ.
ಏರು ತಗ್ಗು ಕೊರಕಲು ಹೊಂಡ
ಕಾಲಚಕ್ರ ಉರುಳುತ್ತಲೇ ಇರುತ್ತದೆ.
ಚಕ್ರಗಳ ಮೇಲೆ ಮಹಲುಗಳು, ಮಂದಿರಗಳು , ಮಸೀದಿಗಳು.
ಚಕ್ರ ಬುನಾದಿ.
ರಥದ ಮೇಲೆ ಕುಳಿತಿರುವ ನೀ ದೊಡ್ಡವನಲ್ಲ.
ಚಕ್ರವನು ಕೆತ್ತಿ,ತಟ್ಟಿ,ತೀಡಿದವನೇ ಮೊದಲಿಗ.
ಅವನಿಲ್ಲದೆ ನೀನಿಲ್ಲ.
ಒಮ್ಮೆ ಬಾಗು
ನೀನೇ ಚಕ್ರವಾಗುವ ಪರಿ ನೋಡು!

ಮಲೆ ಮಾದೇಶ್ವರ ನಿಮಗೆ ಕಾಡಿನ ಹೆಜ್ಜೇನು ತುಪ್ಪ ಆರು ಬಳ್ಳ,

ಕಿರುಜೇನು ತುಪ್ಪ ಮೂರು ಬಳ್ಳ ಮತ್ತೆ ಕಂದ ಮೂಲಾದಿಗಳನ್ನ

ಕೊಟ್ಟು ಹರಸುವನು . ಆರು ಕಾಡುನಿಂಬೆ , ಮೂರು ನಾಡುನಿಂಬೆ ಹಣ್ಣ

ಕೊಂಬೆ ಮೇಲಿಂದ ಇಳಿಸಿ ತಂದು ರಸವ ಹಿಂಡಿ , ಅದಕ್ಕೆ ಜೇನು ತುಪ್ಪ ಬೆರೆಸಿ ,

ಬಿದಿರಿನಿಂದ ಕಡೆದ ಗೊಟ್ಟಕ್ಕೆ ತುಂಬಿ ಬಸವನಗುಡಿಯ ಶಿಶುಮಗನಾದ ಸೂರ್ಯನ

ಕಟಬಾಯಿಗೆ ಎತ್ತಿ ಕುಡಿಸಿರಿ , ಏರಿದ ಅಧಿಕಾರದ ಪಿತ್ತ ಇಳಿದು

ಉತ್ತಮ ನಾಲಿಗೆಯ ಪಡೆಯುವಂಥವನಾಗುವನು.

‍ಲೇಖಕರು avadhi

23 December, 2019

3 Comments

  1. prathibha nandakumar

    Beesu Suresha ಪಂಕ್ಚರು ಹಾಕೋಣ ಬನ್ನಿ…
    ಹರಿದ ನಾಲಿಗೆಗಳಿಗೆ…
    ದ್ವೇಷ ತುಂಬಿಕೊಂಡ ಹೃದಯಗಳಿಗೆ…
    ಸನಾತನ ವಿಷ ಗಿಡಿದುಕೊಂಡ ಮೆದುಳುಗಳಿಗೆ…
    ಪಂಕ್ಚರು ಹಾಕೋಣ ಬನ್ನಿ.
    ಮಾತಿನಲಿ ಮನೆ ಕಟ್ಟುವ ಕನಸು ಬಿತ್ತಿ,
    ಮತ್ತದೇ ಬಯಲು ಬಂದೀಖಾನೆ ಕಟ್ಟುವವರಿಗೆ…
    ಗೀತಾ ಪಠಣ ಮಾಡುತ್ತಾ,ವಸುಧೈವ ಕುಟುಂಬಕಂ ಎನ್ನುತ್ತಾ
    ದನಿ ಇಲ್ಲದ ಜನಗಳ ಗೋಣು ಮುರಿಯಲು
    ಮಚ್ಚು ಮಸೆಯುವವರಿಗೆ
    ಪಂಕ್ಚರು ಹಾಕೋಣ ಬನ್ನಿ.

  2. prathibha nandakumar

    Savitha Nagabhushana Smg ಜೀವದುಸಿರು ಹಾರಿ ಹೋಗದಂತೆ ಭರವಸೆಯ ಬಲೂನು ಎಂದೂ ಒಡೆಯದಂತೆ…ಬನ್ನಿ ಪಂಕ್ಚರ್ ಹಾಕೋಣ !

  3. Kirana

    First, what Tejaswi Surya said was not right and it is clearly derogatory.
    But, in the excitement to critic that these bunch of wanna be politically correct and nice to everyone bunch of motley fools are acting as is their normal selves without realizing the far reaching effects of this whole CAA/NRC exercise and how far reaching it is. Either they should have a vision or a capacity to see the big picture or should educate before speaking.
    What these rioters (not protesters) are asking is to grant citizenship to every individual who has crossed Indian borders until today (which as per estimates is close to 5-6 crores) as against the proposed grant of citizenship to religiously persecuted minorities from neighbor countries (which probably is in some lakhs). There are a bunch of ignorant loud mouthed celebrities, posing intellectuals, usual liberal media gang, INC, TMC and all other usual suspects who are supporting these street vandals and rioters directly and indirectly, some have agendas, while some have absolutely no clue why they are supporting this.
    Granting citizenship to all illegal immigrants, of which probably 99% are muslims will change Indian demography drastically and dramatically, unless they are purged using NRC. Once this demographical distribution is skewed in favor of Muslims, what happened in Kashmir in early 90s will happen all over country, then these people and their future generations will not be spared either!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading