ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನೆಮ್ಮದಿಯಷ್ಟೇ ಸಾಕು

ಅಕ್ಷಯ ಕಾಂತಬೈಲು

ಮುಂಜಾನೆ ಬೆಳಕಲಿ
ರಾತ್ರಿಯ ಕತ್ತಲಲಿ
ಅವಳ ನೆನಪು
ಗಾಢವಾಗುವುದು

ಕತ್ತಲಿನ ಅವಳ ಸ್ಪರ್ಶ
ಮತ್ತು ಬೆಳಗಿನ ವಿರಹ
ಎರಡೂ ಮಧುವಿನಂತೆ
ಇತ್ತು
ಅಥವಾ ನಾನು ಸ್ವೀಕರಿಸಿದ
ರೀತಿಯಲ್ಲಿ ಮಾತ್ರ ಸಿಹಿ
ಇತ್ತು

ಮತ್ತೂ ಇಬ್ಬರಲ್ಲಿತ್ತು
ಜೀವಂತ ಲಯಕ್ಕಾಗಿ
ಹೋರಾಟ
ನಮಗೇ ಗೊತ್ತಿಲ್ಲದಂತೆ
ಹುಡುಕಿದೆವು ಅವಕಾಶಗಳ
ನಡುವಿನ ಅರ್ಥ
ಅದಕೂ ಮುಂಚೆ
ತಡಕಾಡಿದ್ದು ಬೇಡಬಿಡಿ

ಅವಳು ದಣಿದಳು
ನಾನು ಸೋತೆ
ಎಲ್ಲೀಂತ ಹೇಗಂತ ಯಾಕಂತ
ಯೋಚಿಸಬಹುದು
ಅವಳ ಸಣ್ಣಮಟ್ಟಿನ
ಸಾಕ್ಷಿ ಈ ಕವಿತೆಯಲ್ಲಿ
ಇರಬಹುದು
ಸಾಕಿಷ್ಟು ಹೂಂ…
ಈಗ ನೆಮ್ಮದಿ ಅನಿಸುತ್ತಿದೆ

‍ಲೇಖಕರು admin

27 March, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading